';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಜೇಶ್ವರ, 25 Feb 2022: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಅಡ್ಕಸ್ಥಳ ಎಂಬಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಶೂರ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ನಡೆಯುತ್ತಿದ್ದ ಐತಿಹಾಸಿಕ ಉರೂಸ್ ಮುಬಾರಕ್ ನಾಳೆ ಸಮಾಪ್ತಿಗೊಳ್ಳಲಿದೆ.
ಕಳೆದ ಮೂರು ದಿನಗಳಿಂದ ಉರೂಸ್ ಪ್ರಯುಕ್ತ ಧಾರ್ಮಿಕ ಮತಪ್ರವಚನ ನಡೆಯುತ್ತಿದ್ದು, ಹಲವಾರು ಸಾದಾತುಗಳು ಉಲಮಾಗಳು ಭಾಗವಹಿಸಿದ್ದರು.
ಪ್ರಸ್ತುತ ಉರೂಸ್ ಕಾರ್ಯಕ್ರಮವು ನಾಳೆ ಶನಿವಾರ ಅಸ್ತಮಿಸಿದ ರವಿವಾರ ಸಮಾಪ್ತಿಗೊಳ್ಳಲಿದೆ. ಸಮಾರೂಪ ಸಮಾರಂಭದ ಅಧ್ಯಕ್ಷತೆಯನ್ನು ಅಸ್ಸಯ್ಯದ್ ಮೀರ್ ಝಾಹಿದ್ ಅಲ್ ಬುಖಾರಿ ಮಂಜೇಶ್ವರ ವಹಿಸಲಿದ್ದಾರೆ. ಉಡುಪಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರು ದುಃಆ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಮೌಲಾನಾ ಪೆರೋಡ್ ಅಬ್ದುಲ್ ರಹಿಮಾನ್ ಸಖಾಫಿ ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.