';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೇರಳ: ಆಂಬ್ಯುಲೆನ್ಸ್ ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಬದಲು ಮದುವೆಯಾಗುವ ವಧು-ವರರು ಪ್ರಯಾಣಿಸಿ ಆಂಬ್ಯುಲೆನ್ಸ್‌ನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ ಕೇರಳ ರಾಜ್ಯದ ಕಾಯಂಗುಲಂ ಎಂಬಲ್ಲಿ ನಡೆದಿದೆ.
ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ರೀತಿ ಮದುವೆ ಬಳಿಕ ಸೈರನ್ ಹಾಕಿಕೊಂಡು ವಧು-ವರರನ್ನು ಕೆರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಘಟನೆಯ ವಿಡಿಯೋ ಈ ಎಲ್ಲಾ ಕಡೆ ವೈರಲ್ ಆಗಿದೆ. ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸಿದ ಸಾರಿಗೆ ಇಲಾಖೆ, ವಾಹನದ ಲೈಸನ್ಸ್ ರದ್ದು ಮಾಡಿದೆ ಜೊತೆಗೆ ರಿಜಿಸ್ಟರ್ ಕ್ಯಾನ್ಸಲ್ ಮಾಡಿದ್ದು, ಡ್ರೈವರ್ ನ ಲೈಸನ್ಸ್ ಕೂಡ ರದ್ದು ಮಾಡಲಾಗಿದೆ. ಆಂಬ್ಯುಲೆನ್ಸ್ ದುರುಪಯೋಗ ತಡೆಯಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋ ನೋಡಿ