dtvkannada

ನವದೆಹಲಿ: ಪಂಚರಾಜ್ಯ ಚುನಾವಣಾ ಮತಎಣಿಕೆ ಗುರುವಾರ (ಮಾರ್ಚ್ 08) ಬೆಳಗ್ಗೆ ಆರಂಭಗೊಂಡಿದ್ದು, ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಮುನ್ನಡೆ ಸಾಧಿಸಿದೆ. ಪಂಜಾಬ್ ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಪಡೆಯುತ್ತ ಭರ್ಜರಿ ಮುನ್ನಡೆ ಸಾಧಿಸಿದೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಏರಲು 59 ಸ್ಥಾನಗಳ ಅಗತ್ಯವಿದೆ. ಈವರೆಗಿನ ಮತಎಣಿಕೆ ಪ್ರಕಾರ ಆಮ್ ಆದ್ಮಿ ಪಕ್ಷ 70 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ, ಬಿಜೆಪಿ 07 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ಪಂಜಾಬ್ ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿತ್ತು. ಪಂಜಾಬ್ ನ ಕಾಂಗ್ರೆಸ್ ಮುಖಂಡ ಕ್ಯಾ.ಅಮರಿಂದರ್ ಸಿಂಗ್ ಹಾಗೂ ನವಜ್ಯೋತ್ ಸಿಂಗ್ ಸಿಧು ನಡುವಿನ ಒಳಜಗಳದ ಪರಿಣಾಮ, ಕ್ಯಾ.ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರು. ಬಳಿಕ ಚರಣ್ ಜಿತ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು.

ಇದೀಗ ಚುನಾವಣಾ ಫಲಿತಾಂಶ ಹೊರಬೀಳತೊಡಗಿದ್ದು, ಪಂಜಾಬ್ ಮತದಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು, ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಲು ಮುಂದಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು.

AAP ಮುನ್ನಡೆಗೆ ಪ್ರಮುಖ ಕಾರಣಗಳೇನು?
1.ಬದಲಾವಣೆಯ ಕೂಗು
ಪಂಜಾಬ್‌ನಲ್ಲಿ 1997ರಿಂದ 2001ರವರೆಗೆ ಅಂದರೆ ಸುಮಾರು 24 ವರ್ಷಗಳು ಬಿಜೆಪಿಯೊಂದಿಗೆ ಎಸ್‌ಡಿಎ ಪಾಲುದಾರಿಕೆಯೊಂದಿಗೆ ಸಾಂಪ್ರದಾಯಿಕವಾಗಿ ಅಧಿಕಾರ ನಡೆಸಿತ್ತು. 2007 ಮತ್ತು 2012 ಗೆದ್ದಿದ್ದ ಕಾಂಗ್ರೆಸ್‌ಗೆ ಪರ್ಯಾಯವಾಗಿದೆ. ಈ ಬಾರಿ ಪಂಜಾಬ್‌ನಲ್ಲಿ ಮತದಾರರು ಬದಲಾವಣೆಗೆ ಮತ ಹಾಕಿದ್ದಾರೆ. ಎರಡು ದೊಡ್ಡ ಪಕ್ಷಗಳ 70 ವರ್ಷಗಳ ಆಡಳಿತವನ್ನು ಮತದಾರರು ನೋಡಿದ್ದಾರೆ. ಹೀಗಾಗಿ ಬೇರೆ ಪಕ್ಷಕ್ಕೆ ಅವಕಾಶ ನೀಡುವ ಕಾಲ ಬಂದಿದೆ. ಈ ಬಾರಿ ನಾವು ಮೂರ್ಖರಾಗುವುದಿಲ್ಲ. ಭಗವಂತ್ ಮಾನ್ ಮತ್ತು ಕೇಜ್ರಿವಾಲ್‌ಗೆ ಅವಕಾಶ ನೀಡುತ್ತೇವೆ’ ಎಂಬ ಎಎಪಿ ಘೋಷಣೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತು.

ದೆಹಲಿ ಮಾದರಿ
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ದೆಹಲಿ ಮಾದರಿಯ ಆಡಳಿತದ ಮೂಲಕ ಪಂಜಾಬ್ ಮತದಾರರ ಗಮನ ಸೆಳೆದರು. ಗುಣಮಟ್ಟದ ಸರ್ಕಾರಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ಅಗ್ಗದ ದರದಲ್ಲಿ ನೀರು ಪೂರೈಕೆ ಅವರ ಪ್ರಮುಖ ಸಾಧನೆಗಳಾಗಿವೆ. ಹಾಲಿ ಮತ್ತು ಹಿಂದಿನ ಸರ್ಕಾರಗಳ ಅಧಿಕಾರ ದಾಹ, ವಿವಿಧ ವಲಯಗಳಲ್ಲಿ ಮಿತಿ ಮೀರಿದ್ದ ದರಗಳು, ಆರೋಗ್ಯ ಮತ್ತು ಶಿಕ್ಷಣದ ಖಾಸಗೀಕರಣ ಜನರಲ್ಲಿ ಬೇಸರ ಮೂಡಿಸಿತ್ತು.

By dtv

Leave a Reply

Your email address will not be published. Required fields are marked *

error: Content is protected !!