dtvkannada

Author: dtv

“ಕಾರ್ಕಳ ಉತ್ಸವ” ಕಾರ್ಯಕ್ರಮದ ಯಕ್ಷಗಾನದಲ್ಲಿ ಹಿಜಾ‌ಬ್‌ದಾರಿಣಿಯರಿಗೆ ಅವಮಾನ; ವೀಡಿಯೋ ವೈರಲ್

ಉಡುಪಿ: ಕಾರ್ಕಳ ಉತ್ಸವದಲ್ಲಿ ನಡೆದ ಯಕ್ಷಗಾನದ ತುಣುಕೊಂದು ಸದ್ಯ ವೈರಲ್‌ ಆಗುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಯಕ್ಷಗಾನ ತುಣುಕಿನಲ್ಲಿ ಕೆಲದಿನಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದವೆಬ್ಬಿಸಿದ ಹಿಜಾಬ್‌ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವಿಚಾರವನ್ನು ತೆಂಕುತಿಟ್ಟು ಯಕ್ಷಗಾನದ…

ಪುತ್ತೂರು ನಿವಾಸಿ ಅಶ್ರಫ್ ಪಡೀಲ್ ದುಬೈ‌ಯಲ್ಲಿ ನಿಧನ; ದಫನ ಕ್ರಿಯೆ ನೆರವೇರಿಸಿದ ಯುಎ‌ಇ ಅನಿವಾಸಿ ಕನ್ನಡಿಗರ ಒಕ್ಕೂಟ

ಯುಎಇ: ನಿನ್ನೆ ಹೃದಯಘಾತದಿಂದ ನಿಧನರಾದ ಪುತ್ತೂರು ಸಮೀಪದ ಅಶ್ರಫ್ ಪಡೀಲ್ ಅವರ ಮೃತದೇಹವನ್ನು ದುಬೈ ಅಲ್‌ಕೋಸ್ ಕಬರಸ್ತಾನದಲ್ಲಿ ಧಫನ ಮಾಡಲಾಯಿತು. ಅನಿವಾಸಿ ಕನ್ನಡಿಗರ ಒಕ್ಕೂಟ ಸಂಘಟನೆಯ ಪದಾಧಿಕಾರಿಗಳಾದ ರಿಯಾಝ್ ಜೋಕಟ್ಟೆ, ಸಾದಿಕ್, ನಾಸಿರ್ ಹಾಗು ಮೃತರ ಸಂಭಂದಿಕರು ಜೊತೆಗೂಡಿ ಸಂಭಂದಪಟ್ಟ ದಾಖಲೆ‌ಗಳನ್ನು…

ಕಲ್ಲಡ್ಕ: ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಕಾರು

ಕಲ್ಲಡ್ಕ: ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಎಂಬಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಟ್ಲ: 20 ವರ್ಷದ ಯುವಕ ನೇಣುಬಿಗಿದು ಆತ್ಮಹತ್ಯೆ

ವಿಟ್ಲ: 20 ವರ್ಷದ ಯುವಕನೊಬ್ಬ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಮುಡ್ನೂರು ಬಳಿ ನಡೆದಿದೆ. ಯುವಕನನ್ನು ದೀಪಕ್ ಕುಮಾರ್ (20) ಎಂದು ಗುರುತಿಸಲಾಗಿದೆ.ದೀಪಕ್ ಕುಮಾರ್ ಹತ್ತನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆತನು…

ಉಡುಪಿ: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತ್ಯು

ಉಡುಪಿ: ತೆಂಗಿನ ಮರದಿಂದ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಮಲ್ಪೆಯ ಈಶ್ವರನಗರದಲ್ಲಿ ನಡೆದಿದೆ. ತೆಂಗಿನಕಾಯಿ ಕೊಯ್ಯುವ ಕೆಲಸ ಮಾಡಿಕೊಂಡಿದ್ದ ರವಿ (46) ಎಂಬವರು ನಿನ್ನೆ ಈಶ್ವರನಗರದ ನಿವಾಸಿ ಜೈಕರ್ ಎಂಬವರ ಮನೆಯ ತೆಂಗಿನ ಮರದಿಂದ ತೆಂಗಿನಕಾಯಿ…

ಖಾಸಗಿ ಬಸ್ ಭೀಕರ ಅಪಘಾತ; 8 ಮಂದಿ ಸಾವು, 20ಕ್ಕೂ ಅಧಿಕ ಮಂದಿ ಗಂಭೀರ

ತುಮಕೂರು: ಖಾಸಗಿ ಬಸ್ ಒಂದು ಪಲ್ಟಿ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಪಾವಗಡದಲ್ಲಿ ಇಂದು ನಡೆದಿದೆ. ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಬಸ್ಸಿನಲ್ಲಿದ್ದ 25ಕ್ಕೂ…

ಪ್ರಿಯಕರನಲ್ಲಿ ಮದುವೆಯಾಗುವಂತೆ ಬೇಡಿಕೆಯಿಟ್ಟ ಪ್ರಿಯತಮೆ; ರೊಚ್ಚಿಗೆದ್ದ ಪ್ರಿಯತಮನಿಂದ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಪ್ರಿಯತಮೆಯ ಬರ್ಬರ ಹತ್ಯೆ..!!

ಬೆಂಗಳೂರು: ತನ್ನ ಪ್ರಿಯಕರನಲ್ಲಿ ಮದುವೆಯಾಗುವಂತೆ ಕೇಳಿದ ಯುವತಿಗೆ ಪ್ರಿಯತಮನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಗರದಲ್ಲಿ ನಡೆದಿದೆ. ಈ ಘಟನೆಯು ಎರಡು ದಿನಗಳ ಹಿಂದೆ ತಡವಾಗಿ ಬೆಳಕಿಗೆ ಬಂದಿದ್ದು, ದಾನೇಶ್ವರಿ ಎಂಬ ಯುವತಿಯ ಮೇಲೆ ಶಿವಕುಮಾರ್…

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ KSRTC ಬಸ್; ಇಬ್ಬರು ಯುವಕರು ದುರ್ಮರಣ

ಉಪ್ಪಿನಂಗಡಿ: ದ್ವಿಚಕ್ರ ವಾಹನ’ಕ್ಕೆ KSRTC ಬಸ್ಸ್ ಡಿಕ್ಕಿ ಹೊಡೆದು ಇಬ್ಬರು ಸಹೋದರರು ಮೃತಪಟ್ಟ ದಾರುಣ ಘಟನೆ ಗುರುವಾಯನಕೆರೆ – ಮೂಡಬಿದಿರೆ ಹೆದ್ದಾರಿಯ ಗರ್ಡಾಡಿ ಎಂಬಲ್ಲಿ ಇಂದು ಸಂಜೆ ನಡೆದಿದೆ. ಉಪ್ಪಿನಂಗಡಿಯ ಹೀರೆಬಂಡಾಡಿ ಸಮೀಪದ ಆನಾಡ್ಕ ನಿವಾಸಿ ಸಾದಿಕ್(35) ಹಾಗೂ ಆತನ ಸಹೋದರ…

ಮನೆಯಿಂದ ಹೊರಟ 16 ವರ್ಷದ ಯುವಕ ನಾಪತ್ತೆ; ದೂರು ದಾಖಲು

ಕೊಣಾಜೆ: ಬೋಳಿಯಾರ್ ಗ್ರಾಮದ ಕಾಪಿಕಾಡು ಎಂಬಲ್ಲಿ ವಾಸ್ತವ್ಯ ಹೂಡಿದ್ದ ಹೈದರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (16) ನಾಪತ್ತೆಯಾಗಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಮುಡಿಪುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಏಕಾಏಕಿ…

ಅನ್ಯಧರ್ಮದ ಮ್ಯಾನೇಜರ್‌ ಜೊತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಜೀವಬೆದರಿಕೆ; ದೂರು ದಾಖಲು

ಬಂಟ್ವಾಳ: ಬಸ್‌ನಲ್ಲಿ ಕಂಪೆನಿಯ ಮ್ಯಾನೇಜರ್‌ ಜೊತೆ ಹೋಗುತ್ತಿದ್ದ ಮಹಿಳಾ ಸುಪರ್ವೈಸರ್ ಅನ್ನು ತಡೆದು ನಿಲ್ಲಿಸಿ ಜೀವ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸರಗೋಡು ಮೂಲದ ಮಹಿಳೆಯೊಬ್ಬರು ಖಾಸಗಿ ಕಂಪೆನಿಯಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು, ಮಾ.…

error: Content is protected !!