ಲಂಡನ್: ತಮ್ಮ 6ನೇ ವಿಚ್ಛೇದಿತ ಪತ್ನಿ ಮತ್ತು ಮಕ್ಕಳಿಗೆ 550 ಮಿಲಿಯನ್ ಪೌಂಡ್ಸ್ ಜೀವನಾಂಶ ಪಾವತಿಸುವಂತೆ ದುಬೈ ದೊರೆಗೆ ಬ್ರಿಟನ್ನಿನ ನ್ಯಾಯಾಲಯ ಆದೇಶಿಸಿದೆ. ಇದು ಬ್ರಿಟನ್ನಿನ ಅತ್ಯಂತ ದುಬಾರಿ ವಿಚ್ಛೇದನಾ ಎನ್ನಲಾಗಿದೆ.
ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ಅವರು ತಮ್ಮ ವಿಚ್ಛೇದಿತ ಪತ್ನಿ ಹಯಾ ಬಿಂಟ್ ಅಲ್ ಹುಸೇನ್ ಅವರಿಗೆ 251.5 ಮಿಲಿಯನ್ ಪೌಂಡ್ ಮತ್ತು ಅವರ ಮಕ್ಕಳಾದ ಅಲ್ ಜಲೀಲಾ(14), ಮತ್ತು ಜಾಯೆದ್( 9) ಅವರಿಗೆ 290 ಮಿಲಿಯನ್ ಪೌಂಡ್‌ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಬ್ರಿಟನ್ ನ್ಯಾಯಾಲಯ ಆದೇಶಿಸಲಾಗಿದೆ.
550 ಮಿಲಿಯನ್ ಪೌಂಡ್ ಅಂದರೆ ಸರಿಸುಮಾರು ₹5,473 ಕೋಟಿ ರೂ ಪರಿಹಾರವಾಗಿ ಕೊಡಬೇಕಾಗುತ್ತದೆ.
ಮಕ್ಕಳು ಎಷ್ಟು ಕಾಲ ಬದುಕುತ್ತಾರೆ ಮತ್ತು ಅವರು ತಮ್ಮ ತಂದೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆಯೇ ಎಂಬ ಅಂಶವನ್ನು ಅವಲಂಬಿಸಿ ಅವರು ಪಡೆಯುವ ಜೀವನಾಂಶದ ಒಟ್ಟು ಮೊತ್ತವು 290 ಮಿಲಿಯನ್ ಪೌಂಡ್‌ಗಳಿಗಿಂತ ಹೆಚ್ಚು ಅಥವಾ ಕಡಿಮೆ ಆಗಿರುತ್ತದೆ.
ಮಕ್ಕಳು ಅಪ್ರಾಪ್ತರಾಗಿರುವಾಗ ಅವರ ಭದ್ರತಾ ವೆಚ್ಚಗಳನ್ನು ಭರಿಸಲು ವರ್ಷಕ್ಕೆ 11 ಮಿಲಿಯನ್ ಪೌಂಡ್‌ಗಳನ್ನೂ ಇದು ಒಳಗೊಂಡಿದೆ.