dtvkannada

Category: ಜಿಲ್ಲೆ

ಬಿಸಿರೋಡ್ :ಖಾಸಗಿ ಬಸ್ಸುಗಳು ಮುಖಾ ಮುಖಿ; ಚಾಲಕ ಸಹಿತ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರು

ಬಂಟ್ವಾಳ: ಖಾಸಗಿ ಬಸ್ಸುಗಳೆರೆಡು ಮುಖಾ ಮುಖಿ ಢಿಕ್ಕಿ ಹೊಡೆದು ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡ್ ನ ನೇತ್ರಾವತಿ ಸೇತುವೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.ಅಪಘಾತದ ತೀವೃತೆಗೆ ಚಾಲಕರು ಸಹಿತ ಸುಮಾರು ಹತ್ತರಷ್ಟು ಮಂದಿಗಳಿಗೆ…

ತಾಯ್ನಾಡಿನಿಂದ ವಿದೇಶಕ್ಕೆ ಮರಳಿದ ಮರುದಿನವೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಝಾಕೀರ್

ಕೇರಳ: ಒಂದು ತಿಂಗಳ ರಜೆ ಕಳೆದು ಮತ್ತೆ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ ಚೇರಿಯೆ ಪರಂಭ್ ನಿವಾಸಿ ಸಿ.ಪಿ ಝಾಕೀರ್(44) ಎಂಬವರು ಹೃದಯಾಘಾತದಿಂದ ಮರಣ ಹೊಂದಿದ ಘಟನೆ ನಿನ್ನೆ ಸಂಭವಿಸಿದೆ. ತನ್ನ ಹಿರಿಯ ಮಗ ಸಹಿತ ವಿದೇಶದಲ್ಲಿರುವ ಝಾಕಿರ್ ರವರು ಎರಡು…

ಬಿಸಿರೋಡ್:ಮುಸ್ಲಿಂ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ; ಬಂಧನವಾದ ಕೆಲವೇ ಗಂಟೆಗಳಲ್ಲಿ ಬಿಡುಗಡೆಗೊಂಡ ಸಂಘ ಪರಿವಾರದ ಕಾರ್ಯಕರ್ತರು..!!?

ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಬಸ್ಸಿನ ನಿರ್ವಾಹಕ ಸೇರಿ ಸಂಘ ಪರಿವಾರ ನಡೆಸಿರುವ ಮಾರಣಾಂತಿಕ ಹಲ್ಲೆ ಗೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ಸಂಘಪರಿವಾರದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಕೆಲವೇ ಹೊತ್ತಿನಲ್ಲಿ ಬಿಡುಗಡೆ ಮಾಡಿರುವ ಘಟನೆ ನಡೆದಿದೆ. ಬಿಸಿರೋಡ್ ನಿಂದ ಮೂಡಬಿದ್ರೆ ಗೆ…

ಉಪ್ಪಿನಂಗಡಿ: ಹೆಚ್ಚಿದ ಬೀದಿ ನಾಯಿಗಳ ಹಾವಳಿ; ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು

ಉಪ್ಪಿನಂಗಡಿ: ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು ಶಾಲಾ ಕಾಲೇಜು ತೆರಳುವ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ಉಪ್ಪಿನಂಗಡಿ ಪೇಟೆಯಲ್ಲಿ ನಡೆಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಅಲ್ಲಿನ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉಪ್ಪಿನಂಗಡಿ ಪೇಟೆ…

ಕಲ್ಲಡ್ಕ: ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕ ಯುವತಿಯ ಪ್ರಯಾಣವನ್ನು ತಡೆದ ಬಜರಂಗದಳ ಕಾರ್ಯಕರ್ತರು

ಬಸ್ಸು ತಡೆದ ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು

ಕಲ್ಲಡ್ಕ: ದ.ಕ ಜಿಲ್ಲೆಯಲ್ಲಿ ಸರಣಿ ನೈತಿಕ ಪೊಲೀಸ್ ಗಿರಿ ಮಿತಿ ಮೀರುತ್ತಿದ್ದು ನಿನ್ನೆ ಮಂಗಳೂರು ನಿಂದ ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಅನ್ಯ ಕೋಮಿನ ಯುವಕನ ಜತೆ ಯುವತಿಯ ಪ್ರಯಾಣವನ್ನು ಬಜರಂಗದಳದ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿ ಮತ್ತೆ ಗುಂಡಾಗಿರಿ ಮೆರೆದಿದ್ದಾರೆ.ಈ ಮದ್ಯೆ…

ಕಾಸರಗೋಡು: ಏರ್ವಾಡಿ,ಮುತ್ತುಪೇಟೆ ಎಂಬಂತೆ ಹಲವು ಮಕ್ಬರಗಳ ಝಿಯಾರತಿಗೆ ತೆರಳಿದ್ದ ವಿಧ್ಯಾರ್ಥಿಗಳ ತಂಡ; ಮುತ್ತುಪೇಟೆಯಲ್ಲಿ ಸ್ನಾನಕ್ಕಿಳಿದಾಗ ನಡೆದ ಅನಾಹುತ; ನೀರಿನಲ್ಲಿ ಮುಳುಗಿ ಅನ್ಸಾಪ್ ದಾರುಣ ಮೃತ್ಯು

ಕಾಸರಗೋಡು: ಏರ್ವಾಡಿ,ಮುತ್ತುಪೇಟೆಗೆ ಮಕ್ಬರ ಝಿಯಾರತ್ತಿಗೆ ತೆರಳಿದ್ದ ಕಾಸರಗೋಡಿನ ವಿದ್ಯಾರ್ಥಿ ಅಲ್ಲಿನ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟ ಯುವಕನು ತಮಿಳುನಾಡಿನ ಏರ್ವಾಡಿಗೆ ತೆರಳಿದ್ದು ಈತನು ಪೈವಳಿಕೆಯ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ಎಂಬವರ…

ಬಂಟ್ವಾಳ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಸಂಘ ಪರಿವಾರದಿಂದ ಮಾರಣಾಂತಿಕ ಹಲ್ಲೆ; ದ.ಕ ಜಿಲ್ಲೆಯಲ್ಲಿ ನಿಲ್ಲದ ಗೂಂಡಾಗಳ ಅಟ್ಟಹಾಸ

ಬಂಟ್ವಾಳ: ದ.ಕ ಜಿಲ್ಲೆಯಲ್ಲಿ ಸಂಘ ಪರಿವಾರದ ನೈತಿಕ ಪೊಲೀಸ್ ಗಿರಿ ಮತ್ತಷ್ಟು ಹೆಚ್ಚಾಗುತ್ತಿದ್ದು ಒಂದು ಸಮುದಾಯವನ್ನು ಗುರಿ ಪಡಿಸಿ ವಿನಾ ಕಾರಣ ಹಲ್ಲೆಗಳು ಹೆಚ್ಚುತ್ತಲೇ ಇವೆಯೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೈತಿಕ ಪೊಲೀಸ್ ಗಿರಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ನಿನ್ನೆ ಮೂಡಬಿದ್ರೆ ರಾಯಿಯಲ್ಲಿ…

ಬೆಳ್ತಂಗಡಿ: ರಿಕ್ಷಾ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಬಂಟ್ವಾಳ: ರಿಕ್ಷಾ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ವ್ಯಕ್ತಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯ ನಾರಾವಿ ಎಂಬಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ನಿತ್ಯ ಪೂಜಾರಿ (48) ಎಂದು ಗುರುತಿಸಲಾಗಿದೆ. ಕೊಕ್ರಾಡಿ ಶಿರ್ತಾಡಿ ಬಳಿ ನಿತ್ಯ ಪೂಜಾರಿ ರವರು ಸಂಚರಿಸುತ್ತಿದ್ದ ಸ್ಕೂಟರ್…

ಉಪ್ಪಿನಂಗಡಿ: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಆಕ್ಸಸ್ ದ್ವಿಚಕ್ರ ಸ್ಕೂಟರ್ ಕಳವು; ಮಾಹಿತಿ ಕೊಟ್ಟಲ್ಲಿ ಹತ್ತು ಸಾವಿರ ರೂ ನಗದು ಬಹುಮಾನ ಘೋಷಿಸಿದ ಮಾಲಕ

ಉಪ್ಪಿನಂಗಡಿ: ಪೃಥ್ವಿ ಶಾಪಿಂಗ್ ಮಾಲ್ ಬಳಿ ನಿಲ್ಲಿಸಿದ್ದ ಆಕ್ಸಸ್ ದ್ವಿ ಚಕ್ರ ವಾಹನ ಕಳವು ಆದ ಘಟನೆ ಶುಕ್ರವಾರ ನಡೆದಿದೆ. ಉಪ್ಪಿನಂಗಡಿಯ ಬ್ಲೂ ಲೇಡಿ ಬಟ್ಟೆ ಅಂಗಡಿಯ ಮಾಲಕನ ಗಾಡಿ ಇದಾಗಿದ್ದು ಮಧ್ಯಾಹ್ನ 12 ರ ಹೊತ್ತಿಗೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ…

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದಾರುಣ ಹತ್ಯೆ; ತಂದೆಯನ್ನು ರಾಡ್ ನಿಂದ ಕೊಂದು 30 ಪೀಸ್ ಮಾಡಿ ಬೋರ್ವೆಲ್ ಗೆ ತುರುಕಿದ ಪಾಪಿ ಮಗ

ಬಾಗಲಕೋಟೆ: ದೆಹಲಿಯ ಶ್ರದ್ದಾ ಕೊಲೆಯನ್ನು ಬೆಚ್ಚಿ ಬೀಳಿಸುವಂತ ದಾರುಣವಾದ ಕೊಲೆಗೆ ಕರ್ನಾಟಕ ಬೆಚ್ಚಿ ಬಿದ್ದಿದೆ.ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎಂದು ಆರೋಪಿಸಿ ಮಗನೇ ತಂದೆಯನ್ನು ರಾಡಿನಿಂದ ಹೊಡೆದು ಕೊಂದ ಘಟನೆ ಬಾಗಲಕೋಟೆಯ ಮಧೋಳದಲ್ಲಿ ನಡೆದಿದೆ. ತಂದೆಯನ್ನು ರಾಡಿನಿಂದ ಕೊಂದು…

error: Content is protected !!