ಉಪ್ಪಿನಂಗಡಿ: ನಕ್ಷತ್ರ ಚಾರಿಟೇಬಲ್ ಪೌoಡೇಶನ್ ಟ್ರಸ್ಟ್(ರಿ) ಉರುವಾಲುಪದವು ಲೋಕಾರ್ಪಣೆ
ಅಶಕ್ತರ ಬಾಳಲ್ಲಿ ನಕ್ಷತ್ರ ಚಾರಿಟೇಬಲ್ ಟ್ರಸ್ಟ್ ಮಿನುಗುತ್ತಿರಲಿ-ಸೆಯ್ಯದ್ ಸಾದಾತ್ ತಂಙಳ್
ಬಡವರನ್ನು ಗುರುತಿಸುವಲ್ಲಿ ಜಾತಿ,ಧರ್ಮ ತೊಡಕಾಗದಿರಲಿ -ಎಸ್.ಬಿ ದಾರಿಮಿ
ಉಪ್ಪಿನಂಗಡಿ: ನಕ್ಷತ್ರ ಚಾರಿಟೇಬಲ್ ಪೌoಡೇಶನ್ ಟ್ರಸ್ಟ್(ರಿ) ಉರುವಾಲುಪದವು ಇದರ ನೂತನ ಕಚೇರಿ ಉದ್ಘಾಟನೆ ಹಾಗು ಸಂಸ್ಥೆ ಲೋಕಾರ್ಪಣೆ ಕಾರ್ಯಕ್ರಮ ಆದಿತ್ಯವಾರದಂದು ಉಪ್ಪಿನಂಗಡಿ ಸಮೀಪದ ಉರುವಾಲುಪದವುನಲ್ಲಿ ನಡೆಯಿತು. ಬಡವರ ಪಾಲಿಗೆ ಬೆಳಕಾಗುವ ಮೂಲಕ ಆಶಕ್ತರ ಬಾಳಲ್ಲಿ ನಕ್ಷತ್ರ ಚಾರಿಟೇಬಲ್ ಟ್ರಸ್ಟ್ ಮಿಂಚುತ್ತಲೇ ಇರಲಿ…