dtvkannada

'; } else { echo "Sorry! You are Blocked from seeing the Ads"; } ?>

ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಬರೋಬ್ಬರಿ ಒಂದೂವರೆ ತಿಂಗಳು ಕಳೆಯುತ್ತ ಬಂದಿದೆ. ಆದರೂ ಕೂಡ ಪುನೀತ್ ರಾಜಕುಮಾರ್ ಅವರ ಒಂದು ಪುಟ್ಟ ನೆನಪು ಕೂಡ ನಮ್ಮ ಮನಸ್ಸಿನಿಂದ ಮಾಸಿಲ್ಲ. ಹೀಗಾಗಿ ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಹಲವಾರು ಕಾರ್ಯಕ್ರಮಗಳು ನಿಸ್ವಾರ್ಥ ಮನಸ್ಸಿನ ಸೇವೆಗಳು ಸಾಗುತ್ತಲಿವೆ.



ಕಳೆದವಾರವಷ್ಟೇ ಝೀ ಕನ್ನಡ ವಾಹಿನಿಯು “ಕರ್ನಾಟಕ ರತ್ನ” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುವ ಕೆಲಸ ಮಾಡಿದರು. ಇನ್ನು ಎಲ್ಲೆಡೆ ತಾನು ಅಪ್ಪು ಅವರ ಗ್ರೇಟ್ ಅಭಿಮಾನಿ ಎಂದು ಹೇಳಿಕೊಂಡಿದ್ದ ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಿದರು.

'; } else { echo "Sorry! You are Blocked from seeing the Ads"; } ?>



ಈ ಒಂದು ಕಾರ್ಯಕ್ರಮದ ನಿರೂಪನೆಗಾಗಿ ಅನು ತೆಗೆದುಕೊಂಡ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಪುನೀತ್ ರಾಜಕುಮಾರ್ ಅಗಲಿದ ಸಂದರ್ಭದಲ್ಲಿ ಅನುಶ್ರೀ ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂಬ ಕಾರಣದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಅನುಶ್ರೀಯವರಿಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದರು

ಆಗ ಮೀಡಿಯಾದ ಮುಂದೆ ಬಂದ ಅನುಶ್ರೀ ಪುನೀತ್ ರಾಜಕುಮಾರ್ ಅವರ ನಗುವಿನ ಮುಖ ನನ್ನ ಕಣ್ಣಲ್ಲಿ ಹಾಗೆ ಇದೆ. ಅವರನ್ನು ಆ ಪರಿಸ್ಥಿಯಲ್ಲಿ ನೋಡಲು ನನ್ನಿಂದ ಸಾಧ್ಯವಿಲ್ಲ ಹೀಗಾಗಿ ನಾನು ಅವರ ಅಂತಿಮ ದರ್ಶನ ಪಡೆಯಲು ಬರಲಿಲ್ಲ ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದರು.

ಅನಂತರ ಝೀ ಕನ್ನಡ ವಾಹಿನಿಯಲ್ಲಿ ನಡೆದ “ಕರ್ನಾಟಕ ರತ್ನ” ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದ್ದಾರೆ. ಹೌದು ಒಂದೊಂದೇ ಅಕ್ಷರಗಳನ್ನು ಮುತ್ತುಗಳಂತೆ ಪೋಣಿಸಿಕೊಂಡು ಪುನೀತ್ ರಾಜಕುಮಾರ್ ಅವರನ್ನು ಅನುಶ್ರೀ ಹಾಡಿಹೊಗಳಿದ ಚಂದವನ್ನು ಯಾರು ತಾನೆ ಮೆಚ್ಚಲು ಸಾಧ್ಯವಿಲ್ಲ ಹೇಳಿ ನೊಡೋಣ?



ಅಪ್ಪು ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲವಾದರೂ ಅವರು ಬಿಟ್ಟು ಹೋಗಿರುವಂತಹ ಸಾಕಷ್ಟು ವಿದ್ಯೆಗಳು, ಸಮಾಜ ಸೇವೆಗಳು ಇನ್ನೂ ಉಸಿರಾಡುತ್ತಲೇ ಇವೆ. ನಾನು ಅಂದು ಹೇಳುತ್ತಿದ್ದೆ ಇಂದು ಹೇಳುತ್ತಿದ್ದೇನೆ ನಾನು ಅಪ್ಪು ಅವರ ಅಪ್ಪಟ ಅಭಿಮಾನಿ ಎಂದು ಅನುಶ್ರೀಯವರು ಎದೆತಟ್ಟಿ ಹೆಮ್ಮೆಯಿಂದ ಹೇಳುತ್ತಾ ಭಾವುಕರಾದರು.

'; } else { echo "Sorry! You are Blocked from seeing the Ads"; } ?>



ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ನಡೆದ ಕರ್ನಾಟಕ ರತ್ನ ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲು ಅನುಶ್ರೀಯವರು ಒಂದು ರುಪಾಯಿ ಸಂಭಾವನೆಯನ್ನು ಪಡೆದಿಲ್ಲ ಎಂದು ತಿಳಿದು ಬಂದಿದೆ .ಅಲ್ಲದೆ ತಾನು ಅಪ್ಪಟ ಅಪ್ಪು ಅಭಿಮಾನಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಅನುಶ್ರೀಯವರಿಗೆ ಕರ್ನಾಟಕ ರತ್ನ ಕಾರ್ಯಕ್ರಮವನ್ನು ನಡೆಸಿಕೊಡುವುದು ದೇವರು ನೀಡಿದ ಭಾಗ್ಯ. ಹೀಗಾಗಿ ಅಪ್ಪು ಹೆಸರಲ್ಲಿ ಒಂದೇ ಒಂದು ರೂಪಾಯಿಯ ಸಂಭಾವನೆಯೂ ನನಗೆ ಬೇಡ ಎಂದು ನಿರಾಕರಿಸಿದ್ದಾರಂತೆ. ಆದರೆ ಬೇರೆ ಕಾರ್ಯಕ್ರಮಗಳನ್ನು ನಿರೂಪನೆ ಮಾಡಿದ್ದರೆ ಅನು ಅವರ ಸಂಭಾವನೆ 50 ಸಾವಿರದಿಂದ 3 ಲಕ್ಷದವರೆಗೆ ಪಡೆಯುತ್ತಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!