ಕೃತಿ ಸನೋನ್ ಬಾಲಿವುಡ್ ನಲ್ಲಿ ಬಹಳ ಹೆಸರು ಮಾಡಿದಂತಹ ನಟಿ. ಇತ್ತೀಚೆಗೆ ಬಿಡುಗಡೆಯಾದ ದಿನ ಮಿಮೀ ಚಿತ್ರವು ಬಹಳ ಹೆಸರು ಮಾಡಿತ್ತು. ಅದರಲ್ಲಿ ಕೃತಿ ಸನೋನ್ ಅವರ ನಟನೆಯು ಕೂಡ ತುಂಬಾನೇ ಅದ್ಭುತವಾಗಿ ಬಂದಿತ್ತು. ಇವರ ನಟನೆಗೂ ಕೂಡ ಬಹಳ ಪ್ರಶಂಸೆಗಳನ್ನು ವ್ಯಕ್ತಪಡಿಸಲಾಗಿತ್ತು. ಇವರ ಸಂಭಾವನೆ ಕೂಡ ಹಿಂದಿ ಚಿತ್ರರಂಗದಲ್ಲಿ ಬಹಳ ದೊಡ್ಡ ಮಟ್ಟದ್ದು. ಆದರೂ ಸಹ ಇವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ .
ಹೌದು ಕೃತಿ ಸನೋನ್ ಅವರು ಬಾಲಿವುಡ್ ನ ಬಿಗ್ ಬಿ ಎಂದೇ ಹೆಸರಾದ ಸ್ವತಃ ಅಮಿತಾಭ್ ಬಚ್ಚನ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರೆ. ಈಗ ಇವರು 2ಬಾಡಿಗೆಗೆ ತೀರಿಕೊಂಡಿದ್ದಾರೆ ಇವರು ಪ್ರತಿ ತಿಂಗಳು ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ಬಾಡಿಗೆ ನೀಡುತ್ತಾರೆ. ಇವರು 2 ವರ್ಷಗಳ ಕಾಲ ಈ ಬಾಡಿಗೆ ಮನೆ ಬೇಕು ಎಂದು ಹೇಳಿದ್ದಾರೆ. ಇವರು ಸೆಕ್ಯೂರಿಟಿ ಡೆಪಾಸಿಟ್ ಗೆ ಎಂದು ಅರುವತ್ತು ಲಕ್ಷ ರೂ ಗಳನ್ನು ನೀಡಿದ್ದಾರೆ. ಇವರು ಇಷ್ಟು ದೊಡ್ಡ ಪ್ರಖ್ಯಾತ ನಟಿಯಾದರು ತಮ್ಮದೇ ಆದ ಸ್ವಂತ ಮನೆಯನ್ನ ಮುಂಬೈನಲ್ಲಿ ಹೊಂದಿಲ್ಲ.
ಇವರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಆದರೆ ಇವರ ಬಾಡಿಗೆ ಮೊತ್ತದಲ್ಲಿಯೇ ಜನಸಾಮಾನ್ಯರು ದೊಡ್ಡ ಮನೆಯನ್ನು ಕಟ್ಟಬಹುದು. ಆದರೆ ಇವರು ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ ತನ್ನ ಸ್ವಂತ ಪ್ರತಿಭೆಯಿಂದ ಮುಂಬೈಗೆ ಬಂದು ಸಿನಿಮಾಗಳಲ್ಲಿ ಕೆಲಸಗಳನ್ನು ಹುಡುಕಿಕೊಂಡು ಇವತ್ತು ದೊಡ್ಡ ಬಹುಬೇಡಿಕೆಯ ನಟಿಯಾಗಿ ನಿಂತಿದ್ದಾರೆ. ಇವರು ತಮ್ಮ ಮುಂದಿನ ಚಿತ್ರವನ್ನ ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅವರ ಜತೆಗೆ ನಟಿಸುತ್ತಿದ್ದಾರೆ.
ಇನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಬಗ್ಗೆ ಹೇಳುವುದಾದರೆ ಇವರು ದೇಶದ ಹಲವು ಕಡೆಗಳಲ್ಲಿ ತಮ್ಮದೇ ಆದ ಬಹಳಷ್ಟು ಆಸ್ತಿಯನ್ನು ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ಮುಂಬೈ ಇಲ್ಲೂ ಕೂಡ ಹಲವು ಕಟ್ಟಡಗಳನ್ನು ಹೊಂದಿದ್ದಾರೆ. ಒಂದು ಕಟ್ಟಡವನ್ನು ಎಸ್ಬಿಐ ಬ್ಯಾಂಕ್ಗೆ ಬಾಡಿಗೆಯನ್ನು ನೀಡಿದ್ದಾರೆ. ಹಾಗೆ ಹಲವು ಅಪಾರ್ಟ್ ಮೆಂಟ್ ಗಳು ಕೂಡ ಇವರು ಹೊಂದಿದ್ದಾರೆ.