ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಗೆಳೆಯರ ಬಳಗದ ವತಿಯಿಂದ CFM ಕ್ರೀಡಾ ವಿಭಾಗದ 5 ತಂಡಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಡಿಸೆಂಬರ್ 19ನೇ ಆದಿತ್ಯವಾರದಂದು ಬಿ.ಸಿ ರೋಡ್ ಗೋಲ್ಡನ್ ಅಕಾಡೆಮಿ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.ರೋಚಕ ಪಂದ್ಯದಲ್ಲಿ ಕೋಸ್ಟಲ್ ಟೈಗರ್ಸ್ ಮಂಗಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬಿ.ಸಿ ರೋಡ್ ಮೈದಾನದಲ್ಲಿ ನಡೆದ ಕೋಸ್ಟಲ್ ಫ್ರೆಂಡ್ಸ್ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಿದ್ದವು. ಷರೀಫ್ ವಳಾಲ್ ಮಾಲಕತ್ವದ ಸಲಾಂ ಸಮ್ಮಿ ನಾಯಕತ್ವದ UCF ತಂಡ, ಮುಸ್ತಫ ದೆಮ್ಮಲೆ ಮಾಲಕತ್ವದ ಇಫಾಝ್ ಬನ್ನೂರು ನಾಯಕತ್ವದ CRF ತಂಡ, ಅನ್ಸಾಫ್ ಮಾಲಕತ್ವದ ಮುನ್ನ ಕಮ್ಮರಡಿ ನಾಯಕತ್ವದ ಈಸ್ಟರ್ನ್ ಬ್ಲೂಸ್ ತಂಡ, ಇಕ್ಬಾಲ್ ಪರ್ಲಿಯಾ ಹಾಗೂ ರಿಯಾಝ್ ಕಣ್ಣೂರು ಮಾಲಕತ್ವದ A1 ಫೈಟರ್ಸ್ ಹಾಗೂ ಸಿರಾಜುದ್ದೀನ್ ಪರ್ಲಡ್ಕ ಮಾಲಕತ್ವದ ಫೈಝಲ್ ಪೂಮ ನಾಯಕತ್ವದ CTM ತಂಡ CFM Trophy – 2021 ಗಾಗಿ ಸೆಣಸಾಡಿದವು. ಅಂತಿಮವಾಗಿ ಕೋಸ್ಟಲ್ ರಿಯಲ್ ಫೈಟರ್ಸ್ ಮತ್ತು ಕೋಸ್ಟಲ್ ಟೈಗರ್ಸ್ ತಂಡವು ಫೈನಲ್ ಪ್ರವೇಶಿಸಿತು.
ಗೆಳೆಯರಿಂದ ಗೆಳೆಯರಿಗಾಗಿ ಗೆಳೆಯರೇ ನಡೆಸುವ ಸಾಮಾಜಿಕ ಜಾಲತಾಣದಲ್ಲಿದಿರುವ ಗೆಳೆಯರನ್ನು ಒಗ್ಗೂಡಿಸಿ ವರ್ಷಂಪ್ರತಿ ಮನೋರಂಜನೆಯಿಂದ ನಡೆಯುವ ಕ್ರಿಕೆಟ್ ಪಂದ್ಯಾಕೂಟವು ಎರಡನೇ ವರ್ಷವೂ ಕೂಡ ಯಶಸ್ವಿಯಾಗಿ ಮತ್ತು ರೋಚಕವಾಗಿ ನಡೆಯಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಸ್ಟಲ್ ರಿಯಲ್ ಫೈಟರ್ಸ್ ತಂಡವು ನಿಗದಿತ 3 ಓವರ್’ನಲ್ಲಿ 2 ವಿಕೆಟ್ ಕಳೆದುಕೊಂಡು 18 ರನ್ ಭಾರಿಸಿತ್ತು.
ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಕೋಸ್ಟಲ್ ಟೈಗರ್ಸ್ ತಂಡ ಒಂದು ಓವರ್ ಬಾಕಿ ಇರುವಂತೆಯೇ 1 ವಿಕೆಟ್ ನಷ್ಟಕ್ಕೆ ಎದುರಾಳಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ರಿಯಲ್ ಟೈಗರ್ಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಫೈನಲ್ ಪಂದ್ಯದಲ್ಲಿ Man of the Match ಆಗಿ ಇಮ್ತಿಯಾಝ್ ರವರು ಪಡೆದುಕೊಂಡರು. ಟೂರ್ನಿಯುದ್ದಕ್ಕೂ ಅಮೋಘವಾಗಿ ಬ್ಯಾಟ್ ಬೀಸಿದ ಸಮೀರ್ ಮಾರಿಪಳ್ಳ ರವರಿಗೆ Best Batsman ಅವಾರ್ಡ್ ನೀಡಿ ಗೌರವಿಸಲಾಯಿತು.
ಹಾಗೆಯೇ ಟೂರ್ನಿಯಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿ ಮಿಂಚಿದ ಅನೀಸ್ ಮಂಗಳೂರು ರವರಿಗೆ ಮ್ಯಾನ್ ಆಫ್ ದಿ ಸಿರೀಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಉಳಿದಂತೆ Best Bowler ಆಗಿ ನೌಫಲ್ ಎಫ್ ಎನ್, Best Fielder ಆಗಿ ಸಫ್ವಾನ್ ಕಣ್ಣೂರು,
Best wicket keeper ಆಗಿ ಜುನೈದ್ ಬಂಟ್ವಾಳ ರವರಿಗೆ ಅವಾರ್ಡ್ ನೀಡಲಾಯಿತು.
ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಸೋಲುಕಂಡ A1 Fighters ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
Fair Play ಅವಾರ್ಡ್ Eastern Blues ತಂಡಕ್ಕೆ ಸಿಕ್ಕಿತು.
Most entertain ಅವಾರ್ಡ್ United Coastal Friends ತಂಡದ ಪಾಲಾಯಿತು.
ಪಂದ್ಯಾಕೂಟದ ನೇರ ಪ್ರಸಾರವನ್ನು ಅಭಿಮತ ಟಿವಿ ಇದರ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡಲಾಗಿತ್ತು.
ಎಲ್ಲಾ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.