dtvkannada

ದೆಹಲಿ: ಬಹುಅಂತಸ್ತಿನ ಕಟ್ಟಡವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದುರ್ಘಟನೆ ದೆಹಲಿಯ ಹಳೇ ಸೀಮಾಪುರಿ ಏರಿಯಾದಲ್ಲಿ ನಡೆದಿದೆ. ಇವರೆಲ್ಲ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಳೇ ಸೀಮಾಪುರಿ ಏರಿಯಾದಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಕೊನೇ ಅಂತಸ್ತು ಅಂದರೆ ಮೂರನೇ ಅಂತಸ್ತಿನಲ್ಲಿ ಇಂದು ಮುಂಜಾನೆ ಬೆಂಕಿ ಹೊತ್ತಿಕೊಂಡಿತ್ತು. 

ಮೃತರನ್ನು ಹೌರಿ ಲಾಲ್​, ರೀನಾ, ಅಶು ಮತ್ತು ರಾಧಿಕಾರ ಎಂದು ಗುರುತಿಸಲಾಗಿದೆ. ಇದರಲ್ಲಿ ಹೌರಿ ಲಾಲ್​ 59 ವರ್ಷದವರಾಗಿದ್ದು, ಶಾಸ್ತ್ರಿ ಭವನ್​​ನಲ್ಲಿ ಫ್ಯೂನ್​ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ರೀನಾ ಕಸಗುಡಿಸುವ ಕೆಲಸದವರಾಗಿದ್ದರು. ಉಳಿದವರಿಬ್ಬರು ಅವರ ಮಕ್ಕಳಾಗಿದ್ದಾರೆ.

ಇಂದು ಮುಂಜಾನೆ ಸುಮಾರು 4.00ಗಂಟೆ ಹೊತ್ತಿಗೆ ಅಗ್ನಿಶಾಮಕದಳದವರಿಗೆ ಕರೆ ಹೋಗಿದೆ. ಅವರು ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!