dtvkannada

ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ

ಶ್ವಾನ ಪ್ರೀತಿ ಮನುಷ್ಯರಿಗೆ ಬಹಳ ಹೆಚ್ಚು. ನಾಯಿ ಇಷ್ಟಪಡುವ ಜನರು ತುಂಬಾ ಮಂದಿ. ವಿವಿಧ ತಳಿಯ, ವಿವಿಧ ಬಗೆಯ ನಾಯಿಯ ವಿಡಿಯೋಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಕೂಡ ಸಹಜವೇ ಆಗಿದೆ. ಅಂತಹ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ…

ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು, ಶಾಸಕರು ಈ ಪಿಡುಗಿನ ಬಗ್ಗೆ ಕಾನೂನು ತರಬೇಕು- ಪ್ರಮೋದ್ ಮುತಾಲಿಕ್ ಆಗ್ರಹ

ಕೊಪ್ಪಳ: ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್ ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ದಾವಣಗೆರೆಯಲ್ಲಿ ಒಂದುವರೆ ಲಕ್ಷ ಜನ ಲಿಂಗಾಯತರು ಮತಾಂತರವಾಗಿದ್ದಾರೆ. ಕೋಲಾರದಲ್ಲಿ 50 ಸಾವಿರ ಒಕ್ಕಲಿಗರು ಮತಾಂತರವಾಗಿದ್ದಾರೆ. ಬ್ರಾಹ್ಮಣರೂ ಕೂಡಾ ಮತಾಂತರವಾಗುತ್ತಿದ್ದಾರೆ. ಎಲ್ಲ ಜಾತಿಗಳನ್ನು ಮತಾಂತರ ಮಾಡುವ ವ್ಯವಸ್ಥಿತ ಷಡ್ಯಂತ್ರ ಮತ್ತು ಕುತಂತ್ರ…

ಬೇಕಾಬಿಟ್ಟಿ ಟೋಯಿಂಗ್ ಮಾಡುವಂತಿಲ್ಲ; ಸಂಚಾರ ಪೊಲೀಸ್ ವಿಭಾಗ ಖಡಕ್ ಸೂಚನೆ

ಬೆಂಗಳೂರು: ಇತ್ತೀಚಿಗೆ ಟೋಯಿಂಗ್ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ವಿಭಾಗದ ಪೊಲೀಸರು ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ. ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು. ಓರ್ವ ASI ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.…

ಜಮೀನಿನಲ್ಲಿ ಮೇಕೆ, ಕುರಿಗಳನ್ನು ಮೇಯಿಸಿದ್ದಕ್ಕೆ ಹಲ್ಲೆ; ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು

ಚಿಕ್ಕಮಗಳೂರು: ಜಮೀನಿನಲ್ಲಿ ಕುರಿಗಳನ್ನು ಮೇಯಿಸಿದ್ದಕ್ಕೆ ವ್ಯಕ್ತಿ ಮೇಲೆ ಇನ್ನೋರ್ವ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬೊಂಬೈಲ್ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಲ್ಲೆಗೊಳಗಾಗಿದ್ದ ಮಂಜುನಾಥ್ (53) ಮೃತ ದುರ್ದೈವಿ, ಬಸಗೋಡು ಗ್ರಾಮದ…

ಕಾಫಿ ಎಸ್ಟೇಟ್’ನಲ್ಲಿ 50ಕ್ಕೂ ಅಧಿಕ ಕಾಡುಕೋಣಗಳು ಪ್ರತ್ಯಕ್ಷ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂತನಕಾಡು ಎಂಬಲ್ಲಿ ಕಾಫಿ ಎಸ್ಟೇಟಿಗೆ ಕಾಡು ಕೋಣಗಳ ಹಿಂಡು ನುಗ್ಗಿದೆ. ಭೂತನಕಾಡುವಿನಲ್ಲಿ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದೆ. ಒಂದೇ ಕಡೆ ಸುಮಾರು 50ಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿವೆ. ಸಿದ್ದಗಂಗಾ ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದು…

ದಲಿತ ವ್ಯಕ್ತಿ ದೇಗುಲ ಪ್ರವೇಶ ಮಾಡಿದ್ದಕ್ಕೆ ದಂಡ ಪ್ರಕರಣ; ಎಂಟು ಜನರ ವಿರುದ್ಧ ಪ್ರಕರಣ ದಾಖಲು

ಕೊಪ್ಪಳ: ನಾಗನಕಲ್ ಗ್ರಾಮದಲ್ಲಿ ದಲಿತ ವ್ಯಕ್ತಿ ದೇವಸ್ಥಾನ‌ ಪ್ರವೇಶ ಮಾಡಿದ್ದಕ್ಕೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ದಂಡ ಹಾಕಿದ ಎಂಟು ಜನರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ದೇವಸ್ಥಾನದ ಅರ್ಚಕ…

ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಒಪ್ಪಿಕೊಂಡ ಸಂಘಪರಿವಾರದ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕುಂಬ್ರದಲ್ಲಿ SDPI ಪ್ರತಿಭಟನೆ

ಕುಂಬ್ರ,ಸೆ ,23:- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ನಡೆಸಿದ್ದು ನಾವೇ ಎಂದು ಬಹಿರಂಗ ವಾಗಿ ಒಪ್ಪಿಕೊಂಡು ಸವಾಲೆಸೆದ ಹಿಂದೂ ಮಹಾಸಭಾ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ SDPI ಕುಂಬ್ರ ಬ್ಲಾಕ್ ಸಮಿತಿ ವತಿಯಿಂದ ಕುಂಬ್ರ ಜಂಕ್ಷನ್ ನಲ್ಲಿ ಪ್ರತಿಭಟನೆ…

ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಆಗ್ರಹಿಸಿ CFI ಬೆಳ್ತಂಗಡಿ ಜಿಲ್ಲಾ ವತಿಯಿಂದ ಉಪತಹಶೀಲ್ದಾರಿಗೆ ಮನವಿ

ಬೆಳ್ತಂಗಡಿ, ಸೆ.24: ದ.ಕ ಜಿಲ್ಲೆಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾದಂತಹ ಜಿಲ್ಲೆ, ಆದರೆ ಈ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಮೆಡಿಕಲ್ ಕಾಲೇಜುಗಳಿಲ್ಲದೆ ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವೆಂಬುದು ಕನಸು ಮಾತ್ರ ಎಂಬ…

ಅಪಘಾತ, ಆತ್ಮಹತ್ಯೆ, ಅಗ್ನಿ, ಅತ್ಯಾಚಾರ, ಸ್ಪೋಟ ! ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಮೊನ್ನೆಯಷ್ಟೇ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಜೀವ ದಹನಗೊಂಡ ಘಟನೆ ಮಾಸುವ ಮುನ್ನವೇ ಇದೀಗ ಅಂಥದ್ದೇ ಮತ್ತೊದು ಅವಘಡ ಸಂಭವಿಸಿದೆ. ನಿನ್ನೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಗ್ಯಾಸ್ ಸಿಲಿಂಡರ್…

ಇಂದು ಬೆಂಗಳೂರು-ಚೆನ್ನೈ ಕಾದಾಟ: ಪುಟಿದೇಳುವ ವಿಶ್ವಾಸದಲ್ಲಿ ಕೊಹ್ಲಿ ಬಳಗ

ಶಾರ್ಜಾ: ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಎಂ. ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದ್ದು, ಸಾಂಪ್ರದಾಯಿಕ ಎದುರಾಳಿಗರ ಕಾದಾಟಕ್ಕೆ ಕ್ರಿಕೆಟ್…

error: Content is protected !!