dtvkannada

Category: ಸುದ್ದಿ

ಪ್ರವಾದಿ ನಿಂದನೆ ಖಂಡಿಸಿ ಪಣೆಮಜಲು ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ಪ್ರತಿಭಟನೆ

ಸವಣೂರು: ಲೋಕ ಪ್ರವಾದಿ ಪೈಗಂಬರರನ್ನು ಮತ್ತು ಇಸ್ಲಾಮನ್ನು ಅವಹೇಳನಕಾರಿಯಾಗಿ ನಿಂದಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕಳೆದ ಶುಕ್ರವಾರ ಜುಮಾ ನಮಾಜ್ ನ ಬಳಿಕ ಪಣೆಮಜಲು ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಶನ್ ನ…

ಧರ್ಮಸ್ಥಳದಿಂದ ದೇವರ ದರ್ಶನ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ; ತಂದೆ ಮಗ ಮೃತ್ಯು

ಮೂಡಿಗೆರೆ: ಧರ್ಮಸ್ಥಳದಿಂದ ದೇವರ ದರ್ಶನ ಮುಗಿಸಿಕೊಂಡು ಬರುವ ವೇಳೆ ದಾರಿ ಮಧ್ಯೆ ಮರಕ್ಕೆ ಕಾರು ಢಿಕ್ಕಿ ಹೊಡೆದು, ತಂದೆ-ಮಗ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ರಾಜಾಜಿನಗರದ ನರಸಿಂಹರಾಜ್ (46)ಮತ್ತು…

ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಫೈಲ್; ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಕುಮುಟಾ: ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತರಕನ್ನಡ ಜಿಲ್ಲೆಯ ಕುಮಟಾ ಸಮೀಪ ನಡೆದಿದೆ. ಕುಮುಟಾ ತಾಲೂಕಿನ ಹೊಲನಗೆದ್ದೆ ಕಡ್ಲೆ ನಿವಾಸಿ ಪ್ರಣಮ್ ಈಶ್ವರ್ ನಾಯ್ಕ್(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.…

ಪುತ್ತೂರು: ಕ್ಲಬ್ ಹೌಸ್ ಚರ್ಚೆಯಲ್ಲಿ ಹಿಂದುದೇವರುಗಳ ನಿಂದನೆ ಆರೋಪ; ಕಾಂಗ್ರೆಸ್ ಮುಖಂಡೆ ಶೈಲಜಾ ಅಮರನಾಥ್ ಮನೆಗೆ ದಾಳಿ ಮಾಡಿದ ಹಿಂದು ಸಂಘಟನೆ ಕಾರ್ಯಕರ್ತರು

ಪುತ್ತೂರು: ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡೆ ಶೈಲಾಜ ಅಮರನಾಥ್ ಮನೆಗೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ಮಾಡಿ ಕಿಟಕಿ ಗಾಜುಗಳನ್ನು ಪುಡಿ ಮಾಡಿರುವ ಘಟನೆ ವರದಿಯಾಗಿದೆ. ಕ್ಲಬ್ ಹೌಸ್ ಚರ್ಚೆಯೊಂದರಲ್ಲಿ ಹಿಂದು ದೇವರುಗಳನ್ನು ಅವಮಾನಿಸಲಾಗಿದೆ ಎಂದು ಹಿಂದು ಸಂಘಟನೆ ಕಾರ್ಯಕರ್ತರು ಶೈಲಜಾ…

ಬೆಳ್ಳಾರೆ: ಮದ್ರಸದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಹೃದಯಘಾತಗೊಂಡು ಅಧ್ಯಾಪಕ ಮೃತ್ಯು

ಪುತ್ತೂರು: ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಇಂದು ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ಹೋಗಿದ್ದು ಅಲ್ಲಿ ಬೆಳಿಗ್ಗೆ 7.30 ಕ್ಕೆ ಮದರಸ ನಡೆಸುತ್ತಿರುವ ತರಗತಿ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರೆಂದು ವರದಿಯಾಗಿದೆ. ಆ ಕೂಡಲೇ ಅವರನ್ನು…

ಬೆಳ್ಳಾರೆ: ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಅನಾರೋಗ್ಯದಿಂದ ಮೃತ್ಯು

ಸುಳ್ಯ: ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಬೆಳ್ಳಾರೆಯ ಚಾರ್ವಾಕ ಗ್ರಾಮದಲ್ಲಿನಡೆದ ಬಗ್ಗೆ ವರದಿಯಾಗಿದೆ. ಮೃತಪಟ್ಟ ಮಹಿಳೆ ಕರಂದ್ಲಾಜೆ ನಿವಾಸಿ ಉಮೇಶ್ ಅವರ ಪತ್ನಿ ಉಷಾ ( 37 ) ಎಂದು ತಿಳಿದು ಬಂದಿದೆ. ಬೆಳ್ಳಾರೆಯ ಖಾಸಗಿ ಶಾಲೆಯಲ್ಲಿ…

ಮಕ್ಕಳಿಗೆ ಹರಡುತ್ತಿದೆ ಟೊಮ್ಯಾಟೋ ಜ್ವರ..!!

ಇದರ ಮುನ್ನೆಚ್ಚರಿಕಾ ಕ್ರಮ ಹೇಗೆ :ಡಾ| ಮುರಳಿ ಮೋಹನ್ ಚುಂತಾರುರವರಿಂದ ಆರೋಗ್ಯ ಮಾಹಿತಿ

ಟೊಮೆಟೋ ಜ್ವರ ಕಳೆದೆರಡು ದಿನಗಳಿಂದ ಕೇರಳದಲ್ಲಿ ಸದ್ದು ಮಾಡುತ್ತಿರುವ ಟೊಮೆಟೋ ಜ್ವರ ಅಥವಾ ಟೊಮೆಟೋ ಫ್ಲೂ ಒಂದು ವೈರಾಣುವಿನಿಂದ ಹರಡುವ ಸೋಂಕು ಜ್ವರವಾಗಿದ್ದು,ಐದು ವರ್ಷಗಳಿಗಿಂತ ಕೆಳಗಿರುವ ಮಕ್ಕಳಲ್ಲಿ ಕಂಡು ಬರುತ್ತದೆ. ಸುಮಾರು 80 ಮಕ್ಕಳಲ್ಲಿ ಈ ಜ್ವರ ಕಾಣಿಸಿಕೊಂಡಿದೆ.ನೆರೆ ರಾಜ್ಯಗಳಾದ ಕರ್ನಾಟಕ…

ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಮೂಡಬಿದ್ರೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮೂಡಬಿದ್ರೆ: ಮನುಷ್ಯನ ಕಿಡ್ನಿ ಯನ್ನು ಶಸ್ತ್ರಚಿಕಿತ್ಸೆಯಿಂದ ಬದಲಿಸಬಹುದು, ಹೃದಯವನ್ನೂ ಬದಲಾಯಿಸಬಹುದು ಆದರೆ ಹ್ರದಯಕ್ಕೆ ಹಿಡಿದ ತುಕ್ಕನ್ನು ಬದಲಾಯಿಸಲು ಯಾವ ಶಸ್ತ್ರಚಿಕಿತ್ಸೆ ಯಿಂದಲೂ ಸಾದ್ಯವಿಲ್ಲ ಎಂದು ಮೂಡುಬಿದಿರೆ ಆಳ್ವಾಸ್ ಆಸ್ಪತ್ರೆಯ ವೈದ್ಯರಾದ ಹರೀಶ್ ನಾಯಕ್ ಅಭಿಪ್ರಾಯ ಪಟ್ಟರು. ಅವರು ಇಂದು ರೋಟರಿ ಕ್ಲಬ್…

ಕಾಸರಗೋಡು: ಎದೆಹಾಲು ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ಕುಂಬಳೆ: ಮಧೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ನಿವಾಸಿ ಅಪ್ತಾಬ್‌ ಅವರ ಪುತ್ರಿ ಒಂದೂವರೆ ವರ್ಷದ ಇನಿಯ ಕಾರ್ತೋನ್‌ ಮಗು ಎದೆಹಾಲು ಗಂಟಲಲ್ಲಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ತಾಯಿ ಎದೆಹಾಲನ್ನು ಮಗುವಿಗೆ ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ…

ಉಳ್ಳಾಲ: ಸಾಲದಿಂದ ಮನನೊಂದು ನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿ

ಉಳ್ಳಾಲ: ಕಾಲೇಜು ವಿದ್ಯಾರ್ಥಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ನಿನ್ನೆ ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲ ಎಂಬಲ್ಲಿ ನಡೆದಿದೆ. ಕುಂಪಲದ ಬಗಂಬಿಲ ನಿವಾಸಿ, ಮಂಗಳೂರು ಖಾಸಗಿ‌ ಕಾಲೇಜಿ‌ನ ದ್ವಿತೀಯ ಬಿಬಿಎ ವಿದ್ಯಾರ್ಥಿ ಹರ್ದೀಪ್ (20) ಮೃತ ವಿದ್ಯಾರ್ಥಿ. ಈತ ಗುರುವಾರ…

error: Content is protected !!