dtvkannada

'; } else { echo "Sorry! You are Blocked from seeing the Ads"; } ?>

ಜಗತ್ತಿನ ಪ್ರತಿಷ್ಟಿತ ಶ್ರೀಮಂತರಲ್ಲಿ ಒಬ್ಬರಾಗಿರುವ ಈ ವ್ಯಕ್ತಿಯ ಮನೆಯಲ್ಲಿ ಕೆಲಸ ಸಿಕ್ಕರೆ ಅವರಂತ ಅದೃಷ್ಟವಂತರು ಮತ್ತೊಬ್ಬರಿಲ್ಲ ಅಂತ ಹೇಳಬಹುದು..! ಯಾಕೆಂದರೆ ಪ್ರತಿಯೊಬ್ಬರಿಗೂ ಉದ್ಯೋಗ ಎಂಬುದು ಇರಲೇಬೇಕು. ಅದರಲ್ಲಿಯೂ ಪುರುಷರಿಗೆ ಅಂತೂ ಉದ್ಯೋಗಂ ಪುರುಷ ಲಕ್ಷಣಂ ಎಂಬಂತೆ ಯಾವುದಾದರು ಒಂದು ಕೆಲಸ ಇದ್ದರೆ ಅವರಿಗೂ ಕೂಡ ಒಂದು ಗೌರವ.

ಯಾರಿಗಾದರೂ ಸರ್ಕಾರಿ ಕೆಲಸ ಸಿಕ್ಕರಂತೂ ಅದಕ್ಕೆ ಪಾರವೇ ಇಲ್ಲ ಬಿಡಿ. ಇಂದಿನ ದಿನಮಾನಗಳಲ್ಲಿ ಸರ್ಕಾರಿ ನೌಕರನಾಗಿದ್ದರೆ ಅವರು ಜನಸಾಮಾನ್ಯರಿಗೆ ಸುಪ್ರೀಂ ರೀತಿಯಾಗಿ ಕಾಣುವಂತದ್ದು. ಇದೇ ರೀತಿಯಾಗಿ ಈ ಪ್ರತಿಷ್ಟಿತ ಉದ್ಯಮಿಯ ಮನೆಯಲ್ಲಿ ನಿಮಗೆ ಯಾವುದಾದರೊಂದು ಕೆಲಸ ಸಿಕ್ಕರೆ ಅದೊಂದು ರೀತಿ ನಿಮ್ಮ ಲೈಫ್ ಸೆಟ್ಲ್ ಆದಂಗೆ. ಆದರೆ ಈ ಉದ್ಯಮಿಯ ಮನೆಯಲ್ಲಿ ಕೆಲಸ ಪಡೆಯುವುದು ಕೂಡ ಅಷ್ಟೊಂದು ಸುಲಭದ ಮಾತಲ್ಲ ಕಷ್ಟವೆನ್ನುತ್ತಾರೆ ಅಲ್ಲಿರುವವರು.

ಇಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲು ವಿವಿಧ ರೀತಿಯ ಆಯ್ಕೆಯ ಪರೀಕ್ಷೆಗಳನ್ನು ಇಟ್ಟಿರುತ್ತಾರಂತೆ. ಹೌದು ನಾವು ಹೇಳುತ್ತಿರುವ ಈ ಉದ್ಯಮಿ ಬೇರಾರು ಅಲ್ಲ. ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥರಾಗಿರುವ ಮುಖೇಶ್ ಅಂಬಾನಿ. ಮುಖೇಶ್ ಅಂಬಾನಿ ಅವರು ಮುಂಬೈನಲ್ಲಿ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಬೃಹತ್ ಬರೋಬ್ಬರಿ ಇಪ್ಪತ್ತೇಳು ಅಂತಸ್ತಿನ ಮನೆಯನ್ನು ಕಟ್ಟಿಸಿದ್ದಾರೆ. ಈ ಮನೆಯಲ್ಲಿ ಕೇವಲ ತಮ್ಮ ಕಾರುಗಳನ್ನು ನಿಲ್ಲಿಸುವುದಕ್ಕಾಗಿಯೇ ಸುಮಾರು ಆರು ಅಂತಸ್ತುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಇಪ್ಪತ್ತೇಳು ಅಂತಸ್ತಿನ ಮನೆಯಲ್ಲಿ ಸಾವಿರದ ನಾಲ್ಕು ನೂರು ಜನರು ಕೆಲಸ ಮಾಡುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>



ಇಲ್ಲಿ ಕೆಲಸ ಮಾಡಬಯಸುವ ವ್ಯಕ್ತಿಗಳು ಶಿಸ್ತು ಬದ್ದವಾಗಿದ್ದು ಕಟ್ಟುನಿಟ್ಟಾಗಿ ಸಮಯಪಾಲನೆ ಮಾಡುವಂತವರಾಗಿರಬೇಕು. ಪಾಸಿಟೀವ್ ನೇಚರ್ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಾರೆ. ಅಂಬಾನಿಯವರು ತಮ್ಮ ಕುಟುಂಬದವರನ್ನು ಹೇಗೆ ಕಾಣುತ್ತಾರೋ ಅಂತೆಯೇ ಅವರ ಮನೆಯಲ್ಲಿ ಕೆಲಸ ಮಾಡುವವರನ್ನು ಕೂಡ ಕಾಣುತ್ತಾರೆ. ಇವರಿಗೆ ಅವರ ಹುದ್ದೆ ಕೆಲಸದ ಬದ್ದತೆ ನೋಡಿ ಕನಿಷ್ಟ ಅಂದರು ಕೂಡ ಎರಡು ಲಕ್ಷದಿಂದ ಹದಿನಾಲ್ಕು ಲಕ್ಷದವರೆಗೆ ಸಂಬಳ ನೀಡುತ್ತಾರೆ. ಸಂಬಳದ ಜೊತೆಗೆ ಅವರಿಗೆ ಹಬ್ಬ ಹರಿದಿನಗಳಲ್ಲಿ ಹೊಸ ದುಬಾರಿ ಬೆಲೆಯ ಉಡುಪುಗಳನ್ನು ನೀಡುತ್ತಿರುತ್ತಾರೆ.

ತಮ್ಮ ಯಶಸ್ಸಿನ ಬೆನ್ನೆಲುಬಾಗಿ ದುಡಿಯುವ ಎಲ್ಲರ ವೈಯಕ್ತಿಕ ಜೀವನ ಕೂಡ ಉತ್ತಮವಾಗಿರುವಂತೆ ಅವರ ಕಷ್ಟ ಸುಖಗಳನ್ನು ವಿಚಾರಿಸಿ ಅವರಿಗೆ ನೆರವಾಗುತ್ತಾರೆ. ಆದರೆ ಇದನ್ನು ಎಲ್ಲಿಯೂ ಕೂಡ ಅವರು ಒಬ್ಬರಿಂದ ಒಬ್ಬರಿಗೆ ಹೇಳಿಕೊಳ್ಳಬಾರದು ಎಂದು ಸಲಹೆ ಆಜ್ಞೆಯನ್ನ ಕೂಡ ಮಾಡುತ್ತಾರಂತೆ. ಅಂಬಾನಿಯವರ ಮನೆಗೆ ಕೆಲಸಕ್ಕೆ ಸೇರುವ ಬಹುತೇಕರು ವರ್ಷಾನುಗಟ್ಟಲೇ ಕೆಲಸ ಮಾಡುತ್ತಾರೆ. ಅವರು ಒಮ್ಮೆ ಕೆಲಸ ಸೇರಿಕೊಂಡರೆ ಬೇರೆ ಎಲ್ಲೂ ಕೂಡ ಅವರು ಕೆಲಸಕ್ಕೆ ಸೇರಿಕೊಳ್ಳುವ ಯೋಚನೆಯನ್ನು ಮಾಡುವುದಿಲ್ಲ.



ಅಷ್ಟರ ಮಟ್ಟಿಗೆ ಅಂಬಾನಿಯವರ ನೆರವು ಜೀವನದ ಆರ್ಥಿಕತೆಯ ಸುರಕ್ಷತೆಯನ್ನು ನೀಡಿ ತಮ್ಮ ಕೆಲಸಗಾರರನ್ನು ಅಚ್ಚು ಕಟ್ಟಾಗಿ ನೋಡಿಕೊಳ್ಳುತ್ತಾರಂತೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಲು ಮರೆಯಬೇಡಿ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!