dtvkannada

Month: July 2023

ಅಪರೂಪದ ಘಟನೆಗೆ ಸಾಕ್ಷಿಯಾದ ಮಂಗಳೂರು; ಚಪ್ಪಲಿಯನ್ನು ಕದ್ದೊಯ್ದದಕ್ಕೆ ತುರ್ತು ಸ್ಪಂದನಾ ನಂಬರಾದ 112 ಕರೆ ಮಾಡಿದ ಯುವಕ

ತಕ್ಷಣ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು; ಮುಂದೇನಾಯ್ತು ನೋಡಿ

ಮಂಗಳೂರು: ವ್ಯಕ್ತಿಯೊಬ್ಬ ತನ್ನ ಚಪ್ಪಲಿ ಕಳವುಗೈದಿದ್ದಾರೆ ಎಂದು ಪೊಲೀಸರ ತುರ್ತು ಸ್ಪಂದನಾ ನಂಬರಾದ 112 ಕರೆ ಮಾಡಿ ಪೊಲೀಸರು ಬಳಿ ದೂರನ್ನು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ನೇರವಾಗಿ ಮಂಗಳೂರು ನಗರದ ಬಾಲಂಭಟ್ ಹಾಲ್‌ಗೆ ದೌಡಾಯಿಸಿದ್ದಾರೆ.ಹಾಲ್‌ಗೆ ಬಂದ ಪೊಲೀಸರು…

ಉಡುಪಿ: ಕ್ರೌಡ್ ಫಂಡಿಗ್ ಮೂಲಕ ಚಿಕಿತ್ಸೆಗೆ ಮನವಿ ಮಾಡಿದ್ದ ಸನಾ ಹೃದಯಾಘಾತದಿಂದ ನಿಧನ

ಉಡುಪಿ: ಅನಾರೋಗ್ಯ ಹಿನ್ನಲೆ ತನ್ನೆರೆಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಕಳ ನಿವಾಸಿ ಸನಾ(21) ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ. ತನ್ನೆರೆಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸನಾಳ ಚಿಕಿತ್ಸೆಗಾಗಿ ಕಳೆದ ಎರಡು ದಿನಗಳ ಮುಂಚೆ ಸಮಾಜಿಕ ಜಾಲತಾಣಗಳಲ್ಲಿ ತನ್ನ ಅನಾರೋಗ್ಯದ…

ಕೇರಳ: ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ನಿಧನಕ್ಕೆ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ :

ಕೇರಳ: ಹಿರಿಯ ಕಾಂಗ್ರೇಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಜ್ಜನ ರಾಜಕಾರಣಿ ಕೇರಳ ರಾಜ್ಯದ ಮಾಜಿ ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ನಿಧನಕ್ಕೆ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಡಿನಾಡ ಕರ್ನಾಟಕದ ಅಭಿವೃದ್ದಿಯ ಹರಿಕಾರರಾಗಿ, ಕರ್ನಾಟಕದ…

ಮೈಸೂರಿನಲ್ಲಿ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದಾರುಣ ಮೃತ್ಯು

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಪುತ್ತೂರಿನ ಯುವಕರು

ಮೈಸೂರು: ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವಾಗ ಕಂಪ್ಲಾಪುರ ಬಳಿ ಇಂದು( ಜುಲೈ 18) ಮುಂಜಾನೆ 4.30ಕ್ಕೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.…

ಕೇರಳ: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ ನಿಧನ

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಪಿಣರಾಯ್ ವಿಜಯನ್ ಸಂತಾಪ ಸೂಚನೆ

ಬೆಂಗಳೂರು: ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಉಮ್ಮನ್ ಚಾಂಡಿ (73) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಶ್ರೀಯುತರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಇಂದು(ಜುಲೈ 18) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳ ಹಾಲಿ…

ಪುತ್ತೂರು: ನಿಡ್ಪಳ್ಳಿಯ ಒಂದನೇ ವಾರ್ಡಿನಲ್ಲಿ ಇಂದಿರಾ ಸೇವಾ ಸಿಂಧು ಕಛೇರಿ ಉದ್ಘಾಟನೆ

ಕಾವು ಹೇಮನಾಥ್ ಶೆಟ್ಟಿ ಸಹಿತ ಹಲವು ಕಾಂಗ್ರೆಸ್ ನಾಯಕರು ಭಾಗಿ

ಪುತ್ತೂರು: ವಿಧಾನ ಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ತಂಬುತ್ತಡ್ಕ ಬಸ್ ಸ್ಟ್ಯಾಂಡ್ ನ ಎದುರು 313 ಕಾಂಪ್ಲೆಕ್ಸ್ ನಲ್ಲಿ ಇಂದಿರಾ ಸೇವಾ ಸಿಂಧು ಕಚೇರಿಯನ್ನು ಹಾಗೂ ನೂತನ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳಾದ “ಗೃಹ…

ಪುತ್ತೂರು: ಗ್ರಾಮ ಪಂಚಾಯತ್ ಉಪಚುನಾವಣೆ; ನಿಡ್ಪಳ್ಳಿ ಕ್ಷೇತ್ರದ ಉಸ್ತುವಾರಿಯಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ

ಬಿಜೆಪಿಯ ಭದ್ರ ಕೋಟೆಗೆ ಕಾಲಿಟ್ಟ ಟ್ರಬಲ್ ಶೂಟರ್ ಹೇಮನಾಥ್ ಶೆಟ್ಟಿ ಮತ್ತು ತಂಡ

ಪುತ್ತೂರು: ವಿಧಾನಸಭಾ ಕ್ಷೇತ್ರದ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿಯವರು ಸ್ಪರ್ದಿಸುತ್ತಿದ್ದಾರೆ. ಈ ಕ್ಷೇತ್ರದ ಉಸ್ತುವಾರಿಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆಪಿಸಿಸಿ ಸಂಯೋಜಕ ಪುತ್ತೂರಿನ ಟ್ರಬಲ್ ಶೂಟರ್ ಕಾವು ಹೇಮನಾಥ್…

ಸುಳ್ಯ: ಸಂಪ್ಯದ ವ್ಯಕ್ತಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನ

ಒಡ ಹುಟ್ಟಿದ ಸಹೋದರನನ್ನು ಕೊಂದು ಕರವಾಳಿಯ ಜನತೆಯನ್ನು ನಿಬ್ಬೆರಗಾಗುವಂತೆ ಮಾಡಿದ್ದ ಕೊಲೆ ಪ್ರಕರಣ

ಸುಳ್ಯ: ಕರವಾಳಿಯ ಜನತೆಯನ್ನು ನಿಬ್ಬೆರಗಾಗುವಂತೆ ಮಾಡಿದ್ದ ಕೊಲೆ ಪ್ರಕರಣವಾದ ಚೆಂಬು ಗ್ರಾಮದ ಕುದ್ರೆಪಾಯ ಎಂಬಲ್ಲಿ ಆಸ್ತಿ ವಿವಾದಕ್ಕೆ ಸಹೋದರರಿಂದ ಹತ್ಯೆಯಾದ ಸಂಪ್ಯದ ಉಸ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಘಟನೆಯಲ್ಲಿ ಸಹೋದರರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳು…

ಮಂಗಳೂರು: ಕುದ್ರೋಳಿಯಲ್ಲಿ ಇನಾರ ಮೆಡಿಕಲ್ ಶುಭಾರಂಭ

ಮಂಗಳೂರು: ಮಂಗಳೂರಿನ ಹೃದಯ ಭಾಗದಲ್ಲಿರುವ ಕುದ್ರೋಳಿಯ ಜಿ ಟಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಇನಾರ ಮೆಡಿಕಲ್ ಇದರ ಉದ್ಘಾಟನೆಯನ್ನು ನಡುಪಳ್ಳಿ ಜುಮಾ ಮಸೀದಿಯ ಖತೀಬರಾದ ಮೌಲಾನ ರಿಯಾಝ್ ಫೈಝಿ ಕಕ್ಕಿಂಜೆ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮ.ನ.ಪಾ ಸದಸ್ಯರಾದ…

ಖಿದ್ಮಾ ಫೌಂಡೇಶನ್ ನಿಂದ ಸಾಹಿತ್ಯ ಕಾರ್ಯಕ್ರಮ

ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಿರುವ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಭಾನುವಾರದಂದು ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ನಡೆಯಿತು. ಎಂಪವರ್ಡ್ ಮೈಂಡ್ಸ್ ಎಡು ಸೊಲ್ಯೂಷನ್ಸ್ ಎಲ್ ಎಲ್ ಪಿ…

error: Content is protected !!