ಬೈಕ್ನಲ್ಲಿ ಜೊತೆಯಾಗಿ ಯಾತ್ರೆ ಹೊರಟ ಸಹೋದರರು ಜೊತೆ ಜೊತೆಯಾಗಿ ಖಬರ್ ನೆಡೆಗೆ ಯಾತ್ರೆಯಾದರು; ಕೆ.ಪಿ ಬಾತಿಶ್ ತೆಕ್ಕಾರು
ಬದುಕಿ ಬಾಳಬೇಕಿದ್ದ ಎರಡು ಸಣ್ಣ ಪ್ರಾಯದ ಎರಡು ಜೀವಗಳು ಅಲ್ಲಾಹನೆಡೆಗೆ ಮರಳಿದೆ.
ಪ್ರತಿ ಸಂತೋಷದ ಸಮಯಗಳಲ್ಲಿ ಕೇಳಿ ಬರುವ ದುಃಖ ವಾರ್ತೆಗಳು ಒಮ್ಮೆ ಪ್ರತಿಯೊಬ್ಬರನ್ನೂ ಶೋಕ ಸಾಗರಕ್ಕೆ ತಳ್ಳಿ ಬಿಡುತ್ತವೆ.
ಮನೆಯಲ್ಲಿ ತಂದೆ ತಾಯಿಯೊಂದಿಗೆ ಸಂತೋಷದಲ್ಲಿ ಮಾತನಾಡಿ ಹೊರಟ ಪುತ್ತೂರಿನ ಅರಿಯಡ್ಕದ ಸಿನಾನ್ ಮತ್ತು ಆತನ ಗೆಳೆಯ ಹಾಶಿರ್ ಬೈಕ್ ಹತ್ತಿ ಪುತ್ತೂರಿನತ್ತ ಸಂಚರಿಸುವಾಗ ಒಮ್ಮೆಯೂ ನೆನಸಿಕೊಂಡಿರಲಿಲ್ಲ ಇದು ನಮ್ಮ ಅಂತಿಮ ಯಾತ್ರೆ ಎಂದು.
ಮನೆಯಿಂದ ಪ್ರೀತಿಯಿಂದ ಬೀಳ್ಕೊಟ್ಟ ತಂದೆ ತಾಯಿಗಳಿಗೂ ಕೂಡ ಗೊತ್ತಿರಲಿಲ್ಲ ಇದು ನಮ್ಮ ಮಕ್ಕಳ ಅಂತಿಮ ಯಾತ್ರೆ ಎಂದು.
ಪುತ್ತೂರಿನ ಬೈಪಾಸ್ ಬಳಿ ಹಾಶಿರ್ ಮತ್ತು ಸಿನಾನ್ ಸಂಚರಿಸುತ್ತಿದ್ದ ಬೈಕ್ ಟಿಪ್ಪರ್ ಗೆ ಢಿಕ್ಕಿ ಹೊಡೆಯುತ್ತೆ ಈದುಲ್ ಫಿತ್ರ್ ನ ಸಂತೋಷದಲ್ಲಿದ್ದ ಸಿನಾನ್ ಮತ್ತು ಹಾಶಿರ್ ಕೆಲವೇ ಕ್ಷಣಗಳಲ್ಲಿ ಬೈಕ್ ನಿಂದ ಹೊರಗೆ ಎಸೆಯಲ್ಪಡುತ್ತಾರೆ ಇನ್ನಾಲಿಲ್ಲಾಹ್..
ಸಿನಾನ್ ಕೆಲವೇ ಕ್ಷಣಗಳಲ್ಲಿ ಅಲ್ಲಾಹನೆಡೆಗೆ ಮರಳುತ್ತಾನೆ.ಜೀವನ್ಮರಣದ ಪರಿಸ್ಥಿತಿಯಲ್ಲಿ ಹಾಶಿರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಆದರೆ ಅಲ್ಲಾಹನ ವಿಧಿ ಸಿನಾನ್ ಜೊತೆ ಬೈಕ್ ನಲ್ಲಿ ಯಾತ್ರೆ ಹೊರಟ ಹಾಶಿರ್ ಕೂಡ ಸಿನಾನ್ ಜೊತೆಗೆ ಖಬರ್ ನತ್ತ ಯಾತ್ರೆ ಹೊರಡುತ್ತಾನೆ.
ಜೊತೆಯಾಗಿ ಬೈಕ್ ನಲ್ಲಿ ಯಾತ್ರೆ ಹೊರಟ ಸ್ನೇಹಿತರು ಜೊತೆಯಾಗಿ ಖಬರಿನೆಡೆಗೆ ಯಾತ್ರೆಯಾಗುತ್ತಾರೆ.ಅಲ್ಲಾಹು ಸ್ವರ್ಗ ನೀಡಿ ಅನುಗ್ರಹಿಸಲಿ(ಆಮೀನ್)
ಸ್ನೇಹಿತರೇ ಮನಕಳುಕುವ ದೃಶ್ಯಗಳಿಗಾಗಿದೆ ನಾವು ಮೊನ್ನೆ (ಅಂದರೆ ಈದುಲ್ ಫಿತ್ರ್ ನ ಮರುದಿನ) ಸಾಕ್ಷಿಯಾಗಿರುವುದು.
ಶವಾಗಾರದಲ್ಲಿರಿಸಿದ ಸಹೋದರನ ಮಯ್ಯತ್ ಹೊರಗಡೆ ನಿಂತು ಕುಟುಂಬದವರ ಮುಗಿಲು ಮುಟ್ಟಿದ ಕಣ್ಣೀರುಗಳ ರೋಧನೆ, ತನ್ನ ಮಗ ಈಗ ಬರುತ್ತಾನೆ ಎಂದು ಬಾಗಿಲು ಬಳಿ ಕಾದು ಕುಳಿತಿರುವ ತಾಯಿ,ಮಗ ಮರಣ ಹೊಂದಿದ್ದಾನೆ ಎಂದು ಶಾಮಿಯಾನ ಹಾಕುವವರು ಮನೆಯತ್ತ ಬಂದಾಗ ಹೇ ನನ್ನ ಮಗನಿಗೆ ಏನೂ ಆಗಿಲ್ಲ ಅವನು ಈಗ ಬರುತ್ತಾನೆ ನೀವು ಹೋಗಿ ಎಂದು ಶಾಮಿಯಾನ ದವರಿಗೆ ಜೋರು ಮಾಡಿ ಕಳಿಸಿದ ಸಿನಾನ್ ನ ತಂದೆ.
ಅಲ್ಲಾಹ್ ಆ ಕುಟುಂಬದ ಅವಸ್ಥೆ ಹೇಳಿ ತೀರದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮರಣ ಹೊಂದಿದ ಹಾಶಿರ್ ನ ಮನೆಯ ಪರಿಸ್ಥಿತಿಯೂ ಇದೇ ಆಗಿರಬಹುದು.ಅಲ್ಲಾಹು ಕುಟುಂಬಕ್ಕೆ ಕ್ಷಮೆ ನೀಡಲಿ(ಆಮೀನ್)
ಪ್ರೀತಿಯ ಮಿತ್ರರೇ ವಾಹನ ಎಂಬುವುದು ಅಲ್ಲಾಹನು ನೀಡಿದ ಅನುಗ್ರಹಗಳಾಗಿವೆ ಎಚ್ಚರಿಕೆಯಿಂದ ಚಲಾಯಿಸಿ.
ಗಾಡಿಯ ಎಕ್ಸ್ ಲೇಟರ್ ಗಳ ಪರೀಕ್ಷಣೆ ಯಾತ್ರೆಯಲ್ಲಿ ಬೇಡ ಸಾವಧಾನವಾಗಿ ಸಂಚರಿಸೋಣ.
ಪ್ರತಿ ಯಾತ್ರೆಯಲ್ಲೂ ನನ್ನ ಮಗ ಈಗ ಬರುತ್ತಾನೆ ಎಂದು ಕಾಯುತ್ತಿರುವ ತಾಯಿ, ತಂದೆ ನನ್ನ ಸಹೋದರ ನಾನು ಹೇಳಿದ ಸಾಮಾಗ್ರಿಗಳನ್ನು ತೆಗೆದುಕೊಂಡು ಈಗ ಬರುತ್ತಾನೆ ಎಂದು ಕಾಯುತ್ತಿರುವ ನಮ್ಮ ಸಹೋದರ ಸಹೋದರಿಯರು.ನಮ್ಮೆಲ್ಲ ಕುಟುಂಬದವರು, ಸ್ನೇಹಿತರು ನಮ್ಮ ಬರುವಿಕೆಗಾಗಿ ಕಾಯುತ್ತಿರುತ್ತಾರೆ ಎಂಬ ನೆನಪಿರಲಿ, ಶ್ರದ್ಧೆಯಿಂದ ವಾಹನ ಸಂಚರಿಸೋಣ.
ಸಿನಾನ್ ಮತ್ತು ಹಾಶಿರ್ ನ ಮರಣ ನಮಗೊಂದು ಎಚ್ಚರಿಕೆಯ ಕರೆಗಂಟೆಯಾಗಲಿ
ಅಲ್ಲಾಹು ಸಹೋದರರಿಗೆ ಮಗ್ಫೀರತ್ ನೀಡಲಿ(ಆಮೀನ್)