dtvkannada

ಕೋಲ್ಕತಾ : ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್ ಬಂಗಾಳದ ದೊಮೊಹನಿ ಬಳಿ ಗುರುವಾರ ಸಂಜೆ ಹಳಿತಪ್ಪಿದ್ದು, 3 ಮಂದಿ ಸಾವನ್ನಪ್ಪಿದ್ದು, 15ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ

‘ಹಠಾತ್ತನೇ ರೈಲು ಅಲುಗಾಡಿತು. ಅದರ ಬೆನ್ನಿಗೇ ಹಲವು ಬೋಗಿಗಳು ಉರುಳಿಬಿದ್ದವು. ಸಾವು ನೋವುಗಳು ಸಂಭವಿಸಿವೆ’ ಎಂದು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆ ಇಲಾಖೆ, ‘ಸಂಜೆ ಐದು ಗಂಟೆಯಲ್ಲಿ ಅಪಘಾತ ಸಂಭವಿಸಿದೆ. 12 ಬೋಗಿಗಳು ಹಾನಿಗೀಡಾಗಿವೆ.

ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ವೈದ್ಯಕೀಯ ತಂಡವನ್ನು ರವಾನಿಸಲಾಗಿದೆ’ ಎಂದಿದೆ. ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಮೂವರು ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಪಾಟ್ನಾ ಜಂಕ್ಷನ್‌ನಿಂದ 98 ಪ್ರಯಾಣಿಕರು ರೈಲು ಹತ್ತಿದ್ದರು

ಪಾಟ್ನಾ ಜಂಕ್ಷನ್‌ನಿಂದ 98 ಪ್ರಯಾಣಿಕರು (ಗುವಾಹಟಿ-ಬಿಕಾನೇರ್ ಎಕ್ಸ್‌ಪ್ರೆಸ್) ಮತ್ತು ಮೊಕಾಮಾದಿಂದ 3 ಜನರು ಮತ್ತು ಭಕ್ತಿಯಾರ್‌ಪುರದಿಂದ 2 ಜನರು ರೈಲಿಗೆ ಏರಿದ್ದಾರೆ ಎಂದು ಬಿಹಾರದ ಪಾಟ್ನಾ ಜಂಕ್ಷನ್‌ನ ಮುಖ್ಯ ಮೀಸಲಾತಿ ಮೇಲ್ವಿಚಾರಕ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಜಲ್ಪೈಗುರಿ ಜಿಲ್ಲಾಡಳಿತವು ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಮೊಯ್ನಗುರಿಯ ಆಸ್ಪತ್ರೆಗೆ ಸಾಗಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!