ಕೇರಳ: ಹಲವಾರು ಆಲ್ಬಮ್ ಹಾಗು ಕಿರು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಖ್ಯಾತ ಅಲ್ಬಮ್ ನಟಿ ಚಂದದ ಬೆಡಗಿ ಖ್ಯಾತಿಯ ರಿಫಾ ಮೆಹ್ನು (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ಸೀರ್ ಕೂರುಪರಂಬ ಸೇರಿದಂತೆ ಕೇರಳದ ಹಲವಾರು ಪ್ರಸಿದ್ಧ ಗಾಯಕರೊಂದಿಗೆ ನಟಿಸಿದ್ದ ನಟಿ ಕೆಲವು ವರ್ಷಗಳ ಹಿಂದೆ ಮೆಹ್ನಾಝ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷ ಪ್ರಾಯದ ಪುಟ್ಟ ಮಗು ಕೂಡ ಇತ್ತು.
ಇತ್ತೀಚೆಗೆ ದುಬೈಗೆ ತೆರಳಿದ್ದ ದಂಪತಿಗಳು ಅಲ್ಲಿ ಸುತ್ತಾಡುತ್ತಿದ್ದ ಹಲವಾರು ಚಿತ್ರಗಳನ್ನು ತಮ್ಮ ಇನ್ಸ್ತಗ್ರಮ್ ಖಾತೆಯ ಮೂಲಕ ಹಂಚಿಕೊಂಡಿದ್ದರು.
ನಿನ್ನೆ ರಾತ್ರಿಯೂ ಪತಿಯೊಂದಿಗಿದ್ದ ಚಿತ್ರವನ್ನು ಹಂಚಿಕೊಂಡಿರುವ ರಿಫಾ ಮೆಹ್ನು ಇದೀಗ ದುಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಿಫಾಳ ನಿಧನಕ್ಕೆ ತನ್ಸೀರ್ ಕೂರುಪರಂಬ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯ ನಂತರವಷ್ಟೇ ಇನ್ನಷ್ಚು ಮಾಹಿತಿ ತಿಳಿದು ಬರಲಿದೆ