ಕಾಂಚಿಪುರಂ: ಹಲ್ಲುಜ್ಜುತ್ತಿದ್ದಾಗ ಕಾಲು ಜಾರಿ ಬಿದ್ದ ಪರಿಣಾಮ ಟೂತ್‌ಬ್ರಶ್ ಗಂಟಲಿನಿಂದ ಹೊರಬಂದು ಬಾಯಿಯೊಳಗೆ ಸಿಕ್ಕಿ ಗಂಭೀರ ಮಹಿಳೆಯೊಬ್ಬರು ಗಾಯಗೊಂಡ ಘಟನೆ ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ರೇವತಿ (34) ಎಂದು ಗುರುತಿಸಲಾಗಿದೆ.
ಮಾ.8ರಂದು ಬೆಳಗ್ಗೆ ಹಲ್ಲುಜ್ಜುವ ವೇಳೆ ಮಹಿಳೆಯೊಬ್ಬರು ಕಾಲು ಜಾರಿ ನೆಲಕ್ಕೆ ಬಿದ್ದ ಪರಿಣಾಮ ಟೂಥ್ಬ್ರಷ್ ಬಾಯಿಯೊಳಗೆ ಸಿಲುಕಿ ಗಂಟಲಿಂದ ಹೊರಬಂದಿದೆ.
ಆದರೆ ಮನೆಯಲ್ಲಿ ಅದನ್ನು ಹೊರತೆಗೆಯಲು ಸಾಧ್ಯವಾಗದ ಕಾರಣ ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕರೆತರಲಾಗಿದೆ.
ಬಳಿಕ ವೈದ್ಯರು ಶಸ್ತ್ರ ಚಿಕಿತ್ಸೆ ನೆರವೇರಿಸಿ ಬ್ರಷ್ ಅನ್ನು ತುಂಡುಗೈದು ಹೊರತೆಗೆದಿದ್ದಾರೆ. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.
