ಮಾರಿಪಳ್ಳ: ರೆಸ್ಟೋ ಚಾರಿಟೇಬಲ್ ಟ್ರಸ್ಟ್ (ರಿ) ಮಾರಿಪಳ್ಳ ಇದರ ದಶಮಾನೋತ್ಸವ ಅಂಗವಾಗಿ ಮರ್’ಹೂಂ ಅಮೀರ್ ಅಹ್ಮದ್ ತುಂಬೆ ಸ್ಮರಣಾರ್ಥ, ಕೆಎಂಸಿ ಆಸ್ಪತ್ರೆ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಇದರ ಸಂಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ದಿನಾಂಕ 20/03/2022ರ ಭಾನುವಾರದಂದು ಪರಂಗಿಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಹಲವಾರು ಗಣ್ಯ ಅತಿಥಿಗಳು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ರಕ್ತದಾನ ಶಿಬಿರದಲ್ಲಿ ಸುಮಾರು 430 ಮಂದಿ ಏಕಕಾಲದಲ್ಲಿ ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೊತೆಗೆ ಬಡ, ಅಗತ್ಯ ಜನರಿಗೆ ವೀಲ್ ಚಯೆರ್ ವಿತರಣೆ, ರೇಷನ್ ಕಿಟ್ ವಿತರಣೆ, ಸ್ಟಿಚ್ಚಿಂಗ್ ಮಿಷನ್ ವಿತರಣೆ ಮಾಡಲಾಯಿತು.
ರಕ್ತದಾನ ಮಾಡಿದ ಜೀವದಾನಿಗಳಿಗೂ, ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘಟಕರು ಧನ್ಯವಾದ ತಿಳಿಸಿದರು.