dtvkannada

Category: ಕರಾವಳಿ

ಪುತ್ತೂರು: ಜ್ವರದಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಮೃತ್ಯು

ಪುತ್ತೂರು: ಜ್ವರದಿಂದ ಬಳಲುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಡಿಡೀರ್ ಮೃತಪಟ್ಟ ಹೃದಯವಿದ್ರಾವಕ ಘಟನೆ ಗುರುವಾರ ಸವಣೂರಿನಲ್ಲಿ ನಡೆದಿದೆ. ಸವಣೂರು ಚಾಪಲ್ಲಾ ಜಮಾಅತ್ ಗೆ ಒಳಪಟ್ಟ ಶಾಂತಿನಗರ ನಿವಾಸಿಯಾಗಿರುವ ಉಮರ್ (ಬೀಡಿ)ಯವರ ಸಹೋದರಿಯ ಮಗಳು ಮಾಂತೂರು ಹಿದಾಯತುಲ್ ಇಸ್ಲಾಂ ಮದರಸ ಎಂಟನೇ ತರಗತಿ…

ಉಪ್ಪಿನಂಗಡಿ: ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ತಂಡದಿಂದ ಹಲ್ಲೆ

ಉಪ್ಪಿನಂಗಡಿ: ಯುವಕನನ್ನು ತಂಡವೊಂದು ಅಡ್ಡಗಟ್ಟಿ ಆತನ ತಮ್ಮನನ್ನೂ ಕರೆಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.ಹಲ್ಲೆಗೊಳಗಾದ ವ್ಯಕ್ತಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 10:30 ರ ಹೊತ್ತಿಗೆ ಉಪ್ಪಿನಂಗಡಿಯಿಂದ ಮನೆಗೆ…

ಸುಳ್ಯ- ಗೂನಡ್ಕದಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ಐದನೇ ಬಾರಿ ನಡುಗಿದ ಭೂಮಿ!

ಸುಳ್ಯ/ ಗೂನಡ್ಕ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ- ಸಂಪಾಜೆ ಗಡಿ ಭಾಗದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸುವ ಮೂಲಕ ಒಂದೇ ವಾರದಲ್ಲಿ ಐದನೇ ಭಾರಿಗೆ ಭೂ ಕಂಪನದ ಅನುಭವ ಜನತೆಗೆ ಆಗಿದೆ. ನಿನ್ನೆ ಮಧ್ಯರಾತ್ರಿ ಉಂಟಾದ ಭೀಕರ ಶಬ್ದ ಮತ್ತು…

ನಿಲ್ಲದ ವರುಣನ ಆರ್ಭಟ; ದ.ಕ ಜಿಲ್ಲೆಯಾದ್ಯಂತ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

ಮಂಗಳೂರು: ಕರಾವಳಿಯಲ್ಲಿ ಬೀಳುತ್ತಿರುವ ಭಾರಿ ಮಳೆಗೆ ಮುನ್ಸೂಚನೆಯಾಗಿ ನಾಳೆಯೂ(ಶುಕ್ರವಾರ) ಕೂಡ ದ.ಕ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಇದೀಗಾಗಲೇ ಮಂಗಳೂರು ನಗರಾದ್ಯಂತ ಮಳೆಗೆ ಕೃತಕ ನೆರೆ ನೀರು ಸೃಷ್ಟಿಯಾಗಿದ್ದು ನಗರ ಸಂಪೂರ್ಣ ಜಲಾವೃತವಾಗಿದೆ.ವಿವಿಧ…

ವಿಟ್ಲ: ಮಳೆ ಅಬ್ಬರ- ಹಲವು ಮನೆಗಳು ಜಲಾವೃತ-ಜನ ಜೀವನ ಅಸ್ತವ್ಯಸ್ತ

ವಿಟ್ಲ: ನಿನ್ನೆ ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಮನೆಗಳು ಜಲಾವೃತವಾಗಿದೆ. ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿರುವ ಮನೆಗಳು ಜಲಾವೃತಗೊಂಡಿದೆ. ಸಾಲೆತ್ತೂರು ಕಟ್ಟೆ ಬಳಿ ಗುಡ್ಡ ರಸ್ತೆಗೆ ಜರಿದು, ಮನೆಗಳು ಅಪಾಯದ ಅಂಚಿನಲ್ಲಿವೆ. ವಿಟ್ಲದ…

ಸುಳ್ಯ: ಪುಟ್ಟ ಮಗಳ ಜೊತೆ ಬಾವಿಗೆ ಹಾರಿದ ಮಹಿಳೆ; ಅದೃಷ್ಟವಶಾತ್ ಬದುಕುಳಿದ ಮಗು

ಸುಳ್ಯ: ಮಹಿಳೆಯೋರ್ವರು ತನ್ನ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಮಗಳು ಅದೃಷ್ಟವಶಾತ್ ಬದುಕುಳಿದ ಘಟನೆ ಸುಳ್ಯ ತಾಲ್ಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.…

ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ:ವಿದ್ಯಾರ್ಥಿನಿಯೊಬ್ಬಳು ತನ್ನ ವೈಯುಕ್ತಿಕ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿ ಪಾರಂಪಳ್ಳಿ ನಿವಾಸಿ ಸಯ್ಯದ್ ಬ್ಯಾರಿ ಎಂಬವರ ಮಗಳು ಮಿಪ್ರಿಯಾ(19) ಎಂದು ತಿಳಿದು ಬಂದಿದೆ. ಕುಂದಾಪುರ ಖಾಸಗಿ ಕಾಲೇಜಿನಲ್ಲಿ…

ಸುಳ್ಯ: ಭವಿಷ್ಯದಲ್ಲಿ 5 ತೀವ್ರತೆಯ ಭೂಕಂಪ ಸಾಧ್ಯತೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆ ಸಂಧಿಸುವ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿ ವಾರದ ಅವಧಿಯಲ್ಲಿ ಮೂರು ಬಾರಿ ಸಂಭವಿಸಿದ ಲಘು ಭೂಕಂಪನಗಳು ಕರಾವಳಿಯಲ್ಲಿ ಭೀತಿಗೆ ಕಾರಣವಾಗಿದೆ. ಭೂಕಂಪ ತಜ್ಞರ ಪ್ರಕಾರ ನಿರಂತರವಾಗಿ ಸೆಸ್ಮಿಕ್‌ (ಭೂಕಂಪನ) ಚಟುವಟಿಕೆ ಗಳು ಹೆಚ್ಚುತ್ತಿರುವುದು…

ಬೈಕ್ ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಮೃತ್ಯು; ಗಾಡಿ ನಿಲ್ಲಿಸದೇ ಪರಾರಿಯಾದ ಸವಾರ

ಉಪ್ಪಿನಂಗಡಿ: ಅಪರಿಚಿತ ವೃದ್ದನೋರ್ವನಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಪರಾರಿಯಾದ ಘಟನೆ ಉಪ್ಪಿನಂಗಡಿ ಬಸ್ಸು ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ. ರಾತ್ರಿ 10 ಗಂಟೆಯ ಹೊತ್ತಿಗೆ ಅಪರಿಚಿತ ವೃದ್ದನೋರ್ವ ರಸ್ತೆ ದಾಟುತ್ತಿದ್ದಾಗ ಅತೀ ವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದು…

ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ “ಗಣರಾಜ್ಯ ರಕ್ಷಿಸಿ” ಅಭಿಯಾನದ ಪ್ರಯುಕ್ತ ಕಲ್ಲರ್ಪೆಯಲ್ಲಿ ಕ್ರೀಡಾಕೂಟ

ಪುತ್ತೂರು,ಜೂ‌26 :- “ಗಣರಾಜ್ಯ ರಕ್ಷಿಸಿ” ಅಭಿಯಾನದ ಅಂಗವಾಗಿ ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲರ್ಪೆ ಮೈದಾನದಲ್ಲಿ ಮೊಹಲ್ಲಾ ಕ್ರೀಡಾಕೂಟ ನಡೆಯಿತು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಂಟ್ಯಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ರೀಡಾ ಕೂಟವನ್ನು ಉಧ್ಘಾಟಿಸಿ…

error: Content is protected !!