ಸೋನಾಪುರ (ಒಡಿಶಾ): ಬೊಲೆರೋ ಜೀಪ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವರನ ಕಡೆಯ ಐದು ಮಂದಿ ಸಾವನ್ನಪ್ಪಿ ಮತ್ತೆ ಐವರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಸುಕಿನ ವೇಳೆ ಸಂಭವಿಸಿದೆ.
ಸೋನಾಪುರ್ ಜಿಲ್ಲೆಯ ಉಲ್ಲುಂದ ಬ್ಲಾಕ್‌ನ ನಿಮ್ನಾ ಮತ್ತು ಪಂಚಮಹಾಲ್ ಗ್ರಾಮದ 10 ಜನರು ಕೌದಿಯಮುಂಡ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹಿಂದಿರುಗುತ್ತಿದ್ದಾಗ ಪ್ರಯಾಣಿಸುತ್ತಿದ್ದ ಬೊಲೆರೋ ಜೀಪ್ ಮಹಾನದಿ ಸೇತುವೆಯ ಮೇಲೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸೋನೆಪುರ ಎಸ್ಪಿ ಸೀತಾರಾಮ್ ಸತ್ಪತಿ ತಿಳಿಸಿದ್ದಾರೆ.
ಘಟನೆಯಲ್ಲಿ ಪ್ರಮೋದ್ ಪಾಂಡಿಯಾ, ತ್ರಯಂಬಕ್ ಮೆಹರ್ ಮತ್ತು ಸುಭಮ್ ಪಾಂಡಿಯಾ ಅವರೊಂದಿಗೆ ಆಶಿಶ್ ಪಾಂಡಿಯಾ ಮತ್ತು ಅವರ ಪುತ್ರಿ ಸಿದ್ಧಿ ಪಾಂಡಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ತೀವ್ರತೆಗೆ ಜೀಪು ಸಂಪೂರ್ಣ ಜಖಂಗೊಂಡಿದ್ದು ಅದರೊಳಗೆ ಸಿಲುಕಿದವರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಕೆಕೆಆರ್‌ಡಿಬಿಯಡಿ ರಸ್ತೆ -ಸೇತುವೆ ನಿರ್ಮಾಣ
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಸೋನೆಪುರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಬುರ್ಲಾ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.