dtvkannada

Month: March 2022

ಕುಂದಾಪುರ: ಮೂರು ವರ್ಷದ ಪ್ರೀತಿಯನ್ನು ತಿರಸ್ಕರಿಸಿದ ಯುವತಿ; ಮನನೊಂದ ಯುವಕ ರಿಝ್ವಾನ್ ಆತ್ಮಹತ್ಯೆಗೆ ಶರಣು

ಕುಂದಾಪುರ: ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಪ್ರೀತಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅದೇ ಚಿಂತೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಲ್ವಾಡಿಯಲ್ಲಿ ಸಂಭವಿಸಿದೆ. ವಂಡ್ಸೆಯ ನಿವಾಸಿ ರಿಜ್ವಾನ್‌ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಳೆದ 3 ವರ್ಷಗಳಿಂದ ಗಂಗೊಳ್ಳಿ ಮೂಲದ…

ಪುತ್ತೂರು: 16 ವರ್ಷಗಳ ಹಿಂದೆ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿ ಕಳ್ಳತನ ನಡೆಸಿದ ಪ್ರಕರಣ

ಪುತ್ತೂರು: ಕಳೆದ ೧೬ ವರ್ಷಗಳ‌ಹಿಂದೆ ಅಂದರೆ 2006ರಲ್ಲಿ ನಡೆದ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಿನ್ನೆ ಇಬ್ಬರು ಕಳ್ಳರ ಪೈಕಿ ಒಬ್ಬರಿಗೆ ಶಿಕ್ಷೆಯನ್ನು ಪ್ರಕಟಿಸಿದೆ. ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿ ಕಳ್ಳರಿಬ್ಬರು ಮನೆಯ ಬಾಗಿಲಿನ ಬೀಗದ…

ಆಳವಾದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದು ಯುವಕ ಮೃತ್ಯು

ಉಡುಪಿ: ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿದ ಪರಿಣಾಮ ಮೀನುಗಾರನೋರ್ವ ಆಳವಾದ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಶಿರೂರು ಅಳ್ವೆಗದ್ದೆ ನಿವಾಸಿ ನಾಗರಾಜ ಮೊಗೇರ್ (25) ಮೀನುಗಾರ ಎಂದು ವರದಿಯಾಗಿದೆ. ಕ್ರಿಯಾಶೀಲ…

ಪುತ್ತೂರು: ರಕ್ತನಿಧಿಯಲ್ಲಿ ರಕ್ತದ ಕೊರತೆ; ಪಾಪ್ಯೂಲರ್ ಫ್ರಂಟ್ ವತಿಯಿಂದ ತುರ್ತು ರಕ್ತದಾನ ಶಿಬಿರ

ಪುತ್ತೂರು: ಪುತ್ತೂರಿನ ರಕ್ತನಿಧಿಯಲ್ಲಿ ರಕ್ತದ ಸಂಗ್ರಹ ಕಡಿಮೆ ಇದ್ದುದರಿಂದ ರೋಗಿಗಳಿಗೆ ತುರ್ತು ರಕ್ತ ಪೂರೈಕೆ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಪಾಪ್ಯುಲರ್ ಫ್ರಂಟ್ ಮೆಡಿಕಲ್ ವಿಭಾಗವು ಪುತ್ತೂರಿನ ರೋಟರಿ ರಕ್ತನಿಧಿಯಲ್ಲಿ ತುರ್ತು ಸಾರ್ವಜನಿಕ ರಕ್ತದಾನ ಶಿಬಿರಹಮ್ಮಿಕೊಂಡಿತ್ತು. ಯಶಸ್ವಿಯಾಗಿ ನಡೆದ ಶಿಬಿರದಲ್ಲಿ 40…

ಕವಿ ಬರಹಗಾರರ ಒಕ್ಕೂಟ ಪೆನ್ ಪಾಯಿಂಟ್ ವತಿಯಿಂದ ಇಂದು ರಾತ್ರಿ ಇಶಲ್ ನೈಟ್ ಕಾರ್ಯಕ್ರಮ; ಮೂವತ್ತು ಸ್ಪರ್ಧಿಗಳಿಂದ ಇಸ್ಲಾಮಿಕ್ ಹಾಡುಗಳ ಗಾನ ಕಲರವ

ಮಂಗಳೂರು: ಕರಾವಳಿಯ ಬರಹಗಾರರ ಒಕ್ಕೂಟ ಪೆನ್‌ಪಾಯಿಂಟ್ ಸ್ನೇಹ ವೇದಿಕೆ ಇದರ ವಾರ್ಷಿಕೋತ್ಸವದ ಪ್ರಯುಕ್ತ ಹಲವು ಸ್ಪರ್ಧೆಗಳು ನಡೆಯುತ್ತಿದ್ದು, ಇವತ್ತು ಪೆನ್‌ಪಾಯಿಂಟ್ ವತಿಯಿಂದ ‘ಇಶಲ್ ನೈಟ್’ ಇಸ್ಲಾಮಿಕ್ ಮದ್ಹ್ ಆಲಾಪನೆ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಕರಾವಳಿಯ ಮೂವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದು,…

ಹರ್ಷ ಕೊಲೆ ಆರೋಪಿಗಳ ಮೇಲೆ ಯುಎಪಿಎ ದಾಖಲು: ಬಿಜೆಪಿ ಸರಕಾರ ನಡೆಸುತ್ತಿರುವ ಕಾನೂನಿನ ದುರ್ಬಳಕೆಗೆ ಸಾಕ್ಷಿ; ಪಾಪ್ಯುಲರ್ ಫ್ರಂಟ್

ಶಿವಮೊಗ್ಗದಲ್ಲಿ ನಡೆದ ಬಜರಂಗ ದಳದ ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ದಾಖಲಿಸಿರುವುದು ಬಿಜೆಪಿ ಸರಕಾರ ನಡೆಸುತ್ತಿರುವ ಕಾನೂನಿನ ದುರ್ಬಳಕೆಗೆ ಸಾಕ್ಷಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ. ಬಜರಂಗ ದಳದ…

ಶಿವಮೊಗ್ಗದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹರ್ಷರವರ ಕುಟುಂಬಕ್ಕೆ ಸಹಾಯ ಹಸ್ತದ ಮೂಲಕ ಹರಿದು ಬಂದ ಹಣವೆಷ್ಟು ಗೊತ್ತಾ..!!?

ಶಿವಮೊಗ್ಗ; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹರ್ಷ ಅವರ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದ್ದು, ಈವರೆಗೆ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೂ ಅಧಿಕ ನೆರವು ನೀಡಲಾಗಿದೆ ಎಂದು ವರದಿಯಾಗಿದೆ. ಈಗಾಗಲೇ ಸರಕಾರದ 25 ಲಕ್ಷ ರೂ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ…

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಇಂದು ಉಳ್ಳಾಲಕ್ಕೆ: ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ

ಉಳ್ಳಾಲ: ಐತಿಹಾಸಿಕ ಉಳ್ಳಾಲ ಉರೂಸ್ ಪ್ರಯುಕ್ತ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಇಂದು ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಬಾಷಣ ನಡೆಸಲಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ತಂಙಳ್ ಪಾಣಕ್ಕಾಡ್, ಖ್ಯಾತ ಪ್ರಬಾಷಣಗಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ…

ಕ್ಯಾನ್ಸರ್ ನಿಂದ ನೊಂದು, ಬೆಂದಿದ್ದ ತಾಯಿಗೆ ಮರು ಮದುವೆ ಮಾಡಿಸಿದ ಪುತ್ರ!

ನವದೆಹಲಿ: ಬದುಕಿನಲ್ಲಿ ಮಾರಕವಾಗಿ ಕಾಡಿದ ಅನಾರೋಗ್ಯ, ಪತಿಯನ್ನು ಕಳೆದುಕೊಂಡು ನೊಂದು ಬೆಂದಿದ್ದ ಮಹಿಳೊಬ್ಬರ ಹೊಸ ಬದುಕಿಗೆ ಇನ್ನೊಂದು ಮದುವೆಗೆ ಪುತ್ರ ಸಹಕಾರಿಯಾಗಿ ಜೀವನ ಉತ್ಸಾಹ ಮೂಡಿಸಿದ ಘಟನೆ ನಡೆದಿದೆ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಜಿಮೀತ್ ಗಾಂಧಿ ಎನ್ನುವವರು ತನ್ನ ತಾಯಿಯ ನೋವಿನ…

ಬೆಳ್ತಂಗಡಿ:ಉಕ್ರೇನ್ ದಾಳಿಯ ಸಂದರ್ಭ ಬಂಕರ್‌ನಲ್ಲಿ ಅಡಗಿಕೊಂಡು ಅಪಾಯದ ಸ್ಥಿತಿಯಲ್ಲಿರುವ ವೈದ್ಯ ವಿದ್ಯಾರ್ಥಿನಿ ಉಜಿರೆಯ ಫಾತಿಮಾ..!!

ಬೆಳ್ತಂಗಡಿ: ಕೆಲ ದಿನಗಳ ಹಿಂದೆ ಉಕ್ರೇನ್‌ನ ಕಾರ್ಕಿವ್ ನಲ್ಲಿ ಮಂಗಳವಾರ ರಷ್ಯಾ ದಾಳಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿ, ವೈದ್ಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ 100 ದಕ್ಷಿಣ ಕನ್ನಡದ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ…

error: Content is protected !!