dtvkannada

Category: ಕರಾವಳಿ

ಪುತ್ತೂರಿನಲ್ಲಿ ಜೂನ್ 3ರಂದು ಏರ್ಪಡಿಸಿದ್ದ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ರದ್ದು..!

ನಮ್ಮ ಖುಷಿ ಇನ್ನೊಬ್ಬರಿಗೆ ನೋವು ತರಬಾರದು- ಶಾಸಕ ಅಶೋಕ್ ಕುಮಾರ್ ರೈ ಕೊಡಿಂಬಾಡಿ

ಪುತ್ತೂರು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಮೆರವಣಿಗೆ ಕೈಗೊಂಡಿದ್ದು ಇದೀಗ ಶಾಸಕರು ಅದನ್ನು ರದ್ದುಗೊಳಿಸುವ ಮೂಲಕ ಮಾನವೀಯ ಕರೆಯನ್ನು ಕೊಟ್ಟಿದ್ದಾರೆ. ಜೂನ್ 3 ರಂದು ನಡೆಯಬೇಕಿದ್ದ ಮೆರವಣಿಗೆಯನ್ನು ರದ್ದುಗೊಳಿಸಿ ಸಾಮಾನ್ಯ ರೀತಿಯಲ್ಲಿ ಅದೇ ದಿನ ಪುರಭವನದಲ್ಲಿ ಕಾರ್ಯಕ್ರಮ ನಡೆಸಲಾಗುವುದು…

ಪುತ್ತೂರು: ಜೂನ್ 3 ರಂದು ಪುತ್ತೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಣೆ

ಬೊಳ್ವಾರಿನಿಂದ ದರ್ಬೆಯವರೆಗೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಮೆರವಣಿಗೆ

ಕಾರ್ಯಕ್ರಮಕ್ಕೆ ಮೆರುಗು ನೀಡಲಿರುವ ಪುತ್ತೂರಿನ ಶಾಸಕ ಅಶೋಕ್ ರೈ ಕೊಡಿಂಬಾಡಿ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಜಯಭೇರಿ ಬಾರಿಸಿದ್ದು ಇದರ ವಿಜಯೋತ್ಸವ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆರಿದ್ದು ಇವೆಲ್ಲದರ ವಿಜಯೋತ್ಸವ ಆಚರಣೆ ನಡೆಸಲು ತಿರ್ಮಾನಿಸಿದ್ದು ಜೂನ್ 3 ರಂದು ನಡೆಯಲಿದೆ ಎಂದು ಕಾಂಗ್ರೆಸ್ ಸಮಿತಿ…

ಮಸ್ಕತ್ತಿನಲ್ಲಿ ಆತ್ಮಹತ್ಯೆಗೆ ಶರಣಾದ ಕಡಬದ ಯುವಕ; “ಸಾರಿ ಅಣ್ಣಾ” ಎಂದು ಬರೆದಿಟ್ಟ ಡೆತ್ ನೋಟ್ ಪತ್ತೆ

ಕಡಬ: ಮಸ್ಕತ್ತಿನಲ್ಲಿ ಕಡಬದ ಕೊಯಿಲದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಕಡಬದ ಕೊಯಿಲ ಗ್ರಾಮದ ಸುಣ್ಣಾಡಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತರಾಗಿದ್ದ ಸಂದೇಶ್ (೩೨) ಎಂದು ತಿಳಿದು ಬಂದಿದೆ. ಒಮಾನ್ ದೇಶದ ಮಸ್ಕತ್ತಿನಲ್ಲಿ ನೀರಿನ ಕಂಪೆನಿಯೊಂದರಲ್ಲಿ…

ಉಳ್ಳಾಲ: ಗುಡ್ಡದಲ್ಲಿ ಕಸ ಎಸೆದಿದ್ದಕ್ಕೆ ಮಹಿಳೆಗೆ ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ; ಹೈದರ್ ಎಂಬಾತನ ವಿರುಧ್ದ ಪ್ರಕರಣ ದಾಖಲು

ಉಳ್ಳಾಲ: ಗುಡ್ಡ ಭಾಗಕ್ಕೆ ತ್ಯಾಜ್ಯ ಎಸೆಯಲು ಬಂದ ಮಹಿಳೆಯ ಮೇಲೆ ವ್ಯಕ್ತಿಯೋರ್ವ ವಿನಾಕಾರಣ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉಳ್ಳಾಲ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಹೈದರ್ ಎಂಬಾತನ ವಿರುದ್ಧ…

ಪುತ್ತೂರು ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು

ಪುತ್ತೂರು: ಪುತ್ತೂರು ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಪುತ್ತೂರು ಪರ್ಲಡ್ಕ ನಿವಾಸಿಯಾದ ಅಬ್ದುಲ್ಲ ಹಾಜಿ ರವರ ಮಗ ಹಾರಿಸ್ ದರ್ಬೆ (44) ಎಂದು ಗುರುತಿಸಲಾಗಿದೆ. ಇವರು ಸೌದಿ ಅರೇಬಿಯಾದ ಜುಬೈಲ್’ನಲ್ಲಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸೌದಿ…

ಪ್ರವೀಣ್ ನೆಟ್ಟಾರು ಪತ್ನಿ ಗ್ರೂಪ್ ಸಿ ಹುದ್ದೆಗೆ ಮರುನೇಮಕ -ಸಿಎಂ ಸಿದ್ಧರಾಮಯ್ಯ ಟ್ವೀಟ್

ಕರ್ನಾಟಕದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರವು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದ ಎಲ್ಲಾ ನೌಕರಿಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರ ವಜಾಗೊಳಿಸಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಯೂ ಕೂಡ ಕೆಲಸ ಕಳೆದುಕೊಂಡಿದ್ದರು. ಆದರೆ ಪ್ರವೀಣ್ ನೆಟ್ಟಾರು ಪತ್ನಿ ನೂತನ…

BREAKING NEWS

ನೂತನ ಸರ್ಕಾರದಲ್ಲಿ 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಸಿದ್ದು ಸರಕಾರದಲ್ಲಿ ಸ್ಥಾನ ಪಡೆದ ಶಾಸಕರು ಯಾರೆಲ್ಲಾ ಗೊತ್ತಾ..!!

ಬೆಂಗಳೂರು: ಸಿದ್ದು ಸರಕಾರದಲ್ಲಿ ಅವರ ಸಂಪುಟದ ಸಚಿವರಾಗಿ 24 ಮಂದಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ಪ್ರಮಾಣವಚನ ಭೋದಿಸಿದರು. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ,…

ಪ್ರವೀಣ್ ನೆಟ್ಟಾರ್ ಪತ್ನಿ ಸರ್ಕಾರಿ ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದ ಸರ್ಕಾರ

ಬಿಜೆಪಿ ಸರಕಾರ ಮಾಡಿದ ಯಡವಟ್ಟಿನಿಂದ ಎಂಟೇ ತಿಂಗಳಲ್ಲಿ ಕೈ ತಪ್ಪಿ ‌ಹೋದ ಸರ್ಕಾರಿ ಉದ್ಯೋಗ..!!

ಪುತ್ತೂರು: ಕಳೆದ ವರ್ಷ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಅವರು ಪತ್ನಿಗೆ ಬಿಜೆಪಿ ಸರ್ಕಾರದಿಂದ ಮುಖ್ಯಮಂತ್ರಿಯ ಅಧಿಕಾರದಲ್ಲಿ ವಿಶೇಷ ದರ್ಜೆಯ ಅಡಿಯಲ್ಲಿ ನೀಡಿದ್ದ ಸರ್ಕಾರಿ ಕೆಲಸದ ಸಮಯದ ಅವಧಿ ಮುಗಿದಿದ್ದು ಇದೀಗ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಬಿಜೆಪಿ ಸರ್ಕಾರವು…

ಮಗಳು ಕಲಿಯುತ್ತಿರುವ ಕುಂಬ್ರ ಮರ್ಕಝ್‌ನತ್ತ ಕಣ್ಣು ಹಾಯಿಸಿದ ತಂದೆ

ವಿದ್ಯಾದೇಗುಲವನ್ನು ಅಕ್ಷರಗಳ ಮಾಯಾ ಜಾಲಾದಲ್ಲಿ ವಿವರಿಸಿದ ಬರಹಗಾರ

ಶಿಕ್ಷಣ ಹಾಗು ಸುರಕ್ಷತೆಯ ಅನಿವಾರ್ಯತೆಯನ್ನು ಅಕ್ಷರಗಳ ರೂಪದಲ್ಲಿ ಜೋಡಿಸಿದ ಜಾದುಗಾರ

ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ ಎಸ್.ಪಿ ಬಶೀರ್ ಶೇಖಮಲೆ ಬರೆದ ಅಂತರಾಳದ ಕಾವ್ಯ ಬರಹ

2000 ಇಸವಿ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಶೇಕಮಲೆಯಲ್ಲಿ ನಾಡು ಕಟ್ಟಿದ ನೇತಾರ ಶಿಕ್ಷಣದ ಬಗ್ಗೆ ಕ್ರಾಂತಿಯನ್ನೇ ಸೃಷ್ಟಿಸಿದ್ದ ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ ಮರ್ಹೂಂ ಶೇಕಮಲೆ ಮಮ್ಮುಂಞಿ ಹಾಜಿಯವರು ದಾನವಾಗಿ ನೀಡಿದ ಸ್ಥಳದಲ್ಲಿ ಮರ್ಕಝ್ ಮಹಿಳಾ ಕಾಲೇಜ್ ಪ್ರಾರಂಭಗೊಳ್ಳುವ ಶುಭ ಸುದ್ದಿ…

ಕಡಬ: ಕುಮಾರಧಾರ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

ದೇಹಕ್ಕೆ ಬಲೂನ್ ಕಟ್ಟಿ ನದಿಗೆ ಹಾರಿ ಸಾವಿನಲ್ಲೂ ಜಾಣ್ಮೆ ಮೆರೆದ ಉಧ್ಯಮಿ..!!

ಕಡಬ: ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಬಳಿ ನಡೆದಿದೆ. ಆತ್ಮಹತ್ಯೆ ಗೆಯ್ಯುವ ಸಂದರ್ಭದಲ್ಲಿ ಬಲೂನ್ ಕಟ್ಟಿಕೊಂಡು ಕುಮಾರಧಾರ ನದಿಗೆ ಹಾರಿದ ವ್ಯಕ್ತಿಯನ್ನು ಚಂದ್ರಶೇಖರ ಎಂದು ತಿಳಿದು ಬಂದಿದೆ. ಚಂದ್ರಶೇಖರ ಅವರು…

error: Content is protected !!