dtvkannada

Month: June 2022

ಬೈಕ್ ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಮೃತ್ಯು; ಗಾಡಿ ನಿಲ್ಲಿಸದೇ ಪರಾರಿಯಾದ ಸವಾರ

ಉಪ್ಪಿನಂಗಡಿ: ಅಪರಿಚಿತ ವೃದ್ದನೋರ್ವನಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಪರಾರಿಯಾದ ಘಟನೆ ಉಪ್ಪಿನಂಗಡಿ ಬಸ್ಸು ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ. ರಾತ್ರಿ 10 ಗಂಟೆಯ ಹೊತ್ತಿಗೆ ಅಪರಿಚಿತ ವೃದ್ದನೋರ್ವ ರಸ್ತೆ ದಾಟುತ್ತಿದ್ದಾಗ ಅತೀ ವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದಿದ್ದು…

ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ “ಗಣರಾಜ್ಯ ರಕ್ಷಿಸಿ” ಅಭಿಯಾನದ ಪ್ರಯುಕ್ತ ಕಲ್ಲರ್ಪೆಯಲ್ಲಿ ಕ್ರೀಡಾಕೂಟ

ಪುತ್ತೂರು,ಜೂ‌26 :- “ಗಣರಾಜ್ಯ ರಕ್ಷಿಸಿ” ಅಭಿಯಾನದ ಅಂಗವಾಗಿ ಯುನೈಟೆಡ್ ಕಲ್ಲರ್ಪೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಕಲ್ಲರ್ಪೆ ಮೈದಾನದಲ್ಲಿ ಮೊಹಲ್ಲಾ ಕ್ರೀಡಾಕೂಟ ನಡೆಯಿತು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಂಟ್ಯಾರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ರೀಡಾ ಕೂಟವನ್ನು ಉಧ್ಘಾಟಿಸಿ…

ಸುಳ್ಯ ಪರಿಸರದಲ್ಲಿ ಮತ್ತೆ ಭೂಕಂಪನದ ಅನುಭವ; ಬೆಚ್ಚಿಬಿದ್ದ ಜನತೆ

ಸುಳ್ಯ: ಎರಡು ದಿನಗಳ ಹಿಂದೆಯಷ್ಟೆ ಕೊಡಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಲಘು ಭೂಕಂಪನದಿಂದ ಆತಂಕ ಸೃಷ್ಟಿಸಿದ್ದ ಭೂಮಿ ಮಂಗಳವಾರ ಬೆಳಗ್ಗೆ 7.45 ರ ವೇಳೆಗೆ ಮತ್ತೆ ಕಂಪಿಸಿದೆ. ಸುಳ್ಯ ತಾಲೂಕಿನ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ.…

ಇಂಡಿಯನ್ ಸೋಶಿಯಲ್ ಫೋರಂ ಬುರೈದ ವತಿಯಿಂದ ಸಂಭ್ರಮದ ಸ್ನೇಹ ಸಮ್ಮಿಲನ

ಬುರೈದ: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಬುರೈದ ವತಿಯಿಂದ ಸ್ನೇಹ ಸಮ್ಮಿಲನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 23 ನೇ ಗುರುವಾರ ರಾತ್ರಿ ಬುರೈದದ ಅಲ್-ಸಧೀಮ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಬುರೈದದ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು…

ಕೃಷ್ಣಾಪುರ: ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ; ಪ್ರಕರಣ ದಾಖಲು

ಮಂಗಳೂರು: ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6 ನೇ ಬ್ಲಾಕ್ ಬಳಿ ಸೋಮವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಬಾಲಕನನ್ನು ಕಾಟಿಪಳ್ಳ ನಿವಾಸಿ ಉಮ್ಮರ್ ಎಂಬವರ ಪುತ್ರ ಶಯಾನ್(12) ಎಂದು…

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಆಸಿಪ್ ಆಪತ್ಬಾಂಧವ

ಪುತ್ತೂರು: ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ವಿಷಯ ತಿಳಿದ ಮುಲ್ಕಿ ಮೈಮುನಾ ಪೌಂಡೇಶನ್ ಸ್ಥಾಪಕರಾದ ಆಸಿಫ್ ಆಪತ್ಬಾಂಧವ ರವರು ಸ್ಥಳಕ್ಕೆ ಬಂದು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಪುತ್ತೂರು ತಾಲೂಕಿನ ತಿಂಗಳಾಡಿ ನಿವಾಸಿ ಬಿ.ಫಾತಿಮಾ ಎಂದು…

ಮಾಣಿ: ಹಾಡಹಗಲೇ ಮಹಿಳೆಯ ಕೊಲೆ ಪ್ರಕರಣ; ಆರೋಪಿ ಯುವಕ ಬಂಧನ

ಮಾಣಿ: ಮಹಿಳೆಗೆ ನಡುರಸ್ತೆಯಲ್ಲೇ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ ಸಂಬಂಧ, ಆರೋಪಿ ಯುವಕನನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಟ್ಲ ಮುಡ್ನೂರು ನಿವಾಸಿ ಶ್ರೀಧರ್ ಎಂದು ಗುರುತಿಸಲಾಗಿದೆ. ಮಾಣಿಯ ನೇರಳಕಟ್ಟೆಯಲ್ಲಿ ಶಕುಂತಳ ಎಂಬ ಮಹಿಳೆಯನ್ನು…

ಮಾಣಿಯಲ್ಲಿ ಹಾಡ ಹಗಲೇ ಮಹಿಳೆಯ ಬರ್ಬರ ಕೊಲೆ; ಬೆಚ್ಚಿಬಿದ್ದ ಜನತೆ

ಮಾಣಿ: ಆಕ್ಟೀವಾದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಟ್ಟಾಡಿಸಿಕೊಂಡು ಬಂದ ತಂಡ ಬರ್ಬರವಾಗಿ ಕೊಲೆಗೈದ ಘಟನೆ ಮಾಣಿಯ ಕೊಡಾಜೆ ಬಳಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಕಾಪಿಕಾಡು ದಿವಂಗತ ತ್ಯಾಂಪ ಪೂಜಾರಿ ಮಗಳಾದ ಶಕುಂತಳಾ(36) ಎಂದು ತಿಳಿದು ಬಂದಿದೆ. ಇವರು ಪುತ್ತೂರಿನ ಬಂಟರ ಭವನದ ಬಳಿ…

ಉಪ್ಪಿನಂಗಡಿ: 8 ನೇ ತರಗತಿಯ ವಿಧ್ಯಾರ್ಥಿನಿಯ ಅತ್ಯಾಚಾರ; ಆರೋಪಿ ಬಂಧನ

ಉಪ್ಪಿನಂಗಡಿ: ಕೆಳ ದಿನಗಳ ಹಿಂದೆ ಅಪ್ರಾಪ್ತೆಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್ (21) ಎಂದು ತಿಳಿದು ಬಂದಿದೆ. ಘಟನೆ ವಿವರ:- ಉಪ್ಪಿನಂಗಡಿ ಪೊಲೀಸ್…

ಕಡಬ: ಮುಸ್ಲಿಂ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ; ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲು

ಕಡಬ: ಬೇಳ್ಪಾಡಿ ಎಂಬಲ್ಲಿ ಮುಸ್ಲಿಂ ಕುಟುಂಬದ ಮನೆಗೆ ಬಿಜೆಪಿ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.ತೀವ್ರವಾದ ಹಲ್ಲೆಗೆ ಸಂತ್ರಸ್ತ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಸೋಡ್ತಿ…

error: Content is protected !!