dtvkannada

Author: dtv

ಬೈಕ್ ಸ್ಕಿಡ್ ಆಗಿ ಬಿದ್ದವರ ಮೇಲೆ ಹರಿದ ಲಾರಿ; ಮದುವೆ ಆಮಂತ್ರಣ ಕೊಡುತ್ತಿದ್ದ ವರ ಮಸಣ ಸೇರಿದ

ಕೊಡಗು: ವಿಪರೀತ ಮಳೆಗೆ ಬೈಕ್ ಸ್ಕಿಡ್ ಆಗಿ ಬಿದ್ದು ತಕ್ಷಣ ಹಿಂದಿನಿಂದ ಬಂದ ಲಾರಿಯೊಂದು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿಯ ಸಂಪಿಗೆ ಕಟ್ಟೆ ಬಳಿ ನಡೆದಿದೆ. ಮೃತರ ಬ್ಯಾಗ್ನಲ್ಲಿ ಸಿಕ್ಕ ಆಮಂತ್ರಣ ಪತ್ರಿಕೆಯಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ…

ಅಪಾಯವನ್ನು ಕೈ ಬೀಸಿ ಕರೆಯುತ್ತಿದೆ ಬ್ಯಾರಿಕೇಡ್: ಸಂಟ್ಯಾರ್’ ಬಳಿ ಯಮನಂತೆ ರಸ್ತೆಯಲ್ಲಿ ಕಾದು ನಿಂತಿರುವ ಡೇಂಜರ್ ಬ್ಯಾರಿಕೇಟ್

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ರಸ್ತೆಯ‌ ಎರಡು ಬದಿಗಳಲ್ಲಿ ಸಣ್ಣ ಸಣ್ಣ ಬ್ಯಾರಿಕೇಟ್ ಹಾಕಿದ್ದು ವಾಹನ ಸವಾರರರನ್ನು ಗೊಂದಲಕ್ಕೀಡು ಮಾಡಿದೆ. ವಾರಗಳ ಹಿಂದೆ ಸಂಟ್ಯಾರಿನಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿತ್ತು. ಅಪಘಾತದಲ್ಲಿ ಬೈಕ್ ಸವಾರ ಕೆಲ ದಿನಗಳ…

ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ; ಧೋನಿ ಮಾರ್ಗದರ್ಶನದಲ್ಲಿ ಮುನ್ನಡೆಯಲಿರುವ ಟೀಂ ಇಂಡಿಯಾ

ಐಸಿಸಿ ಟಿ 20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ಮುನ್ನಡೆಸಲಿರುವ ಈ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ 3 ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿರಲಿದ್ದಾರೆ. ಐಸಿಸಿ…

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ ಮುಖಂಡ ಸದಾಶಿವ ಉಳ್ಳಾಲ ಆಯ್ಕೆ

ಮಂಗಳೂರು : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡರಾದ ಸದಾಶಿವ್ ಉಳ್ಳಾಲ ರವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಸದಾಶಿವ ಉಳ್ಳಾಲ ರವರು ಎಮ್.ಎ ಪದವೀಧರರಾಗಿದ್ದಾರೆ.1978 ರಲ್ಲಿ ರಾಜಕೀಯಕ್ಕೆ…

ಕುಂಬ್ರದಲ್ಲಿ ನವೀಕರಣಗೊಂಡು ಮತ್ತೆ ಶುಭಾರಂಭಗೊಂಡ ಹೊಟೇಲ್ ಫುಡ್ ಕೊರ್ಟ್

ಪುತ್ತೂರು: ನವೀಕರಣದ ನಿಮಿತ್ತ ಕೆಲ ತಿಂಗಳ ಕಾಲ ವ್ಯವಹಾರ ಸ್ಥಗಿತಗೊಂಡಿಡ್ದ ‘ಹೋಟೆಲ್ ಫುಡ್ ಕೊರ್ಟ್’ ಇದೀಗ ನವೀಕರಣಗೊಂಡು ಸೆಪ್ಟೆಂಬರ್ 6 ರಂದು ಶುಭಾರಂಭಗೊಂಡಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದ ಇಂಡಿಯನ್ ಶಾಮಿಯಾಣ & ಆರೆಂಜರ್ಸ್ ಮುಂಭಾಗದಲ್ಲಿರುವ ಸಸ್ಯಹಾರಿ ಮತ್ತು ಮಾಂಸಹಾರಿ…

ತೈಲ ಬೆಲೆಏರಿಕೆ ಪ್ರಬಾವ; ರಾಜಧಾನಿಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಲ

ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಮಿತಿಮೀರಿದೆ. ಬೈಯ್ಯಪ್ಪನಹಳ್ಳಿಯಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ಗಳಿಂದ ಪೆಟ್ರೋಲ್ ಕಳವು ಮಾಡಲಾಗಿದೆ. ಪೆಟ್ರೋಲ್ ಕದಿಯುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯಪುರ: ಜೆಸಿಬಿ ದುರಸ್ತಿ ವೇಳೆ ಇಬ್ಬರು ಮೆಕಾನಿಕ್ಗಳ ದುರ್ಮರಣ

ವಿಜಯಪುರ: ಜೆಸಿಬಿ ದುರಸ್ತಿ ವೇಳೆ ಇಬ್ಬರು ಮೆಕಾನಿಕ್’ಗಳು ದುರ್ಮರಣ ಆಗಿರುವ ಘಟನೆ ವಿಜಯಪುರದ ಇಂಡಿ ರಸ್ತೆಯಲ್ಲಿ ಸಂಭವಿಸಿದೆ. ಜೆಸಿಬಿ ಡೋಸರ್ನ ಹೈಡ್ರಾಲಿಕ್ನಲ್ಲಿ ಸಿಲುಕಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ. ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕದಲ್ಲಿ ದುರಂತ ಸಂಭವಿಸಿದ್ದು, ಮೆಕಾನಿಕ್ಗಳಾದ ರಫೀಕ್ (35), ಅಯೂಬ್…

ನಡು ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಫುಲ್ ಟೈಟಾದ ಕುಡುಕನ ರಂಪಾಟ

ಹಾಸನ: ಕುಡಿದ ಅಮಲಿನಲ್ಲಿ ಇಬ್ಬರು ಅಪರಿಚಿತರು ಹುಚ್ಚಾಟ ಮೆರೆದಿರುವ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ.ನಿಟ್ಟೂರು ಸರ್ಕಲ್‍ನ ನಡುರಸ್ತೆಯಲ್ಲೇ ತೂರಾಡುತ್ತಾ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಎಣ್ಣೆ ನಶೆಯಲ್ಲಿ ಕಿತ್ತಾಟ ಅತಿರೇಕಕ್ಕೆ ಹೋಗಿದೆ. ಪರಿಣಾಮ ದೊಣ್ಣೆಯಿಂದ ಎದುರಿಗಿದ್ದವನ ತಲೆಗೆ ಗಂಭೀರವಾಗಿ ಹಲ್ಲೆ ಮಾಡಿದ್ದು, ಆತ ಅಲ್ಲೆ ಕುಸಿದು…

ಮಕ್ಕಳಿಂದ ಅರಿಶಿನದಿಂದ ತಯರಾದ ಗಣಪನ ಮೂರ್ತಿ ತಯಾರಿಕೆಯ ಪರಿಸರ ಸ್ನೇಹಿ ಅಭಿಯಾನ

ಮಡಿಕೇರಿ: ಕೊಡಗಿನಲ್ಲಿ ಮಕ್ಕಳಿಂದ ತಯಾರಾಗುತ್ತೀರುವ ಪರಿಸರ ಸ್ನೇಹಿ ಅರಿಶಿಣ ಗಣೇಶ ಮೂರ್ತಿ ತಯಾರಿಕೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.ಕೊಡಗು ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಶಾಲಾ-ಕಾಲೇಜಿನ ಇಕೋ ಕ್ಲಬ್/ಎನ್.ಎಸ್.ಎಸ್.ಘಟಕಗಳ ಮೂಲಕ ಮಕ್ಕಳು…

ಹಿಂದೂಗಳ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ: ಬಜ್ಪೆ ಗುರುಪುರ ನಿವಾಸಿ ಬಂಧನ

ಮಂಗಳೂರು: ಹಿಂದೂಗಳ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೊರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಗುರುಪುರ ಗ್ರಾಮದ ಮೊಹಮ್ಮದ್ ಅಲಿ ಎಂದು ತಿಳಿದು ಬಂದಿದೆ. ಹಿಂದೂ ಹೆಸರಲ್ಲಿ…

error: Content is protected !!