dtvkannada

Month: September 2021

ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್‌: ರಾಜ್ಯದ ಹಲವೆಡೆ ಪ್ರತಿಭಟನೆ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ‘ಭಾರತ್ ಬಂದ್‌’ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್‌ ಮಾಲಿಕರು, ಆಟೋ, ಓಲಾ-ಉಬರ್‌ ಚಾಲಕರು, ಮಾಲಿಕರು, ಲಾರಿ ಮಾಲಿಕರ ಸಂಘಗಳು ಸೇರಿ ಬಹುತೇಕ ಸಂಘಟನೆಗಳು ರೈತರ…

ಅಬ್ಬರಿಸಿದ ಗುಲಾಬ್ ಚಂಡಮಾರುತ: ಇಬ್ಬರು ಮೀನುಗಾರರು ಸಾವು, ಒಬ್ಬ ನಾಪತ್ತೆ

ಹೈದರಾಬಾದ್: ಉತ್ತರ ಕರಾವಳಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಗುಲಾಬ್ ಚಂಡಮಾರುತದ ಅಬ್ಬರಕ್ಕೆ ಬೋಟ್ ಸಮತೋಲನ ಕಳೆದುಕೊಂಡಿದ್ದು ಆರು ಮೀನುಗಾರರ ಪೈಕಿ, ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅದೇ ವೇಳೆ ಒಬ್ಬರು ನಾಪತ್ತೆಯಾಗಿದ್ದಾರೆ. ಪಲಸಾ ಗ್ರಾಮದ ಮೂವರು ಮೀನುಗಾರರು ಸುರಕ್ಷಿತವಾಗಿ ಈಜಿ ದಡ…

ಮುಲ್ಕಿಯಲ್ಲಿ ಭೀಕರ ರಸ್ತೆ ಅಪಘಾತ; ಪಂಜ ನಿವಾಸಿ ಸ್ಥಳದಲ್ಲೇ ಮೃತ್ಯು

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಮುಲ್ಕಿಯ ಕ್ಷೀರಸಾಗರದ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಪಂಜ ನಿವಾಸಿ ರಘುನಾಥ್ ಪೂಜಾರಿ (40) ಮೃತಪಟ್ಟ ಯುವಕ. ಗಾಯಾಳುಗಳನ್ನು ಮುಲ್ಕಿ ಸಮೀಪದ…

ನೂತನ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಅಮೆರಿಕದಿಂದ ಹಿಂದಿರುಗಿ 24 ಗಂಟೆಗಳಿಗಿಂತಲೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 8:45 ರ ಸುಮಾರಿಗೆ ಹೊಸ ಸಂಸತ್ ಕಟ್ಟಡದ ನಿರ್ಮಾಣ ಸ್ಥಳಕ್ಕೆ ಅನಿರೀಕ್ಷಿತ ಭೇಟಿ ನೀಡಿದರು. ಮೋದಿ ಪ್ರಸ್ತಾವಿತ ಸೆಂಟ್ರಲ್ ವಿಸ್ಟಾ ಯೋಜನೆಯ ಸ್ಥಳದಲ್ಲಿ ಸುಮಾರು ಒಂದು…

ನನ್ನ ರಾಜೀನಾಮೆಗೆ ಪ್ರಧಾನಿ ಮೋದಿ ಕೂಡ ಆಶ್ಚರ್ಯ ಪಟ್ಟಿದ್ರು; ಮಾಜಿ ಮುಖ್ಯಮಂತ್ರಿ ಬಿಎಸ್ ವೈ

ಶಿರಾಳಕೊಪ್ಪ: ಒಬ್ಬ ಪುರಸಭೆ ಅಧ್ಯಕ್ಷ ರಾಜೀನಾಮೆ ಕೊಡಲು 10 ಬಾರಿ ಯೋಚಿಸುತ್ತಾನೆ. ಆದರೆ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಒತ್ತಡ ಇಲ್ಲದಿರುವಾಗ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ಬೇರೆಯವರಿಗೂ ಅವಕಾಶ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.…

ಲಡಾಕ್’ಗೆ ಸೈಕಲ್ ಮೂಲಕ ಯಾತ್ರೆ ಹೊರಟ ಸುಳ್ಯದ ಯುವಕ

ಸುಳ್ಯ, ಸೆ.27: ಸುಳ್ಯದಿಂದ ಲಡಾಕ್’ಗೆ ಸೈಕಲ್ ಮೂಲಕ ಯುವಕನೊಬ್ಬ ಪ್ರಯಾಣ ಬೆಳೆಸಿದ್ದು, ಸುಮಾರು 10 ತಿಂಗಳ ಸೈಕಲ್ ಪ್ರಯಾಣಕ್ಕೆ ಇಂದು ಸುಳ್ಯದಲ್ಲಿ ಚಾಲನೆ ನೀಡಲಾಯಿತು. ಈ ಯುವಕನ ಹೆಸರು ಅಸ್ಕರ್.. ದೇಶ ಸುತ್ತಾಡಿ ಐತಿಹಾಸಿಕ ಹಾಗೂ ದಾರ್ಮಿಕ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳುವ ಧ್ಯೇಯ…

ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು

ಕೊರಟಗೆರೆ: ಮದುವೆಗಾಗಿ ಕೈಸಾಲ ಮಾಡಿದ್ದ ಯುವಕನೋರ್ವ ಸಾಲ ತೀರಿಸಲಾಗದೆ ಮದುವೆಯಾದ ಐದೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ತೋವಿನಕೆರೆ ಗ್ರಾಮದಲ್ಲಿ ದುರ್ಘಟನೆ ಜರುಗಿದ್ದು ಚಿಕ್ಕಪ್ಪಯ್ಯನ ಮಗ ಹನುಮಂತರಾಜು (26) ನೇಣು…

ನೂತನ ಕೃಷಿ ಕಾಯ್ದೆ ವಿರೋಧಿಸಿ ಬೆಳ್ತಂಗಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಸ್ತೆ ತಡೆದು ಪ್ರತಿಭಟನೆ

ಕೇಂದ್ರ ಸರಕಾರದ ರೈತ ವಿರೋಧಿ ಮೂರು ಮಸೂದೆಗಳನ್ನು, ಕಾರ್ಮಿಕ ವಿರೋಧಿ ತಿದ್ದುಪದಿಗಳನ್ನು ಹಿಂಪಡೆಯಬೇಕು, ಸಾರ್ವಜನಿಕರ ದಿನಬಳಕೆ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡಿಸೆಲ್, ಆಹಾರ ಪದಾರ್ಥಗಳ ಬೆಲೆಯೇರಿಕೆ ವಿದ್ಯುತ್ ಹಾಗು ಸಾರ್ವಜನಿಕ ರಂಗಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರದ…

ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ.

ಬೆಂಗಳೂರು : “ಬತ್ತದ ತೊರೆ ಸ್ನೇಹ ಬಳಗ” ಕಾರಂತಜ್ಜನ ನೆರಳಿನಡಿಯಲ್ಲಿ ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ…

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಮತ್ತೊಂದು ಅಪಘಾತ; ಇಬ್ಬರು ದುರ್ಮರಣ

ಆನೇಕಲ್: ಬೈಕ್​ಗೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ಯುವಕ, ಯುವತಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದಿದೆ. ದಾವಣಗೆರೆ ಮೂಲದ ಪ್ರಭಾಕರ್(25), ಸಹನಾ‌(24) ಸಾವನ್ನಪ್ಪಿದ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಯುಟರ್ನ್ ತೆಗೆದುಕೊಳ್ಳುವಾಗ ಬಸ್ ಡಿಕ್ಕಿಯಾಗಿ…

error: Content is protected !!