ಕತ್ತರ್:SKSSF ಕತ್ತರ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ಅಝೀಝಿಯಾದಲ್ಲಿ ನಡೆದ SKSSF ಮೀಟ್ ಕಾರ್ಯಕ್ರಮ ನಡೆಯಿತು.ಬಹು. ಮೊಹಮ್ಮದ್ ಅಝ್ಹರಿ ಅವರ ದುಆದೊಂದಿಗೆ ಚಾಲನೆಗೊಂಡ ಸಂಗಮದಲ್ಲಿ SKSSF ಕತ್ತರ್ ಕರ್ನಾಟಕ ರಾಜ್ಯ ಅಧ್ಯಕ್ಷರು ಜನಾಬ್ ರಶೀದ್ ಎ ಹಮೀದ್ ಕಕ್ಕಿಂಜೆ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
“ಉತ್ತರ ಕರ್ನಾಟಕದಲ್ಲಿ ದೀನಿನ ಪ್ರಾಥಮಿಕ ಅರಿವು ಮೂಡಿಸಲು ಕೂಡ ವ್ಯವಸ್ಥೆಗಳಿಲ್ಲದೆ,ಅಂಧಕಾರದಲ್ಲಿ ಬೆಳೆಯುತ್ತಿರುವ ಕುಗ್ರಾಮಗಳಲ್ಲಿ ಮದ್ರಸ ಮಸೀದಿಗಳನ್ನು ಸ್ಥಾಪಿಸಿ ದೀನೀ ಪರಿಜ್ಞಾನ ಇರುವ ಸಮಾಜವೊಂದರ ನಿರ್ಮಾಣಕ್ಕಾಗಿ ನಾಶನಲ್ ಮಿಶನ್ ಪಣತೊಟ್ಟಿದೆ ಹಾಗೂ ಅವರೊಂದಿ ನಾವು ಕೈ ಜೋಡಿಸಬೇಕಾಗಿದೆ,ಅದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು”
SKSSF ಕತ್ತರ್ ಸಮಿತಿ ಕೋವಿಡ್ ಸಮಯದಲ್ಲಿ ನಿಶ್ಯಬ್ದ ಸೇವೆಯ ಕಾರ್ಯವೈಖರಿಯನ್ನು ಪ್ರಶಂಸಿದರು.
ಪ್ರತಿ ಶುಕ್ರವಾರ ನಡೆಯುವ ಫ್ರೈಡೆ ಆನ್ಲೈನ್ ಕ್ಲಾಸ್ ಕಾರ್ಯಕ್ರಮಕ್ಕೆ ತಪ್ಪದೆ ಎಲ್ಲಾ ಕಾರ್ಯಕರ್ತರು ಭಾಗವಯಿಸಲು ಮತ್ತು ಕತ್ತರ್ ಸಮಿತಿಯನ್ನು ಉನ್ನತ ಮಟ್ಟಕ್ಕೆ ತಲುಪಿಸಲು ಕೈ ಜೋಡಿಸಲು ವಿನಂತಿಸಿದರು.
SKSSF ಕತ್ತರ್ ಸಮಿತಿಗೆ ಶಕ್ತಿ ತುಂಬಲು ನಾಲ್ಕು ವಲಯಗಳಾಗಿ ರೂಪಿಸಲಾಯಿತು (ಪುತ್ತೂರು,ಕೊಡಗು,ಬೆಳ್ತಂಗಡಿ,ಉಳ್ಳಾಲ),ಮಹಮ್ಮದ್ ಇಲ್ಯಾಸ್ ಕರಾಯ, ಷರೀಫ್ ಕಕ್ಕಿಂಜೆ, ಇಕ್ಬಲ್ ಪುತ್ತೂರು, ರಝಕ್ ಸಾಂಬಾರ ತೋಟ, ಉಸ್ಮಾನ್ ಕಕ್ಕಿಂಜೆ, ಸಿರಾಜ್ ಕೋಲ್ಪೆ,ಸಫ್ವಾನ್,ಶಾಫಿ ಪುತ್ತೂರು, ಯಾಹ್ಯಾ ಮುಬಾರಕ್ ಪುತ್ತೂರು, ಖಾಲಿದ್ ಕಬಕ,ರಫೀಕ್ ಕಕ್ಕಿಂಜೆ, ನಾಸಿರ್ ಸಾಂಬಾರ ತೋಟ,ಅಹ್ಮದ್ ನಿಝರ್ ಪುತ್ತೂರು, ಫೈಝಲ್ ಪಡುಬಿದ್ರೆ ಎಂಬ ಪ್ರಮುಖರು ಸಂಗಮದಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ ಅಬ್ದುಲ್ ರಝಾಕ್ ಸಾಂಬಾರ್ ತೋಟ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.