dtvkannada

Month: September 2021

ಡಾಬಾದಲ್ಲಿ ಊಟ ಮಾಡಿ ಬರುವಾಗ ಭೀಕರ ಅಪಘಾತ: ಇಬ್ಬರು ಯುವಕರು ದುರ್ಮರಣ

ಬೆಳಗಾವಿ: ಡಾಬಾದಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ನಗರದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ ಬಳಿಯ ಯಮನಾಪುರ ಸಮೀಪದ ಬರ್ಡೆ…

ಕರಾವಳಿಯಲ್ಲಿ ಇಂದಿನಿಂದ ಮಳೆ ತೀವ್ರತೆ ಹೆಚ್ಚಳ; ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಮಂಗಳೂರು: ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಸೆ. 12ರವರೆಗೂ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ,…

ಬಿಜೆಪಿ, ಸಿಪಿಐಎಂ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆ; ಹಲವರಿಗೆ ಗಂಭೀರ ಗಾಯ

ಅಗರ್ತಲ: ತ್ರಿಪುರಾದ ಹಲವೆಡೆ ಆಡಳಿತಾರೂಢ ಬಿಜೆಪಿ ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವೆ ಬುಧವಾರ ಹಿಂಸಾತ್ಮಕ ಘರ್ಷಣೆ ನಡೆದಿದೆ.ಗೋಮತಿ ಜಿಲ್ಲೆಯ ಉದಯ್‌ಪುರದಲ್ಲಿ ಸಿಪಿಐ(ಎಂ)ನ ಯುವ ಘಟಕ ‘ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ)’ ಮೆರವಣಿಗೆ ಹಮ್ಮಿಕೊಂಡಿತ್ತು. ಮೆರವಣಿಗೆ ವೇಳೆ ಕೆಲವು ಕಾರ್ಯಕರ್ತರು…

ಸ್ಕೂಟರ್’ನ ಹ್ಯಾಂಡಲ್ ಒಳಗೆ ಪ್ರತ್ಯಕ್ಷವಾದ ನಾಗರಹಾವು; ಉರಗತಜ್ಞನ ಚಮತ್ಕಾರಿ ವೀಡಿಯೋ ಮತ್ತೆ ವೈರಲ್

ಹಾವು ಹಿಡಿಯುವ ಕಲೆ ಅಷ್ಟು ಸುಲಭವಲ್ಲ. ಅಪಾಯಕಾರಿಯೂ ಹೌದು. ವಿಷಕಾರಿ ಹಾವು ಹಿಡಿಯುವಲ್ಲಿ ಸಾಮಾನ್ಯ ಜನರು ಎಂದೂ ಮುಂದಾಗಬಾರದು. ಪರಿಣಿತರು ಹಾಗೂ ತರಬೇತಿ ದಾರರು ಮಾತ್ರ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗುತ್ತಾರೆ.  ಇದೀಗ ಫುಲ್ ಸುದ್ದಿಯಲ್ಲಿವ ವಿಡಿಯೋದಲ್ಲಿ ನಾಗರಹಾವು ಸ್ಕೂಟರ್ನ ಹ್ಯಾಂಡಲ್…

ವಿರಾಟ್ ಕೊಹ್ಲಿಗೆ ಸೆಡ್ಡು ಹೊಡೆದ ರೋಹಿತ್! ಟಿ20 ವಿಶ್ವಕಪ್’ನಲ್ಲಿ ಅಂಬಾನಿ ಹುಡುಗರದ್ದೇ ಮೇಲುಗೈ

ಐಸಿಸಿ ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದ ನಂತರ, ಆ ವಿಚಾರದ ಬಗ್ಗೆಯೇ ಚರ್ಚೆ ಮುಂದುವರಿದಿದೆ. 15 ಸದಸ್ಯರ ತಂಡದಲ್ಲಿ, ಕೆಲವು ಮುಖಗಳು ಅಚ್ಚರಿಗೊಳಿಸಿದ್ದರೆ, ಕೆಲವು ಆಟಗಾರರು ಆಯ್ಕೆಯಾಗದೆ ಇನ್ನಷ್ಟು ಆಶ್ಚರ್ಯಚಕಿತರಾಗಿಸಿದ್ದಾರೆ. IPL ನ ಯಾವ ಫ್ರಾಂಚೈಸ್‌ನ ಎಷ್ಟು ಆಟಗಾರರನ್ನು…

ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ; ದೇಶದಲ್ಲಿ ಮಳೆಯಿಂದ ಆಪತ್ತು ಕಾಡಲಿದೆ- ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ಹಾಸನ: ‘ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಆಪತ್ತು ಕಾಡಲಿದೆ. ಭೂಮಿ ನಡುಗಲಿದೆ, ರಾಜ ಭಯ ಎಲ್ಲವೂ ಇದೆ. ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ’ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಸ್ಚರ್ಣಗೌರಿ ಪೂಜೆಯಲ್ಲಿ ಪಾಲ್ಗೊಂಡ ಕೋಡಿಮಠದ ಶ್ರೀ ಭವಿಷ್ಯ…

ವಾಟ್ಸ್ಆ್ಯಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಸ್ಫೋಟಕ ಮಾಹಿತಿ ಬಹಿರಂಗ

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲೆಕೇಶನ್ ವಾಟ್ಸ್ಆ್ಯಪ್ ಇದೀಗ ತನ್ನ ಗೌಪ್ಯತೆ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದೆ. ವಾಟ್ಸ್ಆ್ಯಪ್ ಯಾವುದೇ ಕಾರಣಕ್ಕೂ ಬಳಕೆದಾರರ ಖಾಸಗಿ ಸಂದೇಶಗಳನ್ನು ಓದಲು ಸಾಧ್ಯವೇ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ. ಹೀಗಿರುವಾಗ ಪ್ರೋ…

ಖೋಟಾ ನೋಟು ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿದ ಸಂಪ್ಯ ಪೊಲೀಸರ ತಂಡ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು: ಖೋಟಾನೋಟು ಪ್ರಕರಣವೊಂದರಲ್ಲಿ ಆರೋಪಿಯಾಗಿ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.ಕಲಂದರ್ ಸಿದ್ದೀಕ್(41)ಬಂಧಿತ ಆರೋಪಿ. ಈತ ಖೋಟಾನೋಟು ಪ್ರಕರಣವೊಂದಕ್ಕೆ ಸಂಭಂದಿಸಿ ಸುಮಾರು 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಮೂಲತಃ ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ನಿವಾಸಿ ಮಹಮ್ಮದ್…

ದಕ್ಷಿಣ ಕನ್ನಡ, ಕೊಡಗು ಸೇರಿ ಇತರೆ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ರದ್ದು:

ಬೆಂಗಳೂರು: ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನದಲ್ಲಿ ಇದುವರೆಗ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂವನ್ನು ತೆರವುಗೊಳಿಸಲು ಆದೇಶಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ಕಂಡುಬಂದ ಕಾರಣ ಈ…

ಗಣೇಶೋತ್ಸವಕ್ಕೆ ಹೊಸ ಮಾಗಸೂಚಿ; ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಸರಕಾರ

ಬೆಂಗಳೂರು: ಗಣೇಶೋತ್ಸವ ಸಮಿತಿಯ ಭಾರೀ ಪ್ರತಿಭಟನೆಗೆ ಸರಕಾರ ಮಣಿದಿದೆ. ಗಣೇಶೋತ್ಸವ ಆಚರಣೆಗೆ ಇದ್ದ ಗೈಡ್’ಲೈನ್ಸ್ ಬದಲಾಗಿದ್ದು, ಗಣೇಶೋತ್ಸವಕ್ಕೆ 3 ದಿನವಿದ್ದ ಅವಕಾಶವನ್ನು ಗರಿಷ್ಟ 5 ದಿನಗಳಿಗೆ ಏರಿಸಲಾಗಿದೆ. ಜೊತೆಗೆ ಒಂದು ವಾರ್ಡಿನಲ್ಲಿ ಒಂದೇ ಗಣೇಶ ಪ್ರತಿಷ್ಠಾಪನೆ ಅವಕಾಶವನ್ನು ಹಿಂಪಡೆಯಲಾಗಿದೆ. ಮಾತ್ರವಲ್ಲದೆ ವೀಕೆಂಡ್…

error: Content is protected !!