dtvkannada

Month: July 2023

ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡುವ ಮೂಲಕ ಬಜರಂಗದಳವನ್ನು ಮಟ್ಟ ಹಾಕಬಹುದು ಎನ್ನುವುದು ನಿಮ್ಮ ಭ್ರಮೆ

ಸರಕಾರ ಹಿಂದು-ಮುಸ್ಲಿಂ ಬೇಧವಿಲ್ಲದೇ ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣಬೇಕು

ಗೋವಿನ ರಕ್ಷಣೆಗಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ- ದ.ಕನ್ನಡ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ

ಮಂಗಳೂರು: ಬಜರಂಗದಳದ ಕಾರ್ಯಕರ್ತರ ಗಡೀಪಾರು ಮಾಡುವ ಮೂಲಕ ಬಜರಂಗದಳವನ್ನು ಮಟ್ಟ ಹಾಕ್ತೇವೆನ್ನುವುದು ಭಾವಿಸಿದ್ರೆ ಅದು ಭ್ರಮೆ ಎಂದು ಬಜರಂಗದಳದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಗುಡುಗಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರೀಯಿಸಿದ ಪುನೀತ್ ಅತ್ತಾವರ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ…

ದ.ಕನ್ನಡ: ಲಾರಿ ಚಾಲಕ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ರಾಜೇಶ್ ಬರೆ, ಪ್ರ.ಕಾರ್ಯದರ್ಶಿಯಾಗಿ ಸಮೀರ್ ಪರ್ಲಿಯ, ಕೋಶಾಧಿಕಾರಿಯಾಗಿ ಜಾಬಿರ್ ಆಯ್ಕೆ

ದಕ್ಷಿಣ ಕನ್ನಡ: ಲಾರಿ ಚಾಲಕ ಮಾಲಕರ ಸಂಘವಾದ ಸ್ನೇಹ ಜೀವಿ ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲೆ ನೂತನ ಕಮಿಟಿಯು ಅಸ್ತಿತ್ವಕ್ಕೆ ಬಂದಿದ್ದು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಬರೆಯವರು ಆಯ್ಕೆಯಾಗಿದ್ದಾರೆ. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಾಜೇಶ್ ಬರೆ,…

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ 90ಅಡಿ ಆಳದ ಜಲಪಾತಕ್ಕೆ ಹಾರಿದ ಶಾಲಾಬಾಲಕಿ

ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್​ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ ಘಟನೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದೆ. ಜಲಪಾತಕ್ಕೆ…

ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದ್ದ ಮಣಿಪುರ ಪ್ರಕರಣ; ಪೊಲೀಸರೇ ನಮ್ಮನ್ನು ಜನಸಮೂಹಕ್ಕೆ ಬಿಟ್ಟು ಕೊಟ್ಟರು..!

ಇಂಚಿಂಚು ಮಾಹಿತಿ ಬಿಚ್ಚಿಟ್ಟ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾದ ಯುವತಿ..!

ಇಂಫಾಲ: ಇಡೀ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದ್ದ ಮಣಿಪುರ ಪ್ರಕರಣದಲ್ಲಿ ನಮ್ಮನ್ನು ಪೊಲೀಸರೇ ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು ಎಂದು ಮಣಿಪುರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಸಂತ್ರಸ್ಥೆ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಧ್ಯಮಗಳಲ್ಲಿ…

ಮಂಗಳೂರು: ಶಾಲೆಯಲ್ಲಿ ಬಟ್ಟೆ ಮೇಲೆ ಸಾಂಬಾರ್ ಚೆಲ್ಲಿದ ವಿಚಾರದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳ

ಸಹಪಾಠಿಯ ಎದೆಗೆ ಚೂರಿ ಎಸೆದು ಗಾಯಗೊಳಿಸಿದ ವಿದ್ಯಾರ್ಥಿ

ಮಂಗಳೂರು: ಕರ್ನಾಟಕ ಪಬ್ಲಿಕ್ ಸ್ಕೂಲ್‌ ಮೊಂಟೆಪದವಿನ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಬಟ್ಟೆಗೆ ಸಾಂಬಾರು ಚೆಲ್ಲಿದ ವಿಚಾರಕ್ಕೆ ಜಗಳವಾಗಿ ಕೊನೆಗೆ ಒಬ್ಬ ವಿದ್ಯಾರ್ಥಿ ತನ್ನ ಸಹಪಾಠಿಗೆ ಚೂರಿ ಎಸೆದು ಗಾಯಗೊಳಿಸಿದ ಘಟನೆ ಬುಧವಾರ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನ ಊಟದ ಹೊತ್ತಿನಲ್ಲಿ ಒಬ್ಬ ವಿದ್ಯಾರ್ಥಿಯ…

ಪುತ್ತೂರು: ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧನ

ಪುತ್ತೂರು: ಎರಡು ಅಪ್ರಾಪ್ತ ಬಾಲಕಿಯರಿಗೆ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿ ಬಂದು ಅಸಭ್ಯವಾಗಿ ವರ್ತಿಸಿದ್ದು ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿಯನ್ನು ದಸ್ತಗಿರಿ ಮಾಡಿದ ಘಟನೆ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಸೀತಾರಾಮ ಯಾನೆ ಪ್ರವೀಣ್ ಎಂದು…

ಬಿಜೆಪಿ ಶಾಸಕರಿಂದ ಗಂಭೀರ ಘಟನೆ; ವಿ.ಸ ಉಪಾಧ್ಯಕ್ಷರ ಮೇಲೆ ಕಾಗದ ಎಸೆದು ದೌರ್ಜನ್ಯ

ಯಾವುದೇ ಮುಲಾಜಿಲ್ಲದೆ 10 ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್‌ನ ಖದರ್ ತೋರಿಸಿದ ಖಾದರ್..!!

ಬೆಂಗಳೂರು: ಅಧಿವೇಶನದಲ್ಲಿ ನಡೆಯುತ್ತಿರುವ ಕಲಾಪದ ಸಂದರ್ಭ ವಿಧಾನಸಭೆ ಉಪಾಧ್ಯಕ್ಷರ ಮೇಲೆ ಕಾಗದ ಚೂರುಗಳನ್ನು ಎಸೆದ ಘಟನೆಗೆ ಸಂಬಂಧಿಸಿದಂತೆ ಹತ್ತು ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಈಗ ನಡೆಯುತ್ತಿರುವ ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಲಾಗಿದೆ.…

ಮಂಗಳೂರಿನಿಂದ ಕಾರ್ಗಿಲ್’ಗೆ ದಂಪತಿ ಬೈಕ್ ಸವಾರಿ; ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ

ಮಂಗಳೂರು: ಕರ್ನಾಟಕದಿಂದ ಕಾರ್ಗಿಲ್’ವರೆಗೆ ಮೋಟಾರ್ ಬೈಕ್ ಸವಾರಿಯಲ್ಲಿ ಮಂಗಳೂರಿನ ಮುಸ್ಲಿಮ್ ದಂಪತಿ ಯಾತ್ರೆ ಹೊರಡಲಿದ್ದು, ರಸ್ತೆಯುದ್ದಕ್ಕೂ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿ ಹೊಂದಿದ್ದಾರೆ. ಜು.29ರಂದು ಬೆಳಗ್ಗೆ 7.30ಕ್ಕೆ ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ಪೀಕರ್ ಯು.ಟಿ.ಖಾದರ್, ಮಂಗಳೂರು ಪೊಲೀಸ್ ಆಯುಕ್ತ…

ಜರಿಗುಡ್ಡೆಯಲ್ಲಿ ಮಾದಕ ಪದಾರ್ಥಗಳ ವಿರುದ್ಧ ಜಾಗೃತಿ ಸಭೆ

ವ್ಯಾಪಕವಾಗುತ್ತಿರುವ ಮಾದಕ ಪದಾರ್ಥಗಳ ಸೇವನೆಯು ಸಮಾಜದ ಅತ್ಯಂತ ದೊಡ್ಡ ಪಿಡುಗಾಗಿ ಬದಲಾಗುತ್ತಿದೆ ಪ್ರತಿ ಮನೆಮನೆಗಳಲ್ಲೂ ಇದರ ವಿರುದ್ಧ ಜಾಗೃತಿ ಆಗಬೇಕೆಂದು ಕಾರ್ಕಳ ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ಇದರ ಪ್ರಾಂಶುಪಾಲರು ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲಿ ಜಾಗೃತಿ ಸಂದೇಶ ನೀಡಿದರು. ಇತ್ತೀಚೆಗೆ…

ಮಂಗಳೂರು: ಬೈಕ್ ಸ್ಕಿಡ್ ಆಗಿ ಇಂಜಿನಿಯರಿಂಗ್ ವಿದ್ಯಾರ್ಥಿ ದಾರುಣ ಮೃತ್ಯು

ಮಂಗಳೂರು: ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕೊಂದು ಸ್ಕಿಡ್ ಆಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಯಾರ್ ಬಳಿಯ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ವಳಚ್ಚಿಲ್ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ, ಕೇರಳ ಮೂಲದ ಮುಹಮ್ಮದ್ ನಶತ್ (21) ಮೃತಪಟ್ಟ…

error: Content is protected !!