dtvkannada

Category: ಕರಾವಳಿ

ಮತ್ತೋರ್ವ ಬಿಜೆಪಿ ನಾಯಕನಿಗೆ ಕೊರೋನ ಪಾಸಿಟಿವ್; ಕೊರೋನ ಪಾಸಿಟಿವ್ ಎಂದು ಟ್ವೀಟರ್ ಮೂಲಕ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊರೋನ ಪಾಸಿಟಿವ್ ಎಂದು ತಿಳಿದು ಬಂದಿದೆ. https://twitter.com/nalinkateel/status/1480430599034720263?s=19 ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಟೀಲ್ ನನಗೆ ಕೋವಿಡ್ ದೃಡವಾಗಿದ್ದು ಯಾವುದೇ ಲಕ್ಷಣಗಳಿಲ್ಲ ನಾನು ಆರೋಗ್ಯವಾಗಿದ್ದೇನೆಂದು ತಿಳಿಸಿದ್ದು ನನ್ನ ಸಂಪರ್ಕಕ್ಕೆ ಬಂದವರು ಆದಷ್ಟು…

ಹಿರಿಯ ಸಾಹಿತಿ, ನಾಟಕಕಾರ, ಪತ್ರಿಕಾ ಸಂಪಾದಕ ಚಂದ್ರಶೇಖರ ಪಾಟೀಲ್(ಚಂಪಾ) ವಿಧಿವಶ

ಬೆಂಗಳೂರು: ಹಿರಿಯ ಸಾಹಿತಿ, ನಾಟಕಕಾರ, ಪತ್ರಿಕಾ ಸಂಪಾದಕ, ಕಸಾಪ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ್(83) ವಿಧಿವಶರಾಗಿದ್ದಾರೆ. ಚಂಪಾ ಎಂದೇ ಪರಿಚಿತರಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲ್, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಮುಂಜಾನೆ 6.30ರ ಸುಮಾರಿಗೆ ಬೆಂಗಳೂರಿನ ಕೋಣನಕುಂಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ…

ವಿಟ್ಲ ಬಂದ್’ಗೆ ಕರೆ ರಾಜಕೀಯ ಪ್ರೇರಿತ ಮತ್ತು ನಿರ್ದಿಷ್ಟ ಸಮುದಾಯದ ಮೇಲಿನ ದ್ವೇಷಸಾಧನೆ -ಪಾಪ್ಯುಲರ್ ಫ್ರಂಟ್

ವಿಟ್ಲ: ಮದುವೆ ಮನೆಯಲ್ಲಿ ಕೊರಗಜ್ಜನ ವೇಷ ತೊಟ್ಟಿದ್ದಾನೆ ಎಂಬ ನೆಪ ಮಾಡಿ ಹಿಂಜಾವೇ ಜನವರಿ 11ರಂದು ವಿಟ್ಲ ಬಂದ್ ಗೆ ಕರೆ ನೀಡಿರುವುದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಮತ್ತು ಒಂದು ನಿರ್ದಿಷ್ಟ ಧರ್ಮದ ಮೇಲಿನ ದ್ವೇಷ ಸಾಧನೆಯ ಮುಂದುವರಿದ ಭಾಗವಾಗಿದೆ ಎಂದು…

ಮಂಗಳೂರಿನ ಕೋವಿಡ್ ವಾರಿಯರ್ ಡಾ! ಇ.ಕೆ.ಎ.ಸಿದ್ದೀಕ್ ಅಡ್ಡೂರು ರವರಿಗೆ ಕೊಡಗು ಬ್ಲಡ್ ಡೋನರ್ಸ್ (ರಿ) ವತಿಯಿಂದ ಸನ್ಮಾನ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೋವಿಡ್ ವಾರಿಯರ್ ಕರ್ನಾಟಕದ ಬಾಹುಬಲಿ ಖ್ಯಾತಿಯ ಲಯನ್ಸ್ ಡಾ! ಇ.ಕೆ.ಎ. ಸಿದ್ದೀಕ್ ಅಡ್ಡೂರು ರವರಿಗೆ ಕೊಡಗು ಬ್ಲಡ್ ಡೋನರ್ಸ್(ರಿ) ಕೊಡಗು ವತಿಯಿಂದ ಮಡಿಕೇರಿಯಲ್ಲಿ ಇಂದು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಬ್ಲಡ್ ಡೋನರ್ಸ್…

ಭಟ್ ಬಯೋಟೆಕ್ ನಿಂದ 2ನೇ ಬಾರಿ ಪುತ್ತೂರು ಸರಕಾರಿ ಆಸ್ಪತ್ರೆಗೆ 8 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡುಗೆ

ಪುತ್ತೂರು: ಭಟ್ ಬಯೋಟೆಕ್ ಇಂಡಿಯಾ ಬೆಂಗಳೂರು ಮತ್ತು ಅಂಗ ಸಂಸ್ಥೆಯಾದ ನವಚೇತನ್ ರಿಟಾಯರ್ಮೆಂಟ್ ಟೌನ್ ಶಿಪ್ ಶಾಂತಿಗೋಡು ಪುತ್ತೂರು ಇವರ ವತಿಯಿಂದ ಸಂಸ್ಥೆಯ ಸ್ಥಾಪಕರು ಮತ್ತು ಮ್ಯಾನಜಿಂಗ್ ಡೈರೆಕ್ಟರ್ ಆಗಿರುವ ಡಾ.ಶಾಮ್ ಭಟ್ ಮತ್ತು ಸುಶೀಲ ಶಾಮ ಭಟ್ ಅವರು ಪುತ್ತೂರು…

ಪುತ್ತೂರು: ಉಪ್ಪಿನಂಗಡಿಯ ಕೆಮ್ಮಾಯಿ ರಸ್ತೆಯಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದ ಸ್ಕೂಟರ್; ಸವಾರ ಗಂಭೀರ

ಪುತ್ತೂರು: ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಪೊಲೀಸರಿಟ್ಟಿದ್ದ ಬ್ಯಾರಿಕೇಡ್‌ಗೆ ಸ್ಕೂಟರ್ ಒಂದು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಗಾಯಗೊಂಡ ವ್ಯಕ್ತಿಯು ರಂಜಿತ್‌ ಎಂದು ಗುರುತಿಸಲಾಗಿದ್ದು.ಅಪಘಾತ ನಡೆದಾಗ ವ್ಯಕ್ತಿಯು ಪ್ರಜ್ಞೆ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದು ತಕ್ಷಣ ಪುತ್ತೂರಿನ…

ವಿಟ್ಲ: ಮದುಮಗ ಕೊರಗಜ್ಜ ವೇಷ ಧರಿಸಿದ ಪ್ರಕರಣ; ಆರೋಪಿ ಯುವಕನನ್ನು ಬಂಧಿಸಲು ವಿಶೇಷ ತಂಡ ರಚನೆ

ವಿಟ್ಲ : ಮದುವೆಯ ಔತನಕೂಟದ ಸಮಾರಂಭದಲ್ಲಿ ಮದುಮಗನಿಗೆ ಆತನ ಗೆಳೆಯರ ಬಳಗವು ಕೊರಗ ವೇಷ ಹಾಕಿ ಕುಣಿಸಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಉಪ್ಪಳದ ಯುವಕನನ್ನು ಬಂಧಿಸಲು ವಿಶೇಷ ಎರಡು ತಂಡವನ್ನು ವಿಟ್ಲ ಪೊಲೀಸರು ರಚನೆ ಮಾಡಿದ್ದಾರೆ. ಮದುಮಗ ಕೊರಗಜ್ಜನ ವೇಷ ಧರಿಸಿದ…

ಮಂಗಳೂರು: ವಾರಂತ್ಯ ಕರ್ಫ್ಯೂ ಜಾರಿ ಹಿನ್ನಲೆ; ನಗರ ಪ್ರವೇಶಿಸುವ ಎಲ್ಲಾ ವಾಹನಗಳ ತಪಾಸಣೆ

ಮಂಗಳೂರು: ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಅನಗತ್ಯ ವಾಹನಗಳ ಸಂಚಾರಕ್ಕೆ ತಡೆ ನೀಡಿದ್ದಾರೆ. ಮಂಗಳೂರು ನಗರ ಪ್ರವೇಶಿಸುವ ಪ್ರಮುಖ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ…

ನೈಟ್ ಕರ್ಫ್ಯೂ ಹಿನ್ನೆಲೆ; ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದ ಉರೂಸ್ ಕಾರ್ಯಕ್ರಮದ ದಿನಾಂಕ ಮತ್ತು ಸಮಯದಲ್ಲಿ ಬದಲಾವಣೆ

ಬಂಟ್ವಾಳ: ಐತಿಹಾಸಿಕ ಅಜಿಲಮೊಗರು ಮಾಲಿದ ಉರೂಸ್ ಈ ಬಾರಿ ನೈಟ್ ಕರ್ಫ್ಯೂ ಹಿನ್ನಲೆ ಉದಾಯಸ್ತಮಾನವಾಗಿ ಆಚರಿಸಲಾಗುವುದು ಎಂದು ಬಾಬಾ ಫಕ್ರುದ್ದೀನ್ ಜಮಾಅತ್ ಸಮಿತಿ ಹೇಳಿಕೆ ನೀಡಿದೆ. ಜನವರಿ 14 ರಿಂದ 18 ರ ವರೆಗೆ ಉದ್ದೇಶಿಸಿದ್ದ ಮಾಲಿದ ಉರೂಸ್ ನ ದಿನಾಂಕ…

ಬಂಟ್ವಾಳ: ಕೊಲತ್ತಮಜಲಿನಲ್ಲಿ 30 ವರ್ಷದ ಬಳಿಕ ಒಂದಾದ ತಾಯಿ-ಮಗ

ಬಂಟ್ವಾಳ:- ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿನ ತಾಯಿ ಬೀಫಾತ್ತುಮ್ಮ ಎಂಬವರ ಮಗ ಯೂಸುಫ್ ಎಂಬವರು ಕಳೆದ 30 ವರ್ಷದ ಹಿಂದೆ ಕಾಣೆಯಾಗಿದ್ದರು. ಇದೀಗ ಕಾಣೆಯಾದ ಮಗ ಯೂಸುಫ್ ಮರಳಿ ತಾಯಿಯ ಮನೆಗೆ ಸೇರಿದ ಘಟನೆ ವರದಿಯಾಗಿದೆ. ತನ್ನ ಮಗನ…

error: Content is protected !!