dtvkannada

ಮಸ್ಕತ್ : ಕರ್ನಾಟಕ ರಾಜ್ಯೋತ್ಸವವನ್ನು ಕರುನಾಡ ಕ್ರೀಡಾಕೂಟ ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಮ್ ಒಮಾನ್ ನವೆಂಬರ್ 5ರಂದು ಮಸ್ಕತ್ ನ ಮಬೇಲ ನಗರದ ಅಲ್ ಹೇಲ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಕರುನಾಡ ಕ್ರೀಡಾಕೂಟದಲ್ಲಿ ಅನಿವಾಸಿ ಕನ್ನಡಿಗರು ಪಾಲ್ಗೊಂಡರು.

ಅಹರ್ನಿಶಿ ಕ್ರಿಕೆಟ್ ಪಂದ್ಯಾಕೂಟ, ಸಾಂಪ್ರದಾಯಿಕ ಹಗ್ಗಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದೃಷ್ಟ ಚೀಟಿ ಬಹುಮಾನ, ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಅನಿವಾಸಿ ಕನ್ನಡಿಗರ ನಡುವೆ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಮತ್ತು ಕನ್ನಡ ಪ್ರಜ್ಞೆ ಮೂಡಿಸುವ ಸಲುವಾಗಿ ಅರಬ್ ನಾಡಿನಲ್ಲೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಖಾಲಿದ್ ತಿಳಿಸಿದ್ದಾರೆ.

ಸ್ಪರ್ಧಾಕೂಟದಲ್ಲಿ ವಿಜೇತರಾದವರಿಗೆ ಬಾಳೆಗೊನೆ ಪ್ರಥಮ ಬಹುಮಾನವಾಗಿ ನೀಡಿ ಭಾಗವಹಿಸಿದ ಕನ್ನಡಿಗರೆಲ್ಲರೂ ವಿಜೇತರು ಮತ್ತು ಪರಸ್ಪರ ಹಂಚಿಕೊಂಡು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂಬ ಸಂದೇಶವನ್ನು ನೀಡಿರುವುದು ವಿಶೇಷವಾಗಿತ್ತು. ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಸಂಚಾಲಕರಾದ ಅಯ್ಯೂಬ್ ಆಲದಂಗಡಿ ವಹಿಸಿದ್ದರು. ಸೋಶಿಯಲ್ ಫೋರಮ್ ನ ಫಯಾಝ್ ಕ್ರೀಡಾಳುಗಳಿಗೆ ಶುಭಹಾರೈಸಿ, ಸಾಂದರ್ಭಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಅನಿವಾಸಿ ಉದ್ಯಮಿ ರಿಯಾಝ್ ಬಸ್ರೂರು, ಆಸಿಫ್ ಶೇಖ್, ಜಾವೇದ್, ಶಫೀಖ್ ಮುಂತಾದವರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!