dtvkannada

Category: ಸುದ್ದಿ

ಅಡುಗೆ ಮಾಡುತ್ತಿದ್ದ ಸಂದರ್ಭ ಹಾವು ಕಚ್ಚಿ 24 ವರ್ಷದ ಗೃಹಿಣಿ ಮೃತ್ಯು

ಶಿವಮೊಗ್ಗ: ಅಡುಗೆ ಮಾಡುವಾಗ ಹಾವು ಕಚ್ಚಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿಗೆಬೆಸಿಗೆ ಗ್ರಾಮದಲ್ಲಿ ನಡೆದಿದೆ. ಸೌಮ್ಯ (24) ಮೃತಪಟ್ಟ ಗೃಹಿಣಿ. ಸೌಮ್ಯ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿಷಕಾರಿ ಹಾವು…

ಮನೆ ಹಾಗೂ ದೇವಸ್ಥಾನಗಳಿಂದ ಕಳ್ಳತನ ಮಾಡಿದ್ದ ಪುತ್ತೂರಿನ ಇಬ್ಬರು ಕುಖ್ಯಾತ ಕಳ್ಳರ ಬಂಧನ

ಪುತ್ತೂರು: ಕೆಲ ದಿನಗಳ ಹಿಂದೆ ಪುತ್ತೂರಿನ ಬಾಡು ಉಜ್ರುಪ್ಪಾದ ಶಿವಪ್ರಸಾದ್ ಭಟ್ ಇವರ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕುಖ್ಯಾತ ಕಳ್ಳರ ಗ್ಯಾಂಗ್ ವೊಂದನ್ನು ಇದೀಗ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪುತ್ತೂರು ತಾರಿಗುಡ್ಡೆ…

ಕುಂಬ್ರ: ವರ್ತಕರ ಸಂಘದ ಹಿರಿಯ ಸದಸ್ಯ ಸುಂದರ ಪೂಜಾರಿ ನಿಧನ

ಪುತ್ತೂರು: ಕುಂಬ್ರ ವರ್ತಕ ಸಂಘದ ಹಿರಿಯ ಸದಸ್ಯರಾದ ಅರಿಯಡ್ಕ ಗ್ರಾಮದ ಕೋರಿಕ್ಕಾರು ಪಯಂದೂರು ನಿವಾಸಿ ಸುಂದರ ಪೂಜಾರಿ (81) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.25 ರಂದು ಸ್ವಗ್ರಹದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇರ್ವರು ಪುತ್ರಿಯರನ್ನು ಮತ್ತು ಪುತ್ರರನ್ನು ಅಗಲಿದ್ದಾರೆ. ಮೃತರ…

ಮಾರ್ಚ್ 30ಕ್ಕೆ ಪುತ್ತೂರಿನಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ; ಯುವ ಕಾಂಗ್ರೆಸ್ ರಾಜ್ಯಾದ್ಯಕ್ಷ ನಲಪಾಡ್ ಪುತ್ತೂರಿಗೆ

ಪುತ್ತೂರು: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಹಾಗು ನಗರ ಯುವ ಕಾಂಗ್ರೆಸ್ ಇದರ ವತಿಯಿಂದ ಯುವ ಧ್ವನಿ ಸಮಾವೇಶ ಹಾಗು ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಇದೇ ಬರುವ ಮಾರ್ಚ್ 30ರಂದು ಬ್ರಹ್ಮಶ್ರಿ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ. ಸಂಜೆ…

ಪುತ್ತೂರು: ಮುಸ್ಲಿಂಮರ ಜೊತೆ ವ್ಯವಹಾರ ನಡೆಸಲ್ಲ ಎಂಬ 32 ಅಂಗಡಿಗಳ ಹೆಸರಿರುವ ವಾಟ್ಸಪ್‌ ಸಂದೇಶ ವೈರಲ್; ವರ್ತಕರಿಂದ ದೂರು

ಪುತ್ತೂರು: ಕರಾವಳಿಯಲ್ಲಿ ಹಿಂದೂಯೇತರರಿಗೆ ದೇವಸ್ಥಾನಗಳ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಿರ್ಬಂಧ ವಿಚಾರ-ವಿವಾದ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದೆ. ಕರಾವಳಿಯಲ್ಲಿ ಆರಂಭವಾದ ಈ ವಿವಾದ ಇದೀಗ ಮಲೆನಾಡು, ಬೆಂಗಳೂರಿಗೂ ಕಾಲಿಟ್ಟಿದೆ. ಈ ಮಧ್ಯೆ ವಿವಾದ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮುಸ್ಲಿಮರ ಜೊತೆ ದೈನಂದಿನ…

ಮಂಗಳೂರು: ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇದ ಹೇರಿಲ್ಲ..!!

ಮಂಗಳೂರು: ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆಡಳಿತ ಮಂಡಳಿ ನಿಷೇಧ ಹೇರಿಲ್ಲ. ಈ ನಿಷೇಧದ ವಿವಾದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ದೇವಸ್ಥಾನದ…

ಪುತ್ತೂರು: ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಅಪಘಾತ; ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಕಳೆದ ಸೋಮವಾರ ಮುಂಜಾನೆ ಬೆಂಗಳೂರು – ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತೂರು ಕೂರ್ನಡ್ಕದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಆಶಿಕ್ ಸುನೈಫ್(21) ಎಂದು ತಿಳಿದು ಬಂದಿದೆ. ಈತ ಪುತ್ತೂರಿನ ಬಸ್ ನಿಲ್ದಾನದ…

ಕಾಪು: ಗ್ಯಾಸ್‌ ಸಿಲಿಂಡರ್‌ ಸ್ಪೋಟ ಪ್ರಕರಣದ ಮೃತರ ಸಂಖ್ಯೆ 4ಕ್ಕೇರಿಕೆ-ಇನ್ನಿಬ್ಬರಿಗೆ ಚಿಕಿತ್ಸೆ

ಉಡುಪಿ: ಕಾಪುವಿನ ಗುಜರಿ ಅಂಗಡಿಯಲ್ಲಿ ನಡೆದ ಭೀಕರ ಸಿಲಿಂಡರ್‌ ಸ್ಪೋಟದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಇಂದು 4ಕ್ಕೇರಿದೆ. ಮಲ್ಲಾರು ಗ್ರಾಮದ ಗುಡ್ಡೇಕೆರಿ ಸಲಫಿ ಮಸೀದಿ ಬಳಿಯ ಗುಜರಿ ಅಂಗಡಿಯಲ್ಲಿ ಮಾ.21ರಂದು ನಡೆದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ…

ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ; ಸಂಘಪರಿವಾರದ ಷಡ್ಯಂತ್ರವನ್ನು ಪ್ರಜ್ಞಾವಂತಿಕೆಯಿಂದ ಸೋಲಿಸಬೇಕು -ಪಿಎಫ್ಐ

ಬೆಂಗಳೂರು: ಹಿಂದುಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವಂತಹ ಬೆಳವಣಿಗೆಗಳು ಅವಿಭಜಿತ ದ.ಕ.ಜಿಲ್ಲೆ ಸಹಿತ ರಾಜ್ಯದ ಕೆಲವೊಂದು ಕಡೆಗಳಲ್ಲಿ ಕಂಡು ಬರುತ್ತಿವೆ. ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಬ್ಯಾನರ್ ಗಳನ್ನು ಕೂಡ ಕೆಲವೊಂದು ಕಡೆ ಅಳವಡಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ…

ಸುಳ್ಯ: ಬೈಕ್ ಮತ್ತು ಜೀಪು ನಡುವೆ ಭೀಕರ ಅಪಘಾತ; 9ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಸುಳ್ಯ: ಬೈಕ್ ಹಾಗೂ ಜೀಪು ಮಧ್ಯೆ ಅಪಘಾತ ನಡೆದು ಬೈಕ್ ನಲ್ಲಿದ್ದ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಪೆರಾಜೆಯ ಕುಂಬಳಚೇರಿ ಎಂಬಲ್ಲಿ ನಡೆದಿದೆ. ಪೆರಾಜೆಯ ಆರ್.ಡಿ. ವೆಂಕಪ್ಪ ರವರ ಪುತ್ರ ದರ್ಶನ್ ಮತ್ತು ಪೆರಾಜೆಯ…

error: Content is protected !!