dtvkannada

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಪ್ರತಿಭೋತ್ಸವ ನಿರ್ವಾಹಣಾ ಸಮಿತಿ‌ ರಚನೆ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ – ೨೧ ಇದರ ಪುತ್ತೂರು ಸೆಕ್ಟರ್ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಚೆಯರ್ಮ್ಯಾನ್ ಆಗಿ ಸಿನಾನ್ ಸಖಾಫಿ ಹಸನ್…

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ತಹಶೀಲ್ದಾರ್ ಕಛೇರಿಗೆ ಮಾರ್ಚ್

ಬೆಳ್ತಂಗಡಿ, ಸೆ.25: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕತ್ತರಿ ಹಾಕುವ ನೀತಿಯಾಗಿದ್ದು ಈ ವ್ಯವಸ್ಥೆಯನ್ನು ಜಾರಿಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದು, ಇದನ್ನು ತಕ್ಷಣಾ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಕಛೇರಿಗೆ ಮಾರ್ಚ್…

ಕಾಂಗ್ರೆಸ್ ಸಭೆಯಲ್ಲಿ ಸಂಸದರ ಎದುರೇ ಕುರ್ಚಿ ಎತ್ತಿ ಕಾರ್ಯಕರ್ತರ ಕಿತ್ತಾಟ; ವೀಡಿಯೋ ವೈರಲ್

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣಾ ತಯಾರಿ ಬಗ್ಗೆ ಕಾಂಗ್ರೆಸ್​ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಈ ಸಭೆಯಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಭಾಗವಹಿಸಿದ್ದರು. ಆಗ ಗಲಾಟೆ ಎದ್ದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿಯನ್ನು ಎತ್ತಿಕೊಂಡು ಹೊಡೆದಾಡಿಕೊಂಡಿದ್ದಾರೆ. ಬಳಿಕ ಪೊಲೀಸರು…

ಚಾರ್ಮಾಡಿ ಘಾಟ್​ ಬಳಿ ತೈಲ ಸಾಗಿಸುತ್ತಿದ್ದ ಲಾರಿ ಪಲ್ಟಿ; ಆತಂಕದ ವಾತಾವರಣ ಸೃಷ್ಟಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನ ಆಲೇಖಾನ್ ಬಳಿ 8 ಸಾವಿರ ಲೀಟರ್ ಪೆಟ್ರೋಲ್, 4 ಸಾವಿರ ಲೀಟರ್ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್​ ಒಂದು ಪಲ್ಟಿಯಾಗಿದೆ. ಟ್ಯಾಂಕರ್ ಮಂಗಳೂರಿನಿಂದ ಮಾಗುಂಡಿಗೆ ತೆರಳುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.ಪಲ್ಟಿಯಾದ ಟ್ಯಾಂಕರ್​ನಿಂದ ತೈಲ ಸೋರಿಕೆಯಾಗುತ್ತಿದ್ದು ಸ್ಥಳದಲ್ಲಿ ಆತಂಕದ ವಾತಾವರಣ…

ಹೋಲ್ಡರ್ ಹೋರಾಟ ವ್ಯರ್ಥ; ಗೆಲುವಿನ ಹಾದಿಗೆ ಮರಳಿದ ಪಂಜಾಬ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.  ಇದರೊಂದಿಗೆ ಜೇಸನ್ ಹೋಲ್ಡರ್ (3 ವಿಕೆಟ್ ಹಾಗೂ ಅಜೇಯ 47 ರನ್) ಹೋರಾಟ…

ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ

ಶ್ವಾನ ಪ್ರೀತಿ ಮನುಷ್ಯರಿಗೆ ಬಹಳ ಹೆಚ್ಚು. ನಾಯಿ ಇಷ್ಟಪಡುವ ಜನರು ತುಂಬಾ ಮಂದಿ. ವಿವಿಧ ತಳಿಯ, ವಿವಿಧ ಬಗೆಯ ನಾಯಿಯ ವಿಡಿಯೋಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದು ಕೂಡ ಸಹಜವೇ ಆಗಿದೆ. ಅಂತಹ ಒಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ…

ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು, ಶಾಸಕರು ಈ ಪಿಡುಗಿನ ಬಗ್ಗೆ ಕಾನೂನು ತರಬೇಕು- ಪ್ರಮೋದ್ ಮುತಾಲಿಕ್ ಆಗ್ರಹ

ಕೊಪ್ಪಳ: ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ಮತಾಂತರ ನಡೆಯುತ್ತಿದೆ. ಕ್ರಿಶ್ಚಿಯನ್ ಮತಾಂತರಿಗಳನ್ನು ಹದ್ದುಬಸ್ತಿನಲ್ಲಿಡಬೇಕು. ದಾವಣಗೆರೆಯಲ್ಲಿ ಒಂದುವರೆ ಲಕ್ಷ ಜನ ಲಿಂಗಾಯತರು ಮತಾಂತರವಾಗಿದ್ದಾರೆ. ಕೋಲಾರದಲ್ಲಿ 50 ಸಾವಿರ ಒಕ್ಕಲಿಗರು ಮತಾಂತರವಾಗಿದ್ದಾರೆ. ಬ್ರಾಹ್ಮಣರೂ ಕೂಡಾ ಮತಾಂತರವಾಗುತ್ತಿದ್ದಾರೆ. ಎಲ್ಲ ಜಾತಿಗಳನ್ನು ಮತಾಂತರ ಮಾಡುವ ವ್ಯವಸ್ಥಿತ ಷಡ್ಯಂತ್ರ ಮತ್ತು ಕುತಂತ್ರ…

ಬೇಕಾಬಿಟ್ಟಿ ಟೋಯಿಂಗ್ ಮಾಡುವಂತಿಲ್ಲ; ಸಂಚಾರ ಪೊಲೀಸ್ ವಿಭಾಗ ಖಡಕ್ ಸೂಚನೆ

ಬೆಂಗಳೂರು: ಇತ್ತೀಚಿಗೆ ಟೋಯಿಂಗ್ ಬಗ್ಗೆ ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ವಿಭಾಗದ ಪೊಲೀಸರು ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ. ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು. ಓರ್ವ ASI ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.…

ಜಮೀನಿನಲ್ಲಿ ಮೇಕೆ, ಕುರಿಗಳನ್ನು ಮೇಯಿಸಿದ್ದಕ್ಕೆ ಹಲ್ಲೆ; ಗಂಭೀರ ಗಾಯಗೊಂಡ ವ್ಯಕ್ತಿ ಮೃತ್ಯು

ಚಿಕ್ಕಮಗಳೂರು: ಜಮೀನಿನಲ್ಲಿ ಕುರಿಗಳನ್ನು ಮೇಯಿಸಿದ್ದಕ್ಕೆ ವ್ಯಕ್ತಿ ಮೇಲೆ ಇನ್ನೋರ್ವ ವ್ಯಕ್ತಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬೊಂಬೈಲ್ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಲ್ಲೆಗೊಳಗಾಗಿದ್ದ ಮಂಜುನಾಥ್ (53) ಮೃತ ದುರ್ದೈವಿ, ಬಸಗೋಡು ಗ್ರಾಮದ…

ಕಾಫಿ ಎಸ್ಟೇಟ್’ನಲ್ಲಿ 50ಕ್ಕೂ ಅಧಿಕ ಕಾಡುಕೋಣಗಳು ಪ್ರತ್ಯಕ್ಷ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭೂತನಕಾಡು ಎಂಬಲ್ಲಿ ಕಾಫಿ ಎಸ್ಟೇಟಿಗೆ ಕಾಡು ಕೋಣಗಳ ಹಿಂಡು ನುಗ್ಗಿದೆ. ಭೂತನಕಾಡುವಿನಲ್ಲಿ ಹಿಂಡು ಹಿಂಡು ಕಾಡುಕೋಣಗಳು ಪ್ರತ್ಯಕ್ಷವಾಗಿದೆ. ಒಂದೇ ಕಡೆ ಸುಮಾರು 50ಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿವೆ. ಸಿದ್ದಗಂಗಾ ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿದ್ದು…

error: Content is protected !!