ಉತ್ತರಪ್ರದೇಶ: ಕಾಶಿನಾಥ್ ಗೆ ಪ್ರಧಾನಿ ಮೋದಿ ಇಂದು ಭೇಟಿ ನೀಡಿದ್ದು ಸಾಲು-ಸಾಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಇಂದು ಬಾಗವಹಿಸಿದರು.
ಒಂದು ಕಡೆ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬಂದಿದ್ದರಿಂದ ಮೋದಿಗೆ ದೇವರ ಜಪ ಹೆಚ್ಚಾಗಿದೆ ಎಂದು ವಿರೋಧ ಪಕ್ಷಗಳು ಹೇಳಿಕೊಂಡಿದ್ದು.
ಇತ್ತ ಬಿಜೆಪಿ ನಾಯಕರು ಭಾರತದ ಸಾಂಸ್ಕೃತಿಕ ಹಾಗೂ ಅದ್ಯಾತ್ಮಿಕತೆಯ ಪುನರುಜ್ಜೀವನಕ್ಕಾಗಿ ಪಣತೊಟ್ಟ ಮಹಾಯೋಗಿ ಮೋದಿ ಎಂದು ಬಣ್ಣಿಸಿದ್ದಾರೆ.
ಕಾಶಿಪುರ ಮಠದ ಕಾರ್ಮಿಕರು ಕುಳಿತುಕೊಂಡ ಒಂದು ಕಡೆಗೆ ಪ್ರಧಾನಿಗಳು ನೇರವಾಗಿ ತೆರಳಿ ಅವರ ಜೊತೆಯೇ ಕುಳಿತಿದ್ದು ಕೇಂದ್ರ ಸಚಿವರುಗಳು ಇದು ಸಂಭ್ರಮದ ಮತ್ತು ಅಭಿಮಾನದ ನಿಮಿಷಗಳಾಗಿವೆ
ಮತ್ತು ಕಾರ್ಮಿಕರೊಂದಿಗೆ ಕರ್ಮ ಯೋಗಿ ಎಂದು ಬಣ್ಣಿಸಿದ್ದಾರೆ.