ಕಾಸರಗೋಡು: ರಸ್ತೆ ದಾಟುತ್ತಿದ್ದ ವೇಳೆ ಬಾಲಕನೊಬ್ಬನಿಗೆ ಬೈಕ್ ಢಿಕ್ಕಿ ಹೊಡೆದದ್ದರಿಂದ ರಸ್ತೆಗೆಸೆಯಲ್ಪಟ್ಟ ಬಾಲಕನ ಮೇಲೆ ಗೂಡ್ಸ್ ಆಟೊ ಹರಿದ ಪರಿಣಾಮ ಬಾಲಕ ದಾರುಣ ಮೃತಪಟ್ಟ ಘಟನೆ ಕಾಞಂಗಾಡ್ ನ ಅತಿಂಞಾಲ್ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಚುಳ್ಳಿಕೆರೆಯ ಬಿಜು ಎಂಬವರ ಪುತ್ರ ಆಶಿಲ್(13) ಮೃತ ಪಟ್ಟ ಬಾಲಕ. ಈತ ಕಳೆದ ರಾತ್ರಿ ಮನೆ ಸಮೀಪದ ಅಂಗಡಿಗೆ ತೆರಳಲು ರಸ್ತೆ ಅಡ್ಡ ದಾಟುತ್ತಿದ್ದಾಗ ಅತೀ ವೇಗದಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ.
ಡಿಕ್ಕಿಯ ಕಭಸಕ್ಕೆ ರಸ್ತೆಗೆಸೆಯಲ್ಪಟ್ಟ ಆಶಿಲ್ ದೇಹದ ಮೇಲೆ ಗೂಡ್ಸ್ ಆಟೋ ಹರಿದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿದಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.