dtvkannada

Month: January 2022

ಕೋಝಿಕ್ಕೊಡ್: ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಹಲವರಿಗೆ ಗಾಯ

ಕೋಝಿಕೋಡು: ಕೋಝಿಕ್ಕೊಡ್ ಜಿಲ್ಲೆಯ ಕೈತಪೊಯಿಲ್‌ನಲ್ಲಿರುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ಇಂದು (ಮಂಗಳವಾರ) ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ. ಐವರ…

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕಾರ ಮಾಡಿದ್ದನ್ನು ಖಂಡಿಸಿ ದ.ಕ ಜಿಲ್ಲಾ ಯುವ ಜನತಾದಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿದ್ದನ್ನು ಖಂಡಿಸಿ, ಬ್ರಹ್ಮರ್ಷಿ ಗುರುಗಳಿಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಸಂತ, ಮಾನವತಾವಾದಿ, ಸಮಾಜ…

ಮಸೀದಿ ಒಡೆಯಬೇಕೆಂದು ವಿವಾದತ್ಮಕ ಹೇಳಿಕೆ; ರಿಷಿಕುಮಾರ ಸ್ವಾಮಿ ಬಂಧನ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಮಸೀದಿ ಕುರಿತು ವಿವಾದತ್ಮಕ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಬರಿ ಮಸೀದಿಯಂತೆ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕೆನ್ನುವ ಹೇಳಿಕೆ ನೀಡಿದ್ದ ರಿಷಿಕುಮಾರ ಸ್ವಾಮೀಜಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು, ಕೂಡಲೇ ಪೊಲೀಸರು ಚಿಕ್ಕಮಗಳೂರಲ್ಲಿ ಋಷಿ ಕುಮಾರ ಸ್ವಾಮೀಜಿ ಬಂಧಿಸಿದ್ದಾರೆ.…

ಮಂಗಳೂರು: ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಹೊಯ್ ಕೈ

ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ರಮಾನಾಥ್ ರೈ ಬಣದ ನಡುವೆ ಹೊಯ್ ಕೈ ನಡೆದಿರುವ ಘಟನೆ ವರದಿಯಾಗಿದೆ. ಕೇಂದ್ರ ಸರಕಾರ ನಾರಾಯಣ ಗುರು ಅವರ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಘಟನೆಯನ್ನು ಖಂಡಿಸಿ, ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ…

ಕೇರಳ: ತಝ್ಕಿಯ ಆತ್ಮೀಯಂ ಕಿರಾ‌ಅತ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಇಸಾಕ್ ಮಾಣಿ

ಮಾಣಿ : ಕೇರಳದ ತಝ್ಕಿಯ ಆತ್ಮೀಯಂ ಯೂಟ್ಯೂಬ್ ಚಾನಲ್ ನಡೆಸಿದ ಖಿರಾಅತ್ ಸ್ಪರ್ಧೆಯಲ್ಲಿ ಮಾಣಿ ನಿವಾಸಿ ಇಸಾಕ್ ರವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ನೂರಾರು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಮಾಣಿ ದಾರುಲ್ ಇರ್ಶಾದ್ ವಿದ್ಯಾರ್ಥಿಯಾಗಿದ್ದ ಇಸಾಕ್ ಸಿರಾಜುಲ್ ಹುದಾ ಕುಟ್ಯಾಡಿ ಯಲ್ಲಿ…

ಬೆಳ್ತಂಗಡಿ: ಬೈಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಇಬ್ಬರು ದಾರುಣ ಮೃತ್ಯು

ಬೆಳ್ತಂಗಡಿ: ಗುರುವಾಯನಕೆರೆ ಬಳಿ ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ಸ್ಥಳದಲ್ಲೆ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕರು ಅಜಿಲಮೊಗರು ದರ್ಗಾ ಉರೂಸಿಗೆ ತೆರಳಿ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆಯೆಂದು ತಿಳಿದು ಬಂದಿದೆ.…

ಕೊರಗಜ್ಜ ವೇಷ ಹಾಕಿದ ಆರೋಪ: ಇಬ್ಬರು ಆರೋಪಿಗಳಿಗೆ ಜಾಮೀನು

ಆರೋಪಿಗಳ ಪರ ವಾದಿಸಿದ ಖ್ಯಾತ ವಕೀಲ ಶ್ರೀಕಾಂತ್ ಭಟ್

ಮಂಗಳೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ವರ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರು ಆರೋಪಿಗಳಿಗೆ ಬಂಟ್ವಾಳ…

ಪುತ್ತೂರು: ವೀಕೆಂಡ್ ಕರ್ಫ್ಯೂ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ವತಿಯಿಂದ ಸಹಾಯಕ ಕಮಿಷನರ್’ಗೆ ಮನವಿ

ಪುತ್ತೂರು: ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯುವಂತೆ ಆಗ್ರಹಿಸಿ ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಮಿನಿ ವಿಧಾನ ಸೌಧದಲ್ಲಿ ಸಹಾಯಕ ಕಮೀಷನರ್ ಅವರಿಗೆ ಮನವಿ ನೀಡಲಾಯಿತು. ನಂತರ ಮಾತನಾಡಿದ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ…

ರಸ್ತೆ ಬದಿ ನಿಲ್ಲಿಸಿದ್ದ ಜೆಸೀಬಿಯನ್ನೇ ಕದ್ದೊಯ್ದ ಖದೀಮರು; ಪ್ರಕರಣ ದಾಖಲು

ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಜೆಸಿಬಿ ಕಳ್ಳತನ ಮಾಡಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಸುಬ್ರಹ್ಮಣ್ಯಪುರ ಬಳಿ ಇರುವ ಮಿಲ್ಕ್ ಕಾಲೋನಿ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಜೆಸಿಬಿ ಕಳವಾಗಿದೆ. ರಾಮಮೂರ್ತಿ ಎಂಬುವವರ ಒಡೆತನದಲ್ಲಿದ್ದ ಜೆಸಿಬಿ ಕಳ್ಳತನವಾಗಿದೆ. ಜೆಸಿಬಿ ಚಾಲಕ…

ಆಸ್ಟ್ರೇಲಿಯಾ ಗೆದ್ದರೂ ಸಂಭ್ರಮಾಚರಣೆಗೆ ಬ್ರೇಕ್! ಆಸೀಸ್ ಕ್ಯಾಪ್ಟನ್ ಕೆಲಸಕ್ಕೆ ಶಹಬ್ಬಾಸ್ ಎಂದ ಕ್ರೀಡಾ ಜಗತ್ತು; ವೀಡಿಯೋ ನೋಡಿ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಹೋಬರ್ಟ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 146 ರನ್‌ಗಳ ಭರ್ಜರಿ ಜಯ ಗಳಿಸಿದ್ದಾರೆ. ಆಸ್ಟ್ರೇಲಿಯನ್ ತಂಡವು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ಅನ್ನು 4-0 ಅಂತರದಿಂದ ಸೋಲಿಸಿದೆ. 271 ರನ್‌ಗಳ ಗುರಿಯನ್ನು ಬೆನ್ನಟ್ಟಿದ…

error: Content is protected !!