dtvkannada

ಪಲ್ಲಿಪಾಲೆಂ: ಯುವಕನನ್ನು ಮರಕ್ಕೆ ಕಟ್ಟಿ ಆತನ ಕಣ್ಣೆದುರೇ ಆತನ ಪ್ರೇಯಸಿಯನ್ನು ಕುಡುಕರ ಗ್ಯಾಂಗ್ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಪಲ್ಲಿಪಾಲೆಂ ಬೀಚ್ನಲ್ಲಿ ನಡೆದಿದೆ.

ಯುವತಿಯೊಬ್ಬಳು ತನ್ನ ಪ್ರೇಮಿಯ ಜೊತೆ ಬೀಚ್ಗೆ ಹೋಗಿದ್ದಾಳೆ. ಇದನ್ನು ಗಮನಿಸಿದ ಕುಡುಕರ ಗ್ಯಾಂಗ್ ಮೋಜು – ಮಸ್ತಿಯಲ್ಲಿ ತೊಡಗಿದ್ದ ಜೋಡಿ ಮೇಲೆ ದಾಳಿ ಮಾಡಿದೆ. ಬಳಿಕ ಯುವಕನನ್ನು ಮರಕ್ಕೆ ಕಟ್ಟಿ ಹಾಕಿದಲ್ಲದೇ ಆತನ ಕಣ್ಣೆದುರೇ ಗೆಳತಿಯನ್ನು ಅತ್ಯಾಚಾರ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಇದಾದ ಬಳಿಕ ಇಬ್ಬರು ತಮ್ಮ – ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಈ ವೇಳೆ, ಯುವತಿ ಸ್ಥಿತಿ ಬಗ್ಗೆ ಗಮನಿಸಿದ ಆಕೆಯ ಸಹೋದರ ಗಟ್ಟಿಯಾಗಿ ಕೇಳಿದ ಹಿನ್ನೆಲೆ ನಡೆದ ವಿಷಯವೆಲ್ಲವೂ ಆಕೆ ಹೇಳಿದ್ದಾಳೆ. ಕೂಡಲೇ ಸಂತ್ರಸ್ತೆ ಸಹೋದರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯೊಬ್ಬನ್ನನ್ನು ಪತ್ತೆ ಹಚ್ಚಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!